ಎಟಿಎಂನಲ್ಲಿ ಬಳಸಲಾಗುವ ಸುಮಾರು 30 ಲಕ್ಷ ಡೆಬಿಟ್ ಕಾರ್ಡುಗಳಿಗೆ ಭದ್ರತೆಯ ಅಪಾಯ ಎದುರಾಗಿದೆ ಎಂಬ ಅಘಾತಕಾರಿ ಮಾಹಿತಿ ವರದಿ ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಮತ್ತು ಅದರ ಸಹವರ್ತಿ ಬ್ಯಾಂಕುಗಳ ಅಸಂಖ್ಯಾತ ಎಟಿಎಂ ಕಾರ್ಡ್‌ಗಳ ಗುಪ್ತ ಮಾಹಿತಿಯನ್ನು ವಂಚಕರು ದೋಚಿದ್ದಾರೆ ಎಂಬ ಸಂಗತಿ ಬಯಲಾಗುತ್ತಿದ್ದಂತೆಯೇ ಇದೀಗ ಎಟಿಎಂನಲ್ಲಿ ಬಳಸಲಾಗುವ ಸುಮಾರು 30 ಲಕ್ಷ ಡೆಬಿಟ್ ಕಾರ್ಡುಗಳಿಗೆ ಭದ್ರತೆಯ ಅಪಾಯ ಎದುರಾಗಿದೆ ಎಂಬ ಅಘಾತಕಾರಿ ಮಾಹಿತಿ ವರದಿ ಆಗಿದೆ.
ಎಟಿಎಂ ವಂಚನೆಯಿಂದಾಗಿ ಭದ್ರತೆಯ ಅಪಾಯ ಎದುರಾಗಿರುವುದರಿಂದ ಎಸ್‌ಬಿಐ ಈಗಾಗಲೇ ಸುಮಾರು ಆರು ಲಕ್ಷ ಎಟಿಎಂ ಕಾರ್ಡ್‌ಗಳನ್ನು ಬ್ಲಾಕ್ ಮಾಡಿ, ಅವುಗಳಿಗೆ ಬದಲಿಯಾಗಿ ಹೊಸ ಕಾರ್ಡುಗಳನ್ನು ನೀಡಲಾಗುವುದು ಎಂದು ಹೇಳಿದೆ.

ಬ್ಯಾಂಕಿಂಗ್ ತಜ್ಞರ ಪ್ರಕಾರ ದೇಶದ ಇತರ ಹಲವು ಬ್ಯಾಂಕುಗಳ ಅಸಂಖ್ಯಾತ ಎಟಿಎಂ/ಡೆಬಿಟ್ ಕಾರ್ಡುಗಳಿಗೂ ಕೂಡ ಭದ್ರತಾ ಅಪಾಯ ಎದುರಾಗಿದೆ.
ಗ್ರಾಹಕರು ಎಟಿಎಂನಲ್ಲಿ ಡೆಬಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದಂತೆಯೇ ಅವುಗಳ ಪಿನ್ ಇತ್ಯಾದಿ ರಹಸ್ಯ ಮಾಹಿತಿಗಳನ್ನು ಕದಿಯುವ ಮಾಲ್‌ವೇರ್ ತಂತ್ರಾಂಶ ತನ್ನಿಂತಾನೇ ಸಕ್ರಿಯವಾಗುವುದನ್ನು ಶಂಕಿಸಲಾಗಿದೆ.
ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ, ಯೆಸ್ ಮತ್ತು ಎಕ್ಸಿಸ್ ಬ್ಯಾಂಕುಗಳ ಡೆಬಿಟ್ ಕಾರ್ಡುಗಳ ಕಾರ್ಯನಿರ್ವಹಣೆ ಅಷ್ಟೊಂದು ಸುರಕ್ಷಿತವಲ್ಲ ಎಂದು ಜನರು ಹೇಳಿದ್ದಾರೆ.
ಈಗ ಹಲವು ಖಾಸಗಿ ಬ್ಯಾಂಕುಗಳು ತಜ್ಞರ ಸಲಹೆ-ಸೇವೆಯನ್ನು ಪಡೆದುಕೊಂಡು ಎಟಿಎಂ ಜಾಲವನ್ನು ಪರೀಕ್ಷಿಸುತ್ತಿವೆ. ಡೆಬಿಟ್ ಕಾರ್ಡುಗಳ ಬಳಕೆಯಲ್ಲಿ ಯಾವ ಬಗೆಯ ಅಪಾಯಗಳು ಎದುರಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ವರದಿಯಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!



Click it and Unblock the Notifications