ಎಬಿಸಿ ನ್ಯೂಸ್/ವಾಷಿಂಗ್ಟನ್ ಪೋಸ್ಟ್ ಟ್ರಾಕಿಂಗ್ ಸಮೀಕ್ಷೆಯಲ್ಲಿ ಹಿಲರಿ ಕ್ಲಿಂಟನ್ ಶೇ. 46 ಹಾಗೂ ಟ್ರಂಪ್ ಶೇ. 45 ಮತ ಪಡೆದುಕೊಂಡಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಜಾಗತಿಕವಾಗಿ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿರುವ ಅಂತರಾಷ್ಟ್ರೀಯ ವಿಚಾರ. ಹಿಲರಿ ಕ್ಲಿಂಟನ್ ಹಾಗೂ ಡೊನಾಲ್ಡ್ ಟ್ರಂಪ್ ಬದ್ದ ವೈರಿಗಳಂತೆ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಅಂಗಳದಲ್ಲಿ ಹೋರಾಡುತ್ತಿದ್ದಾರೆ.
ಎಬಿಸಿ ನ್ಯೂಸ್/ವಾಷಿಂಗ್ಟನ್ ಪೋಸ್ಟ್ ಟ್ರಾಕಿಂಗ್ ಸಮೀಕ್ಷೆಯಲ್ಲಿ ಹಿಲರಿ ಕ್ಲಿಂಟನ್ ಶೇ. 46 ಹಾಗೂ ಟ್ರಂಪ್ ಶೇ. 45 ಮತ ಪಡೆದುಕೊಂಡಿದ್ದಾರೆ. ಅಂದರೆ ಕೇವಲ ಶೇ. 1ರಷ್ಟು ಮಾತ್ರ ಹಿಲರಿ ಮುನ್ನಡೆಯಲ್ಲಿದ್ದಾರೆ. ಅಮೆರಿಕಾದ ಹೊಸ ಅಧ್ಯಕ್ಷರ ಆಯ್ಕೆಯಿಂದ ಭಾರತದ ಕೈಗಾರಿಕೆಗಳಿಗೆ ಮತ್ತು ಕಂಪನಿಗಳಿಗೆ ಹೆಚ್ಚು ಪ್ರಮಾಣದ ವ್ಯತ್ಯಾಸ ಹಾಗೂ ವ್ಯತಿರಿಕ್ತ ಪರಿಣಾಮ ಆಗಬಹುದು ಇಲ್ಲವೇ ಆಗದೆ ಇರಬಹುದು.
ಆದರೆ ಭಾರತದ ಮಾಹಿತಿ ತಂತ್ರಜ್ಞಾನ(ಐಟಿ) ಕ್ಷೇತ್ರದ ಮೇಲಂತೂ ಭಾರಿ ಪರಿಣಾಮ ಬೀರಲಿದೆ. ಅದರಲ್ಲೂ ಟ್ರಂಪ್ ಅಧ್ಯಕ್ಷರಾದರೆ ಭಾರತದ ಐಟಿ ರಂಗದ ಮೇಲೆ ಕಟ್ಟ ಪರಿಣಾಮಗಳು ಬೀರಲಿದೆಯೆ? ಹಾಗಿದ್ದರೆ ಯಾಕೆ ಎನ್ನುವುದನ್ನು ನೋಡೋಣ...
1. H1-B ವೀಸಾ ಸಮಸ್ಯೆ
H1-B ವೀಸಾದ ಅಡಿಯಲ್ಲಿ ಪ್ರತಿ ವರ್ಷ ಭಾರತದ ಐಟಿ ಇಂಡಸ್ಟ್ರಿ ಲಕ್ಷ ಲಕ್ಷ ಉದ್ಯೋಗಿಗಳನ್ನು ಯುಎಸ್ ಗೆ ಕಳುಹಿಸಿಕೊಡುತ್ತದೆ. ಅಲ್ಲಿ ತಮ್ಮ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿ ಹಿಂದಿರುಗುತ್ತಾರೆ. ಇದರಿಂದಾಗಿ ಅಮೆರಿಕನ್ನರ ಉದ್ಯೋಗದ ಅವಕಾಶಗಳಿಗೆ ಹಾನಿ ಮಾಡಿದಂತಾಗುತ್ತದೆ ಎನ್ನುವುದು ಡೊನಾಲ್ಡ್ ಟ್ರಂಪ್ ಅಭಿಪ್ರಾಯವಾಗಿದೆ. H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಕೆಲಸಗಾರರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಇತ್ತೀಚಿನ ದಿನಗಳಲ್ಲಿ ಚರ್ಚೆಯಾಗುತ್ತಿರುವ ಸಂಗತಿ ಅದರಲ್ಲೂ ಭಾರತೀಯ ತಜ್ಞ ಉದ್ಯೋಗಿಗಳು ಯುಸ್ ನಲ್ಲಿ ಹೆಚ್ಚಿನ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿರುವುದರಿಂದಾಗಿ ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಂಡರು. ಹೀಗಾಗಿ ಟ್ರಂಪ್ ಅಧ್ಯಕ್ಷರಾದರೆ ಭಾರತೀಯರಿಗೆ H1-B ವೀಸಾಗಳನ್ನು ಕೊಡುವುದನ್ನು ನಿಲ್ಲಿಸುವ ಸಾಧ್ಯತೆ ಅಲ್ಲಗಳೆಯಲು ಆಗುವುದಿಲ್ಲ.
2. ಸಮಸ್ಯೆ ಏನು?
ಈ ವರ್ಷದ ಪ್ರಾರಂಭದಲ್ಲಿ, ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ ನಂತರ ಭಾರತೀಯ ಕಂಪನಿಗಳಿಂದ ಅಗ್ಗದ ವಲಸೆ ನೌಕರರನ್ನು ನೇಮಿಸಿಕೊಳ್ಳುವುದರ ವಿರುದ್ದ ಯುಎಸ್ ನಲ್ಲಿ ಮೊಕದ್ದಮೆಗಳನ್ನು ಹೂಡಲಾಯಿತು.
ವಾಲ್ಟ್ ಡಿಸ್ನಿ ವರ್ಲ್ಡ್ ನಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡಿ ಈಗ ವಜಾಗೊಂಡಿರುವ ದೇನಾ ಮೂರ್ "I don't have to be angry or cause drama," ಎಂದು ನ್ಯೂಯಾರ್ಕ್ ಟೈಮ್ಸ್ ಗೆ ಹೇಳಿದ್ದಾರೆ.
H1-B ವೀಸಾ ಸಮಸ್ಯೆಯಿಂದಾಗಿ ವಿದೇಶಿಗರು ಯುಎಸ್ ನಲ್ಲಿ ಕೆಲಸ ಪಡೆದು ಶ್ರೀಮಂತರಾಗುತ್ತಿದ್ದು, ಇದರಿಂದಾಗಿ ಅಮೆರಿಕನ್ನರನ್ನು ಬಡವರಾಗುತ್ತಿದ್ದಾರೆ ಎಂದು ವಾಲ್ಟ್ ಡಿಸ್ನಿ ವರ್ಲ್ಡ್ ನಲ್ಲಿ ಕೆಲಸ ಕಳೆದುಕೊಂಡ ಹಿನ್ನಲೆಯಲ್ಲಿ ಹೇಳಲಾಗಿದೆ.
3. H1-B ವೀಸಾ ಕುರಿತು ಟ್ರಂಪ್ ಏನನ್ನುತಾರೆ?
H1-B ತುಂಬಾ ಒಳ್ಳೆಯದು ಎನ್ನುವುದು ನನಗೆ ಗೊತ್ತು. ಇದು ಕೆಲಸಗಾರರಿಗೆ ತುಂಬಾ ತುಂಬಾ ಕೆಟ್ಟದು. ಅದಕ್ಕಾಗಿ ಇದನ್ನು ನಾವು ಇಟ್ಟುಕೊಳ್ಳಬಾರದು ಎಂದು ಡೊನಾಲ್ಡ್ ಟ್ರಂಪ್ ಮಿಯಾಮಿ ಯುನಿವರ್ಸಿಟಿಯ ರಿಪಬ್ಲಿಕನ್ ಸಂವಾದದಲ್ಲಿ ಹೇಳಿದ್ದರು.
H1-B ವೀಸಾ ಉದ್ಯೋಗಿಗಳಿಗೆ ಒಳ್ಳೆದು ಆದರೆ ವಾಸ್ತವದಲ್ಲಿ ಯುಎಸ್ ಉದ್ಯೋಗಿಗಳಿಗೆ ಇದು ಪ್ರಯೋಜನಕಾರಿಯಲ್ಲ ಎಂದು ನಂತರ H1-B ವೀಸಾ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿದರು.
ನಮಗೆ ಈ ದೇಶದಲ್ಲಿ ಅತ್ಯಂತ ನುರಿತ ಜನರ ಅಗತ್ಯವಿದೆ. ನಾವು ಇದನ್ನು ಮಾಡಲು ಸಾಧ್ಯವಾದರೆ ನಮ್ಮ ಉದ್ಯೋಗವನ್ನು ಯಾರು ಪಡೆಯಲು ಸಾಧ್ಯವಿಲ್ಲ. ನಾನು ಇದನ್ನು ಬದಲಾಯಿಸುತ್ತೇನೆ. ನಮ್ಮ ದೇಶದಲ್ಲಿ ತುಂಬಾ ಪ್ರತಿಭಾವಂತ ಜನರಿದ್ದಾರೆ ಎಂದು ಟ್ರಂಪ್ ಡೆಟ್ರಾಯಿಟ್ ನಲ್ಲಿನ ಫಾಕ್ಸ್ ನ್ಯೂಸ್ ರಿಪಬ್ಲಿಕನ್ ಸಂವಾದದಲ್ಲಿ ಅಭಿಪ್ರಾಯ ಪಟ್ಟಿದ್ದರು.
4. ಸುಳ್ಳು ಎಲ್ಲೆಡೆ ಇರುವ ಸಮಸ್ಯೆ
ಆದಾಗ್ಯೂ, ಐಟಿ ರಂಗದಲ್ಲಿ ಎಲ್ಲೆಡೆ ಇರುವ ಸುಳ್ಳೆ ದೊಡ್ಡ ಸಮಸ್ಯೆಯಾಗಿದೆ. ಐಟಿ ಕಂಪನಿಗಳ ಈ ತ್ರೈಮಾಸಿಕದ ಫಲಿತಾಂಶ ತೀರಾ ಕಳಪೆ ಮಟ್ಟದ್ದಾಗಿತ್ತು. ಬಹುತೇಕ ಐಟಿ ಕಂಪನಿಗಳು ಮಂದಗತಿಯ ಚಲನೆಯನ್ನು ಸಾಗುತ್ತಿರುವುದನ್ನು ಅಂದಾಜು ಮಾಡಲಾಗಿದೆ. ಅಲ್ಲದೇ ಇನ್ಫೋಸಿಸ್ ನಂತಹ ಅನೇಕ ಕಂಪನಿಗಳು ಮಾರ್ಗದರ್ಶನದ ಆದಾಯವನ್ನು ಕಡಿತಗೊಳಿಸಿವೆ.
ಬಿಎಫ್ಎಸ್ಐ ಹಾಗೂ ಎನರ್ಜಿ ನಿಜವಾದ ಸಮಸ್ಯೆಯಾಗಿದ್ದು, ಇವು ಕೆಲವೊಮ್ಮೆ ಮಾತ್ರ ಉತ್ತಮ ಪ್ರದರ್ಶನ ನೀಡುತ್ತವೆ. ಇಂತಹ ಹಲವು ಸಂಗತಿಗಳು ಉದ್ಯಮಕ್ಕೆ ಭಾರೀ ನಷ್ಟವನ್ನುಂಟು ಮಾಡುತ್ತಿವೆ. ಬ್ಲೂಮ್ ಬರ್ಗ್ ನ ಒಂದು ಲೇಖನದಲ್ಲಿ ಇದು ಭಾರತೀಯ ಐಟಿ ಕಂಪನಿಗಳಿಗೆ ಮರಣದಂಡನೆಯ ಗಂಟೆ ಎಂದು ವರದಿ ಮಾಡಿತ್ತು. ಈ ಹಂತದಲ್ಲಿ ಇದನ್ನು ಕೇವಲ ಸತ್ಯ ತಿಳಿಸುವ ಅಥವಾ ವರದಿ ಉತ್ಪ್ರೇಕ್ಷೆ ಎಂದು ಹೇಳುವುದು ಕಷ್ಟ.
5. ವೇಗದ ತಂತ್ರಜ್ಞಾನ ಸ್ವಾಗತಿಸಬೇಕು
ಆದ್ದರಿಂದ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಯಾರು ಗೆಲ್ಲುತ್ತಾರೆ ಎನ್ನುವುದು ವಿಷಯವಲ್ಲದಿದ್ದರೂ, ಈ ಹಲವು ಕಾರಣಗಳನ್ನು ಗಮನಿಸಿದರೆ ಭಾರತೀಯ ಐಟಿ ಉದ್ಯಮಕ್ಕೆ ಬಹುಶಃ ಕಠಿಣ ಸಮಯ ಎಂದೇ ಹೇಳಬೇಕಾಗುತ್ತದೆ.
ಪ್ರಸ್ತುತ ಇರುವ ಕುಸಿತ/ಇಳಿಮುಖ ಚಲನೆ ಭಾರತೀಯ ತಂತ್ರಜ್ಞಾನ ಉದ್ಯಮವನ್ನು ತಡೆಯಲು ಸಾಧ್ಯವಿಲ್ಲ. ಸೋಷಿಯಲ್, ಮೊಬೈಲ್, ಅನಾಲಿಟಿಕ್ಸ್ ಮತ್ತು ಕ್ಲೌಡ್ ಆಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ ಎಂದು ಅಂಕಣಕಾರರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications