83 ಲೈಟ್ ಕಾಂಬ್ಯಾಟ್ ಏರ್ ಕ್ರಾಪ್ಟ್, 15 ಲೈಟ್ ಕಾಂಬ್ಯಾಟ್ ಹೆಲಿಕ್ಯಾಪ್ಟರ್ ಮತ್ತು 464 T-90 ಯುದ್ದ ಟ್ಯಾಂಕ್ ಗಳನ್ನು ಭಾರತದಲ್ಲೇ ನಿರ್ಮಾಣ ಮಾಡುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
83 ಲೈಟ್ ಕಾಂಬ್ಯಾಟ್ ಏರ್ ಕ್ರಾಪ್ಟ್, 15 ಲೈಟ್ ಕಾಂಬ್ಯಾಟ್ ಹೆಲಿಕ್ಯಾಪ್ಟರ್ ಮತ್ತು 464 T-90 ಯುದ್ದ ಟ್ಯಾಂಕ್ ಗಳನ್ನು ಭಾರತದಲ್ಲೇ ನಿರ್ಮಾಣ ಮಾಡುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಪ್ರಧಾನಿ ಮೋದಿ ಅವರ ಆಶಯದಂತೆ ಮಿಲಿಟರಿ ವಿಭಾಗವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಒಟ್ಟು ರೂ. 67,000 ಕೋಟಿ ಖರ್ಚು ಮಾಡಲಿದೆ.
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ಈಗಾಗಲೇ 40 ವಿಮಾನಗಳನ್ನು ತಯಾರಿಸುವ ಆದೇಶವನ್ನು ಪಡೆದಿದ್ದು, ಈ ವರ್ಷದ ಅಂತ್ಯದ ಒಳಗಾಗಿ ಭಾರತೀಯ ವಾಯುಪಡೆಗೆ ತಲುಪಿಸಬೇಕಿದೆ.
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ 83 ಲೈಟ್ ಕಾಂಬ್ಯಾಟ್ ಏರ್ ಕ್ರಾಪ್ಟ್, 15 ಲೈಟ್ ಕಾಂಬ್ಯಾಟ್ ಹೆಲಿಕ್ಯಾಪ್ಟರ್ ಮತ್ತು 464 T-90 ಯುದ್ದ ಟ್ಯಾಂಕ್ ಗಳನ್ನು ನಿರ್ಮಿಸುವ ಜವಾಬ್ಧಾರಿಯನ್ನು ಕೇಂದ್ರ ಸರ್ಕಾರ ನೀಡಿದೆ. ಪ್ರಸ್ತುತ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಾರ್ಷಿಕ 8 ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಇದನ್ನು 16ಕ್ಕ ಏರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎನ್ನಲಾಗಿದೆ.
ಇವತ್ತಿನ ಹೊಸ ಒಪ್ಪಂದಕ್ಕೆ ಅನುಗುಣವಾಗಿ ಹೆಚ್ಎಎಲ್ ಒಟ್ಟು 50 ಸಾವಿರ ಕೋಟಿ ಮೌಲ್ಯದ ಯುದ್ಧ ವಿಮಾನಗಳನ್ನು ನಿರ್ಮಾಣ ಮಾಡುತ್ತಿದೆ. 2, 911 ಕೋಟಿ ಮೊತ್ತದಲ್ಲಿ ಹೆಲಿಕಾಪ್ಟರ್ ಹಾಗೂ 13, 448 ಕೋಟಿ ವೆಚ್ಚದ ಯುದ್ಧ ಟ್ಯಾಂಕ್ ಗಳನ್ನು ಜತೆಗೆ ಭಾರತೀಯ ಸೇನೆ ಹಾಗೂ ವಾಯುಸೇನೆಗಳು ನಿರ್ಮಾಣ ಮಾಡುತ್ತಿವೆ ಎನ್ನಲಾಗಿದೆ. ಇದರೊಂದಿಗೆ ಚಾಲಕ ರಹಿತ 598 ಡ್ರೋಣ್ ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ.



Click it and Unblock the Notifications