ಪರಿಣಾಮಕಾರಿ ಜಾರಿಗಾಗಿ ಜಿಎಸ್‌ಟಿ ಮಂಡಳಿ ಸಭೆ

ಏಪ್ರಿಲ್‌ 1, 2017ರಿಂದ ಜಿಎಸ್‌ಟಿ ಜಾರಿ ತರುವ ಹಿನ್ನೆಲೆಯಲ್ಲಿ ಜಿಎಸ್‌ಟಿ ಮಂಡಳಿ ಗುರುವಾರದಿಂದ ಎರಡು ದಿನಗಳ ಕಾಲ ಸರಕು ಮತ್ತು ಸೇವಾ ತೆರಿಗೆ, ಹೆಚ್ಚುವರಿ ತೆರಿಗೆ ವಿಧಿಸುವಿಕೆ ಮತ್ತು ಇತರೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸುವ ಸಲುವಾಗಿ ಸ

ಏಪ್ರಿಲ್‌ 1, 2017ರಿಂದ ಜಿಎಸ್‌ಟಿ ಜಾರಿ ತರುವ ಹಿನ್ನೆಲೆಯಲ್ಲಿ ಜಿಎಸ್‌ಟಿ ಮಂಡಳಿ ಗುರುವಾರದಿಂದ ಎರಡು ದಿನಗಳ ಕಾಲ ಸರಕು ಮತ್ತು ಸೇವಾ ತೆರಿಗೆ, ಹೆಚ್ಚುವರಿ ತೆರಿಗೆ ವಿಧಿಸುವಿಕೆ ಮತ್ತು ಇತರೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸುವ ಸಲುವಾಗಿ ಸಭೆ ನಡೆಸಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಕೇಂದ್ರ ಸರ್ಕಾರ ನಾಲ್ಕು ಹಂತದ ತೆರಿಗೆ ವ್ಯವಸ್ಥೆ(ಶೇ 8, 12,18 ಮತ್ತು 26) ಜಾರಿಗೆ ತರಲು ಇಚ್ಛಿಸುವ ತನ್ನ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲು ಜಿಎಸ್ಟಿ ಮಂಡಳಿಯಲ್ಲಿ ಒತ್ತಾಯಿಸಲಿದೆ ಎನ್ನಲಾಗಿದೆ.

ಹೆಚ್ಚು ತೆರಿಗೆ(ಸೆಸ್) ವಿಧಿಸುವ ಬಗ್ಗೆ ಇರುವ ಭಿನ್ನಾಭಿಪ್ರಾಯಗಳನ್ನು ಈ ಮಿಟಿಂಗ್ ನಲ್ಲಿ ಬಗೆಹರಿಸುವ ಸಾಧ್ಯತೆ ಇದೆ. ಆದರೂ ಕೆಲ ರಾಜ್ಯಗಳು ಈ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಎದುರಾಗುವ ಎಲ್ಲ ಸಮಸ್ಯೆಗಳನ್ನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಎಲ್ಲರ ಸಹಮತದೊಂದಿಗೆ ಪರಿಹರಿಸಬೇಕಾಗಿದೆ.

ಕೇಂದ್ರ ಸರ್ಕಾರ ಸಿಗರೇಟ್, ತಂಬಾಕು, ಮದ್ಯ ಮತ್ತು ಇನ್ನಿತರ ಐಷಾರಾಮಿಸರಕುಗಳ ಮೇಲೆ ಜಿಎಸ್‌ಟಿ ಅಲ್ಲದೆ ಹೆಚ್ಚುವರಿ ತೆರಿಗೆ ವಿಧಿಸುವ ಉದ್ದೇಶ ಹೊಂದಿದೆ. ಇಂತಹ ಸರಕುಗಳಿಂದ ಸಂಗ್ರಹವಾಗುವ ಹಣವನ್ನು ರಾಜ್ಯಗಳ ಆದಾಯ ನಷ್ಟ ಭರ್ತಿಗೆ ಉಪಯೋಗಿಸಲು ನಿರ್ಧರಿಸಿದೆ.

ಪರಿಣಾಮಕಾರಿ ಜಾರಿಗಾಗಿ ಜಿಎಸ್‌ಟಿ ಮಂಡಳಿ ಸಭೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+