ದೇಶದ ಸಾರ್ವಜನಿಕ ವಲಯದ ಪ್ರಮುಖ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ 2017-18 ರಲ್ಲಿ ಶೇ. 7ರಷ್ಟು ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡಲಿದೆ.
ದೇಶದ ಸಾರ್ವಜನಿಕ ವಲಯದ ಪ್ರಮುಖ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ 2017-18 ರಲ್ಲಿ ಶೇ. 7ರಷ್ಟು ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡಲಿದೆ.
ಪ್ರಸ್ತುತ ಬಿಎಸ್ಎನ್ಎಲ್ ದೇಶದಾದ್ಯಂತ 2,09,996 ನೌಕರರನ್ನು ಹೊಂದಿದ್ದು, 2017 ರ ಏಪ್ರಿಲ್ ತಿಂಗಳಲ್ಲಿ 1,96,162ಕ್ಕೆ ಇಳಿಮುಖವಾಗಲಿದೆ. ಅಂದರೆ ಹೆಚ್ಚು ಕಡಿಮೆ 13,834 ಹುದ್ದೆಗಳನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ನಿವೃತ್ತಿಯ ಅಂಚಿಗೆ ನೌಕರರ ಸಮೀಪಿಸಿರುವುದರಿಂದ ಬರುವ ಸಾಲಿನಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಾಗಲಿವೆ. ಹೀಗಾಗಿ ಬಿಎಸ್ಎನ್ಎಲ್ ಸಂಸ್ಥೆಗೆ ಇದು ಉದ್ಯೋಗ ಕಡಿತದ ಸಮಸ್ಯೆ ಆಗದು ಎಂದು ಸಮಜಾಯಿಸಿದೆ.

ಸರಾಸರಿ ಸುಮಾರು ಶೇ. 10ರಷ್ಟು ಸಿಬ್ಬಂದಿಗಳು ಪ್ರತಿ ವರ್ಷ ನಿವೃತ್ತರಾಗುತ್ತಿದ್ದಾರೆ. ಆದರೆ ಇದಕ್ಕೆ ಬದಲಾಗಿ ಸಂಸ್ಥೆ ಉದ್ಯೋಗಿಗಳನ್ನು ನೇಮಕ ಮಾಡುತ್ತಿಲ್ಲ. ಹೀಗಾಗಿ ಸಂಸ್ಥೆಗೆ ಸಾಕಷ್ಟು ಉಳಿತಾಯ ಆಗುತ್ತಿದೆ ಎಂದು ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಅನುಪಮ್ ಶ್ರೀವಾಸ್ತವ್ ತಿಳಿಸಿದ್ದರು.
ಉದ್ಯೋಗಿಗಳ ವೆಚ್ಚದಲ್ಲಿ ಉಳಿತಾಯ, ಟವರ್, ಸ್ಪೆಕ್ಟ್ರಮ್ ಆಸ್ತಿಗಳ ಹಂಚಿಕೆ, ಅಭಿವೃದ್ಧಿ ಯೋಜನೆಗಳ ಮೂಲಕ ಸಂಸ್ಥೆ 2018-19ರ ಸಂದರ್ಭದಲ್ಲಿ ಒಂದು ಲಾಭದಾಯಕ ಕಂಪನಿಯಾಗಿ ನಿಲ್ಲಲಿದೆ. ಬಿಎಸ್ಎನ್ಎಲ್ ಟೆಲಿಕಾಂ ರಂಗದ ಸಂಸ್ಥೆಗಳಿಗೆ ಹೋಲಿಸಿದರೆ ತನ್ನ ವಾರ್ಷಿಕ ಆದಾಯದಲ್ಲಿ ಶೇ. 50ಕ್ಕಿಂತ ಹೆಚ್ಚಿನ ಹಣವನ್ನು ತನ್ನ ಉದ್ಯೋಗಿಗಳಿಗೆ ಸಂಬಳ ರೂಪದಲ್ಲಿ ಪಾವತಿಸುತ್ತಿದೆ. ದೇಶದ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಆಂದ್ರ ಪ್ರದೇಶದಲ್ಲಿ ಅತಿಹೆಚ್ಚು ಉದ್ಯೋಗಗಳಿದ್ದಾರೆ.


Click it and Unblock the Notifications