ದಾಖಲೆ ಇಲ್ಲದ ಹಣದ ಮೇಲೆ ಭಾರಿ ತೆರಿಗೆ

ರೂ. 500, 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಬ್ಯಾಂಕ್ ಠೇವಣಿಗಳಲ್ಲಿ ಜಮೆಯಾಗುತ್ತಿರುವ ಹಣದ ಮೇಲೆ ತೀವ್ರ ನಿಗಾವಹಿಸಿದ್ದು, ತೆರಿಗೆ ಇಲಾಖೆ ದಾಖಲೆ ಇಲ್ಲದ ಹಣದ ಮೇಲೆ ಶೇ. 60ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿದೆ.

ಕಪ್ಪು ಹಣ, ಖೋಟಾನೋಟುಗಳ ತಡೆಗಾಗಿ ನೋಟು ರದ್ದತಿ ಮಾಡಿರುವ ಕೇಂದ್ರ ಸರ್ಕಾರ ಈಗ ದಾಖಲೆ ಇಲ್ಲದ ಹಣದ ಮೇಲೆ ಭಾರಿ ಪ್ರಮಾಣದಲ್ಲಿ ತೆರಿಗೆ ವಿಧಿಸಲು ಮುಂದಾಗಿದೆ.

ರೂ. 500, 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಬ್ಯಾಂಕ್ ಠೇವಣಿಗಳಲ್ಲಿ ಜಮೆಯಾಗುತ್ತಿರುವ ಹಣದ ಮೇಲೆ ತೀವ್ರ ನಿಗಾವಹಿಸಿದ್ದು, ತೆರಿಗೆ ಇಲಾಖೆ ದಾಖಲೆ ಇಲ್ಲದ ಹಣದ ಮೇಲೆ ಶೇ. 60ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿದೆ. ಇದಕ್ಕಾಗಿ ಪ್ರಸ್ತುತ ಇರುವ ಕಾಯಿದೆಗೆ ಕೆಲ ತಿದ್ದುಪಡಿ ತಂದು ಹೊಸ ಕಾನೂನು ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಕೇಂದ್ರ ಸರ್ಕಾರ ಹೊರಡಿಸಿಲ್ಲ.

ದಾಖಲೆ ಇಲ್ಲದ ಹಣದ ಮೇಲೆ ಭಾರಿ ತೆರಿಗೆ

ಹಳೆ ನೋಟುಗಳ ನಿಷೇಧದ ನಂತರ ಜನಧನ ಖಾತೆಯಲ್ಲಿ 21 ಸಾವಿರ ಕೋಟಿ ಜಮಾ ಆಗಿರುವುದು ಕಪ್ಪು ಹಣ, ದಾಖಲೆ ರಹಿತ ಹಣ ಇರುವುದಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ದಾಖಲೆ ಇಲ್ಲದ ಹಣಕ್ಕೆ ಭಾರಿ ಪ್ರಮಾಣದಲ್ಲಿ ತೆರಿಗೆ ವಿಧಿಸಲು ತೆರಿಗೆ ಇಲಾಖೆ ಹಾಗೂ ಕೇಂದ್ರ ಸರ್ಕಾರ ನಿರ್ಧರಿಸಿದೆ.

ನವೆಂಬರ್ 10 ಡಿಸೆಂಬರ್ 30, 2016ರ ನಡುವಿನ ಅವಧಿಯಲ್ಲಿ ಇಡಲಾಗುವ ರೂ. 2.50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಗಳ ಮೇಲೆ ಸರ್ಕಾರ ನಿಗಾ ಇಟ್ಟಿದೆ. ಸ್ವಯಂ ಆಗಿ ಕಪ್ಪುಹಣ ಘೋಷಣೆ ಮಾಡುವವರಿಗೆ ಸೆಪ್ಟಂಬರ್ 30ರ ವರೆಗೆ ಕಾಲಾವಕಾಶ ನೀಡಿ ಶೇ. 45ರಷ್ಟು ತೆರಿಗೆ ವಿಧಿಸಿತ್ತು. ಆದರೆ ಈಗ ಕಾಲಾವಕಾಶ ಮುಗಿದಿದ್ದು, ದಾಖಲೆ ಇಲ್ಲದ ಹಣಕ್ಕೆ ಶೇ. 60ರಷ್ಟು ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ.

ದಾಖಲೆ ಇಲ್ಲದ ಹಣದ ಮೇಲೆ ಭಾರಿ ತೆರಿಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+