ನೋಟ್ ರದ್ದು ಎಫೆಕ್ಟ್: FD ಬಡ್ಡಿದರ ಕಡಿತ ಮಾಡಿದ ಬ್ಯಾಂಕುಗಳು

ಹಳೆ ನೋಟು ನಿಷೇಧ ಮಾಡಿರುವ ಕ್ರಮದಿಂದಾಗಿ ದೇಶದ ಪ್ರಮುಖ ಬ್ಯಾಂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಠೇವಣಿಗಳು ಹರಿದು ಬರುತ್ತಿದ್ದು, ಇದರ ಪರಿಣಾಮದಿಂದ ದೇಶದ ಹಲವು ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿವೆ.

ಕೇಂದ್ರ ಸರ್ಕಾರ ಹಳೆ ನೋಟು ನಿಷೇಧ ಮಾಡಿರುವ ಕ್ರಮದಿಂದಾಗಿ ದೇಶದ ಪ್ರಮುಖ ಬ್ಯಾಂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಠೇವಣಿಗಳು ಹರಿದು ಬರುತ್ತಿದ್ದು, ಇದರ ಪರಿಣಾಮದಿಂದ ದೇಶದ ಹಲವು ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿವೆ.

ನೋಟ್ ರದ್ದು ಎಫೆಕ್ಟ್: FD ಬಡ್ಡಿದರ ಕಡಿತ ಮಾಡಿದ ಬ್ಯಾಂಕುಗಳು

ಐಸಿಐಸಿಐ ಬ್ಯಾಂಕು:
ಐಸಿಐಸಿಐ ಬ್ಯಾಂಕು 390 ದಿನಗಳಿಂದ 2 ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 0.20 ಬಡ್ಡಿದರ ಕಡಿತಗೊಳಿಸಿದ್ದು, ಈಗಾಗಲೇ ಜಾರಿಯಾಗಿದೆ. ಐಸಿಐಸಿಐ ಶೇ. 7.25 ರಿಂದ 7.10ಕ್ಕೆ ಬಡ್ಡಿದರ ಇಳಿಸಿದೆ.

ಕೋಟಕ್ ಮಹೀಂದ್ರಾ ಬ್ಯಾಂಕು:
ಕೋಟಕ್ ಮಹೀಂದ್ರಾ ಬ್ಯಾಂಕ್ 25 ಬೇಸ್ ಪಾಯಿಂಟ್ ಗಳಷ್ಟು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಒಂದು ವರ್ಷದ ಅವಧಿಗೆ ಶೇ. 7ರಷ್ಟು ಬಡ್ಡಿದರ ಕಡಿತಗೊಳಿಸಿದೆ. 2-3 ವರ್ಷಗಳ ಅವಧಿಯ ಎಫ್ಡಿ ಠೇವಣಿಗಳ ಬಡ್ಡಿದರ 50 ಬೇಸ್ ಪಾಯಿಂಟ್ ಕಡಿತಗೊಳಿಸಿದ್ದು, ಶೇ. 6.75ರಷ್ಟು ಬಡ್ಡಿದರ ಇದೆ.

ಎಸ್ಬಿಐ ಬ್ಯಾಂಕು :
ಎಸ್ಬಿಐ ಬ್ಯಾಂಕು ಈಗಾಗಲೇ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 0.15ರಷ್ಟು ಕಡಿತಗೊಳಿಸಿದ್ದು, ಒಂದು ವರ್ಷದಿಂದ 455 ದಿನಗಳವರೆಗಿನ ಕಾಲಾವಧಿಯ ಫಿಕ್ಸೆಡ್ ಡಿಪಾಸಿಟ್ ಗಳ ಮೇಲಿನ ಬಡ್ಡಿ ದರದಲ್ಲಿ ಶೇ.0.15ರಷ್ಟು ಕಡಿತಗೊಳಿಸಲಾಗಿದೆ. ಇದಕ್ಕೆ ಹೊರತಾಗಿ 2-3 ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ತಿಳಿಸಿದೆ.

ಕೆನರಾ ಬ್ಯಾಂಕು:
ಕೆನರಾ ಬ್ಯಾಂಕ್ ಶೇ. 0.05-0.25 ವ್ಯಾಪ್ತಿಯಲ್ಲಿ ತನ್ನ ಠೇವಣಿ ದರಗಳನ್ನು ಘೋಷಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್:

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ನಿಗದಿತ ಅವಧಿಯ ಠೇವಣಿಗಳ ಬಡ್ಡಿದರವನ್ನು 10-25 ಬೇಸ್ ಪಾಯಿಂಟ್ ಕಡಿತಗೊಳಿಸಿದೆ. ನವೆಂಬರ್ 23, 2016ರಿಂದ ಪರಿಣಾಮಕಾರಿಯಾಗಿ ಜಾರಿಯಾಗಲಿವೆ.

ಎಚ್ಡಿಎಫ್ಸಿ:
ಎಚ್ಡಿಎಫ್ಸಿ ಬ್ಯಾಂಕಿನ ಹೊಸ ಬಡ್ಡಿದರ ಗುರುವಾರದಿಂದ(17-11-16) ಜಾರಿ ಬಂದಿದ್ದು, ಸ್ಥಿರ ಠೇವಣಿ ಬಡ್ಡಿದರ ಶೇ. 7 ರಿಂದ 6.75ಕ್ಕೆ ಇಳಿದಿದೆ. ಮೂರು ವರ್ಷ ಒಂದು ದಿನದಿಂದ ಐದು ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 6.75 ರಿಂದ 6.5ಕ್ಕೆ ಕಡಿತ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+