ಸೆನ್ಸೆಕ್ಸ್ ಭಾರಿ ಕುಸಿತ
ರೂ. 500, 1000 ನೋಟುಗಳ ನಿಷೇಧದ ಪರಿಣಾಮದಿಂದಾಗಿ ಕಳೆದ ಐದು ತಿಂಗಳ ಅವಧಿಯಲ್ಲಿಯೇ ಸೆನ್ಸೆಕ್ಸ್ ಅತಿ ಕೆಳ ಮಟ್ಟಕ್ಕೆ ಕುಸಿದಿದೆ.
ರೂ. 500, 1000 ನೋಟುಗಳ ನಿಷೇಧದ ಪರಿಣಾಮದಿಂದಾಗಿ ಕಳೆದ ಐದು ತಿಂಗಳ ಅವಧಿಯಲ್ಲಿಯೇ ಸೆನ್ಸೆಕ್ಸ್ ಅತಿ ಕೆಳ ಮಟ್ಟಕ್ಕೆ ಕುಸಿದಿದೆ.
ಸೆನ್ಸೆಕ್ಸ್ ಸೂಚ್ಯಂಕ 26,228 ಅಂಶಗಳೊಂದಿಗೆ 71 ಅಂಕ ಕುಸಿದಿದ್ದು, ನಿಪ್ಟಿ ಸೂಚ್ಯಂಕ 31 ಅಂಕ ಕುಸಿತ ಕಂಡಿದೆ.
ಅಂಬುಜಾ ಸಿಮೆಂಟ್ ಅತಿಹೆಚ್ಚು ನಷ್ಟ ಅನುಭವಿಸಿದ್ದು, ಶೇ. 4ರಷ್ಟು ನಷ್ಟದೊಂದಿಗೆ ಸ್ಟಾಕ್ ಕೊನೆಗೊಂಡಿದೆ. ಭಾರ್ತಿ ಏರ್ಟೆಲ್, ಟಿಸಿಎಸ್, ಝೀ ಎಂಟರ್ಟೈನ್ಮೆಂಟ್, ಟಿಸಿಎಸ್, ಎಸಿಸಿ, ಬಜಾಜ್ ಆಟೊ, ಕೋಲ್ ಇಂಡಿಯಾ ಮತ್ತು ವಿಪ್ರೋ ಸಹ ನಷ್ಟದಲ್ಲಿಯೇ ದಿನದ ವಹಿವಾಟನ್ನು ಮುಗಿಸಿದವು. ಹಿಂಡಾಲ್ಕೊ, ಟಾಟಾ ಮೋಟಾರ್ಸ್, ಪವರ್ ಗ್ರಿಡ್, GAIL ಇಂಡಿಯಾ, ಸಿಪ್ಲಾ ಮತ್ತು ಬಿಎಚ್ಇಎಲ್ ಇವು ಲಾಭ ಗಳಿಸಿವೆ.

Click it and Unblock the Notifications