2-3 ವಾರಗಳಲ್ಲಿ ಎಟಿಎಂಗಳ ಸುಲಲಿತ ಕಾರ್ಯಚರಣೆ: ಅರುಣ್ ಜೇಟ್ಲಿ

ಇನ್ನೂ 2-3 ವಾರಗಳಲ್ಲಿ ದೇಶದಾದ್ಯಂತ ಎಲ್ಲಾ ಎಟಿಎಂ ಯಂತ್ರಗಳು ಸಂಪೂರ್ಣವಾಗಿ ಸರಾಗವಾಗಿ ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ನಿರ್ಬಂಧದಿಂದಾಗಿ ಜನರು ನಗದು ಹಣಕ್ಕಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇನ್ನೂ 2-3 ವಾರಗಳಲ್ಲಿ ದೇಶದಾದ್ಯಂತ ಎಲ್ಲಾ ಎಟಿಎಂ ಯಂತ್ರಗಳು ಸಂಪೂರ್ಣವಾಗಿ ಸರಾಗವಾಗಿ ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ದಿಢೀರ್ ಆಗಿ ನೋಟುಗಳ ನಿಷೇಧದಿಂದಾಗಿ ಸಾರ್ವಜನಿಕರಿಗೆ ಕಷ್ಟವಾಗಿದ್ದರೂ ಸರ್ಕಾರದ ನಿರ್ಧಾರವನ್ನು ಜನ ಗೌರವಿಸಿ ಬೆಂಬಲಿಸಿದ್ದಾರೆ. ಪ್ರತಿಯೊಬ್ಬರೂ ಬ್ಯಾಂಕುಗಳ ಮೂಲಕವೇ ಹಣಕಾಸು ವ್ಯವಹಾರ ನಿರ್ವಹಿಸುವುದು ಸುರಕ್ಷಿತವಾಗಿದ್ದು, ಬ್ಯಾಂಕು ವ್ಯವಹಾರಗಳ ಮೂಲಕವೇ ನಗದು ವಿನಿಮಯ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ನೋಟುಗಳ ವಿನಿಮಯ ಮಾಡಿಕೊಳ್ಳಲು ಡಿಸೆಂಬರ್ 30ರವರೆಗೆ ಕಾಲಾವಕಾಶ ಇರುವುದರಿಂದ ಆತುರ ಪಡಬೇಕಾಗಿಲ್ಲ. ಕೆಲವು ದಿನಗಳ ನಂತರ ಬ್ಯಾಂಕುಗಳಿಗೆ ಹೋದರೆ ಸರದಿಯಲ್ಲಿ ನಿಲ್ಲಬೇಕಾದ ಅವಶ್ಯಕತೆ ಇರುವುದಿಲ್ಲ ಎಂದರು. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಸಹಜವಾದರೂ ಬ್ಯಾಂಕು ಮತ್ತು ಅಂಚೆ ಕಚೇರಿಗಳಲ್ಲಿ ಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಕ್ಯೂ ಕಡಿಮೆಯಾಗಲಿದೆ. ಆದರಿಂದ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

2-3 ವಾರಗಳಲ್ಲಿ ಎಟಿಎಂಗಳ ಸುಲಲಿತ ಕಾರ್ಯಚರಣೆ: ಅರುಣ್ ಜೇಟ್ಲಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+