For Quick Alerts
ALLOW NOTIFICATIONS  
For Daily Alerts

ದೇಶವ್ಯಾಪಿ ಪೆಟ್ರೋಲ್ ವಿತರಕರ ಮುಷ್ಕರ?

ನವೆಂಬರ್ 15ರಂದು ದೇಶವ್ಯಾಪಿ ಮುಷ್ಕರ ಮಾಡುತ್ತೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಎಚ್ಚರಿಕೆಯನ್ನು ನೀಡಿದ್ದಾರೆ.

By Siddu
|

ನವೆಂಬರ್ 15ರಂದು ದೇಶವ್ಯಾಪಿ ಮುಷ್ಕರ ಮಾಡುತ್ತೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಎಚ್ಚರಿಕೆಯನ್ನು ನೀಡಿದ್ದಾರೆ.

ಪೆಟ್ರೋಲ್ ವಿತರಕರ ಕಮಿಷನ್ ಏರಿಕೆ ಮಾಡದೇ ಇರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ತೈಲ ಮಾರಾಟ ಹಾಗೂ ಖರೀದಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಸರ್ಕಾರಿ ಒಡೆತನದ ತೈಲ ಮಾರಾಟ ಕಂಪನಿಗಳಿಂದ ತೈಲ ಖರೀದಿ ಮಾಡದೆ ಇರಲು ನಿರ್ಧರಿಸಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲಿದ್ದಾರೆ.

ದೇಶದಾದ್ಯಂತ ಒಟ್ಟು 54,000 ಪೆಟ್ರೋಲ್‌ ಬಂಕ್‌ಗಳು ಮುಷ್ಕರದಲ್ಲಿ ಭಾಗವಹಿಸಲಿವೆ ಎಂದು ಭಾರತೀಯ ಪೆಟ್ರೋಲಿಯಂ ವಿತರಕರ ಒಕ್ಕೂಟದ ಜಂಟಿ ಕಾರ್ಯದರ್ಶಿ ರಾಜೀವ್ ಅಮರರಾಮ್ ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೈಲ ವಿತರಣೆ ಮಾಡಲಾಗುವುದು. ಆದರೆ ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಪೆಟ್ರೋಲ್‌ ವಿತರಣೆ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ದೇಶವ್ಯಾಪಿ ಪೆಟ್ರೋಲ್ ವಿತರಕರ ಮುಷ್ಕರ?

Read more about: strike ಮುಷ್ಕರ
English summary

Petrol pumps may observe nationwide strike on Nov 15

Country’s petroleum dealers, who are on a two-day no-purchase strike since yesterday, have threatened to go on a full-fledged strike on November 15 to press for their demand to increase commission.
Story first published: Saturday, November 5, 2016, 14:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X