ನೋಟು ನಿಷೇಧ ಮಾಡಿರುವ ಕ್ರಮದಿಂದಾಗಿ ದೇಶದ ಪ್ರಮುಖ ಬ್ಯಾಂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಠೇವಣಿಗಳು ಹರಿದು ಬರುತ್ತಿದ್ದು, ಇದರ ಪರಿಣಾಮದಿಂದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲು ಬ್ಯಾಂಕುಗಳು ನಿರ್ಧರಿಸಿವೆ.
ಕೇಂದ್ರ ಸರ್ಕಾರ ರೂ. 500, 1000 ಮುಖಬೆಲೆಯ ನೋಟು ನಿಷೇಧ ಮಾಡಿರುವ ಕ್ರಮದಿಂದಾಗಿ ದೇಶದ ಪ್ರಮುಖ ಬ್ಯಾಂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಠೇವಣಿಗಳು ಹರಿದು ಬರುತ್ತಿದ್ದು, ಇದರ ಪರಿಣಾಮದಿಂದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲು ಬ್ಯಾಂಕುಗಳು ನಿರ್ಧರಿಸಿವೆ.
ಎಸ್ಬಿಐ ಸಷ್ಷ್ಟನೆ
ದೇಶದ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ತನ್ನ ಕೆಲ ಆಯ್ದ ಫಿಕ್ಸೆಡ್ ಡಿಪಾಸಿಟ್ ಗಳ ಮೇಲಿನ ಬಡ್ಡಿದರದಲ್ಲಿ ಶೇ. 0.15ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಸಷ್ಟಪಡಿಸಿದೆ. ಹಳೆ ನೋಟುಗಳ ನಿಷೇಧದ ನಂತರ ಸುಮಾರು ರೂ. 1,14,139 ಕೋಟಿಗಿಂತ ಹೆಚ್ಚು ಠೇವಣಿಗಳು ಹರಿದು ಬಂದಿವೆ ಎಂದು ಎಸ್ಬಿಐ ಬ್ಯಾಂಕ್ ತಿಳಿಸಿದೆ.
ಎಸ್ಬಿಐ ಎಫ್ಡಿ ಬಡ್ಡಿದರ ಕಡಿತ
ಒಂದು ವರ್ಷದಿಂದ 455 ದಿನಗಳವರೆಗಿನ ಕಾಲಾವಧಿಯ ಫಿಕ್ಸೆಡ್ ಡಿಪಾಸಿಟ್ ಗಳ ಮೇಲಿನ ಬಡ್ಡಿ ದರದಲ್ಲಿ ಶೇ.0.15ರಷ್ಟು ಕಡಿತಗೊಳಿಸಲಾಗಿದೆ. ಗುರುವಾರ(17-11-2016) hos ಬಡ್ಡಿದರ ಜಾರಿ ಆಗಲಿದೆ.
ಇದಕ್ಕೆ ಹೊರತಾಗಿ 2-3 ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ
ತಿಳಿಸಿದೆ.
ಇತರೆ ಬ್ಯಾಂಕುಗಳ ಬಡ್ಡಿದರ ಕಡಿತ ಸಾಧ್ಯತೆ
ಈಗಾಗಲೇ ಸಾರ್ವಜನಿಕ ವಲಯದ ದೊಡ್ಡ ಬ್ಯಾಂಕ್ ಎನಿಸಿರುವ ಎಸ್ಬಿಐ ಸ್ಥಿರ ಠೆವಣಿಗಳ ಮೇಲಿನ ಬಡ್ಡಿದರವನ್ನು ಕಡಿತ ಮಾಡಿದ್ದು, ಇತರ ಬ್ಯಾಂಕುಗಳು ಸಹ ತಮ್ಮ ಎಫ್ಡಿ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸುವ ಸಾಧ್ಯತೆ ಎದೆ ಎನ್ನಲಾಗಿದೆ.
ಆರ್ಬಿಐ ಪ್ರಕಟಣೆ
ಬರುವ ಡಿಸೆಂಬರ್ ತಿಂಗಳಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ತನ್ನ ದ್ವೈಮಾಸಿಕ ವಿತ್ತ ನೀತಿಯನ್ನು ಪ್ರಕಟಿಸಲಿದೆ. ಆ ಸಂದರ್ಭದಲ್ಲಿ ಆರ್ಬಿಐ ಸ್ಥಿರ ಠೇವಣಿ ಮತ್ತು ಇನ್ನಿತರ ಬಡ್ಡಿದರಗಳನ್ನು ಕಡಿತಗೊಳಿಸುವ ಬಗ್ಗೆ ಹೊಸ ನೀತಿಯನ್ನು ಘೋಷಿಸುವ ಸಾಧ್ಯತೆ ಇದೆಯೆಂದು ಆರ್ಥಿಕ ತಜ್ಞರು ಇಂಗಿತ ವ್ಯಕ್ತಪಡಿಸಿದ್ದಾರೆ.


Click it and Unblock the Notifications