ಸೆನ್ಸೆಕ್ಸ್ 1200 ಅಂಕಗಳ ಭಾರೀ ಕುಸಿತ ಕಂಡಿದ್ದು, ನಿಪ್ಟಿ 360 ಅಂಕಗಳಷ್ಟು ಕುಸಿತ ಕಂಡಿದೆ.
ಜಾಗತಿಕ ಮತ್ತು ಭಾರತೀಯ ಷೇರು ಮಾರುಕಟ್ಟೆಗೆ ಇಂದು ಕರಾಳ ದಿನ. ಅಮೆರಿಕಾ ಅಧ್ಯಕ್ಷೀಯ ಆಕಾಂಕ್ಷಿ ಟ್ರಂಪ್ ಗೆಲುವಿನ ಲೆಕ್ಕಾಚಾರ ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮವನ್ನೇ ಉಂಟು ಮಾಡಿದೆ.
ಸೆನ್ಸೆಕ್ಸ್ 1200 ಅಂಕಗಳ ಭಾರೀ ಕುಸಿತ ಕಂಡಿದ್ದು, ನಿಪ್ಟಿ 360 ಅಂಕಗಳಷ್ಟು ಕುಸಿತ ಕಂಡಿದೆ. ವಿಸ್ತಾರ ಮಾರುಕಟ್ಟೆಯಲ್ಲಿ ಬಿಎಸ್ ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕೂಡ ಕುಸಿತಕ್ಕೆ ಒಳಗಾಗಿವೆ.
ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರ, ಭಯೋತ್ಪಾಧನೆ ತಡೆಗಾಗಿ ಕೇಂದ್ರ ಸರ್ಕಾರ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿ ಬೆನ್ನಲ್ಲಿಯೇ ಷೇರುಪೇಟೆ ವಹಿವಾಟಿನಲ್ಲಿ ಭಾರೀ ಕುಸಿತ ಕಂಡುಬಂದಿದೆ.
ಅಮೆರಿಕಾ ಡಾಲರ್ ಮೌಲ್ಯ ಏಷ್ಯಾ ಷೇರುಪೇಟೆಯಲ್ಲಿ ಕುಸಿದಿದ್ದು, ಷೇರುಪೇಟೆಯ ತಲ್ಲಣಕ್ಕೆ ಕಾರಣವಾಗಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗಿಂತಲೂ ಡೊನಾಲ್ಡ್ ಟ್ರಂಪ್ ಮುಂಚೂಣಿ ಕಾಯ್ದುಕೊಂಡಿರುವುದು ಭಾರತ ಹಾಗೂ ಏಷ್ಯಾ ಷೇರುಪೇಟೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲು ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
H1-B ವಿಸಾ ಬಳಸುತ್ತಿರುವ ಭಾರತೀಯ ಐಟಿ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ಟೆಕ್ ಮಹೀಂದ್ರಾ ಸ್ಟಾಕ್ ಗಳು ಭಾರೀ ಮಾರಾಟ ಒತ್ತಡವನ್ನು ಅನುಭವಿಸಿದವು. ಇನ್ಫೋಸಿಸ್, ಷೇರುಗಳು ಶೇ. 7 ಹಾಗೂ ಸನ್ ಫಾರ್ಮಾ ಷೇರುಗಳು ಶೇ. 10ರಷ್ಟು ಕುಸಿತ ಕಂಡವು.



Click it and Unblock the Notifications