ಚಿನ್ನದ ಬೇಡಿಕೆ 28% ಕುಸಿದಿದೆ: ವರ್ಲ್ಡ್ ಗೋಲ್ಡ್ ಕೌನ್ಸಿಲ್

ಭಾರತದಲ್ಲಿ 2016ರ ಮೂರನೇ ತ್ರೈಮಾಸಿಕದಲ್ಲಿ ಬೆಲೆಗಳ ಹೆಚ್ಚಳದಿಂದಾಗಿ ಚಿನ್ನದ ಬೇಡಿಕೆ ಶೇ. 28ರಷ್ಟು ಕುಸಿದಿದೆ.

ಭಾರತದಲ್ಲಿ 2016ರ ಮೂರನೇ ತ್ರೈಮಾಸಿಕದಲ್ಲಿ ಬೆಲೆಗಳ ಹೆಚ್ಚಳದಿಂದಾಗಿ ಚಿನ್ನದ ಬೇಡಿಕೆ ಶೇ. 28ರಷ್ಟು ಕುಸಿದಿದೆ.

2016ರ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕ ಚಿನ್ನದ ಬೇಡಿಕೆ 993 ಟನ್ ತಲುಪಿತು. ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 10ರಷ್ಟು ಇಳಿಕೆ ಕಂಡಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ಇತ್ತಿಚಿನ ವರದಿಯಲ್ಲಿ ತಿಳಿಸಿದೆ.

ಮೂರನೇ ತ್ರೈಮಾಸಿಕದಲ್ಲಿ ಒಟ್ಟು ಮೈನಿಂಗ್ ಪೂರೈಕೆಯಲ್ಲಿ 832 ಟನ್ ಗಳಷ್ಟು (ಶೇ. 4) ಕುಸಿತ ಕಂಡಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 866 ಟನ್ ಗಳಷ್ಟಿತ್ತು. ಭಾರತದಲ್ಲಿನ ಹೆಚ್ಚು ಕಟ್ಟುನಿಟ್ಟಾದ ಸರ್ಕಾರದ ನೀತಿಗಳು, ಹೆಚ್ಚಿನ ಚಿನ್ನದ ಬೆಲೆ ಮತ್ತು ಗ್ರಾಮೀಣ ಆದಾಯ ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

ಜಾಗತಿಕವಾಗಿ ಚಿನ್ನಾಭರಣಗಳ ಬೇಡಿಕೆ ಶೇ. 21ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಸಾಲಿನಲ್ಲಿದ್ದ 622 ಟನ್ ಪ್ರಮಾಣ ಈ ಬಾರಿ 493 ಟನ್ ನಷ್ಟಿದೆ.

ಚಿನ್ನದ ಬೇಡಿಕೆ 28% ಕುಸಿದಿದೆ: ವರ್ಲ್ಡ್ ಗೋಲ್ಡ್ ಕೌನ್ಸಿಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+