ಮುಂಬೈ ಷೇರುಪೇಟೆ ಬಹುದಿನಗಳ ನಂತರ ಬಿಎಸ್ಇ ಸೂಚ್ಯಂಕ 456.17 ಅಂಕಗಳ ಭಾರಿ ಏರಿಕೆಯೊಂದಿಗೆ 26,316.34 ಅಂಶಗಳಲ್ಲಿ ದಿನದ ವಹಿವಾಟನ್ನು ಮುಗಿಸಿದೆ.
ಮುಂಬೈ ಷೇರುಪೇಟೆ ಬಹುದಿನಗಳ ನಂತರ ಬಿಎಸ್ಇ ಸೂಚ್ಯಂಕ 456.17 ಅಂಕಗಳ ಭಾರಿ ಏರಿಕೆಯೊಂದಿಗೆ 26,316.34 ಅಂಶಗಳಲ್ಲಿ ದಿನದ ವಹಿವಾಟನ್ನು ಮುಗಿಸಿದೆ.
ಕಳೆದ ಅಕ್ಟೋಬರ್ 18ರ ನಂತರದಲ್ಲಿ ಇದು ಅತಿ ಹೆಚ್ಚಿನ ಏರಿಕೆಯಾಗಿದ್ದು, ಎಸ್ಎಸ್ಇ ಸೂಚ್ಯಂಕ ನಿಪ್ಟಿ 148.8 ಅಂಕಗಳಷ್ಟು ಗಳಿಕೆ ಕಂಡಿದೆ.
ಬಿಎಸ್ಇ ವಲಯದ ಸೂಚ್ಯಂಕಗಳಾದ ಐಟಿ ಶೇ. 4.69, ಟೆಕ್ ಶೇ. 3.79, ಆರೋಗ್ಯ ಶೇ. 2.35 ಮತ್ತು ಗ್ರಾಹಕ ಸರಕುಗಳು ಶೇ. 1.74ರಷ್ಟು ಲಾಭ ಗಳಿಸಿವೆ.

ಟಿಸಿಎಸ್(+5.23%), ಇನ್ಫೋಸಿಸ್(+4.78%), ಸನ್ ಫಾರ್ಮಾ(+4.18%), GAIL(+3.48%) ಮತ್ತು ಲುಪಿನ್(+3.36% ಇವು ಸೆನ್ಸೆಕ್ಸ್ ಲಾಭದಾರರಾಗಿದ್ದು, ಬಜಾಜ್ ಅಟೋ(-0.74 %), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (-0.29%)ಮತ್ತು ಭಾರ್ತಿ ಏರ್ಟೆಲ್ (-0.22%)ನಷ್ಟ ಅನುಭವಿಸಿವೆ.
ಇಂದು ಬೆಳಿಗ್ಗೆ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು 68 ರೂ. 41 ಪೈಸೆಯಲ್ಲಿ ವಹಿವಾಟು ನಡೆಸಿತ್ತು. ಆರ್ಬಿಐ ಮಧ್ಯ ಪ್ರವೇಶ ಮತ್ತು ಏಷಿಯಾ ಮಾರುಕಟ್ಟೆಯಿಂದ ಧನಾತ್ಮಕ ಸೂಚನೆ ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಾಗಲು ಕಾರಣವಾಗಿದೆ ಷೇರುಪೇಟೆ ತಜ್ಞರು ವಿಶ್ಲೇಷಿಸಿದ್ದಾರೆ.



Click it and Unblock the Notifications