ಎಟಿಎಂ ವ್ಯವಹಾರಗಳ ಮೇಲೆ ಶುಲ್ಕ ಇಲ್ಲ

ಡಿಸೆಂಬರ್ 30ರ ತನಕ ಉಳಿತಾಯ ಗ್ರಾಹಕರು ಮಾಡುವ ಎಟಿಎಂ ವ್ಯವಹಾರಗಳ ಮೇಲೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಆರ್ಬಿಐ ಬ್ಯಾಂಕುಗಳಿಗೆ ನಿರ್ದೇಶನ ಮಾಡಿದೆ.

ಸಾರ್ವಜನಿಕರು ದಿನನಿತ್ಯದ ಅಗತ್ಯಕ್ಕೆ ಬೇಕಾಗುವಷ್ಟು ನಗದು ಹಣ ಪಡೆಯಲು ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಎಟಿಎಂ ಮತ್ತು ಬ್ಯಾಂಕುಗಳಿಂದ ನಗದು ಹಣ ಪಡೆಯಲು ವಿಧಿಸಿದ್ದ ಮಿತಿಯನ್ನು ಕೇಂದ್ರ ಸರ್ಕಾರ ಭಾನುವಾರ ರಾತ್ರಿಯಿಂದ ಸಡಿಲಿಸಿ ಅದರ ಪ್ರಮಾಣವನ್ನು ಹೆಚ್ಚಿಸಿತ್ತು.

ಇದರ ಬೆನ್ನಲ್ಲೆ ಡಿಸೆಂಬರ್ 30ರ ತನಕ ಉಳಿತಾಯ ಗ್ರಾಹಕರು ಮಾಡುವ ಎಟಿಎಂ ವ್ಯವಹಾರಗಳ ಮೇಲೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಆರ್‌ಬಿಐ ಬ್ಯಾಂಕುಗಳಿಗೆ ನಿರ್ದೇಶನ ಮಾಡಿದೆ.

ಗ್ರಾಹಕರು ಯಾವುದೇ ಬ್ಯಾಂಕಿನ ಎಟಿಎಂ ಗಳ ಮೂಲಕ ನಡೆಸುವ ವ್ಯವಹಾರಗಳಿಗೆ ಈ ಸೌಲಭ್ಯ ಅನ್ವಯವಾಗುತ್ತದೆ. ನವೆಂಬರ್ 10ರಿಂದ ಡಿಸೆಂಬರ್ 30ರ ನಡುವಿನ ಅವಧಿಯಲ್ಲಿ ನಡೆಸುವ ಎಟಿಎಂ ವ್ಯವಹಾರ ಇದರ ವ್ಯಾಪ್ತಿಗೆ ಒಳಪಡುತ್ತದೆ. ಬೇರೆ ಬೇರೆ ಬ್ಯಾಂಕುಗಳ 2 ಲಕ್ಷ ಎಟಿಎಂ ಗಳು ದೇಶದಾದ್ಯಂತ ಇವೆ.

ಎಟಿಎಂ ವ್ಯವಹಾರಗಳ ಮೇಲೆ ಶುಲ್ಕ ಇಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+