ಡಿಸೆಂಬರ್ 15ರವರೆಗೆ ಹಳೆ ರೂ. 500 ನೋಟು ಬಳಕೆ ಎಲ್ಲಿ ಮಾಡಬಹುದು?

ಹಳೆ ನೋಟುಗಳ ಚಲಾವಣೆಗೆ ಡಿಸೆಂಬರ್ 15ರ ವರೆಗೆ ಅವಧಿ ವಿಸ್ತರಿಸುವುದರ ಜತೆಗೆ ಅದಕ್ಕೆ ಕೆಲವು ಹೊಸ ಸೇವೆಗಳನ್ನೂ ಸೇರಿಸಿದೆ.

ಕೇಂದ್ರ ಸರ್ಕಾರ ರೂ. 500, 1000 ಹಳೆ ಮುಖಬೆಲೆಯೆ ನೋಟುಗಳನ್ನು ಚಲಾವಣೆ ಮಾಡುವ ಅವಧಿ ನಿನ್ನೆ (ನವೆಂಬರ್ 24) ಅಂತ್ಯಗೊಳಿಸಿದೆ. ಆದರೆ ನೋಟು ನಿಷೇಧದಿಂದಾಗಿ ಜನಸಾಮಾನ್ಯರಿಗೆ ಆಗಿರುವ ಸಂಕಷ್ಟಗಳನ್ನು ಮನಗಂಡು ಹಳೆಯ ರೂ. 500 ಮುಖಬೆಲೆಯ ನೋಟುಗಳ ಬಳಕೆಯ ಕಾಲಾವಧಿಯನ್ನು ಡಿಸೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ. ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?

ಹಳೆ ನೋಟುಗಳ ಚಲಾವಣೆಗೆ ಡಿಸೆಂಬರ್ 15ರ ವರೆಗೆ ಅವಧಿ ವಿಸ್ತರಿಸುವುದರ ಜತೆಗೆ ಅದಕ್ಕೆ ಕೆಲವು ಹೊಸ ಸೇವೆಗಳನ್ನೂ ಸೇರಿಸಿದೆ. ಹಾಗಿದ್ದರೆ ಅವಧಿ ವಿಸ್ತರಣೆಗೆ ಕಾರಣ ಹಾಗೂ ಯಾವ ಯಾವ ಸೌಲಭ್ಯಗಳಿಗಾಗಿ ವಿನಾಯಿತಿಗಳನ್ನು ಸರ್ಕಾರ ಘೋಷಿಸಿದೆ ಎಂಬುದನ್ನು ನೋಡೋಣ...

1. ಅವಧಿ ವಿಸ್ತರಣೆಗೆ ಕಾರಣ

1. ಅವಧಿ ವಿಸ್ತರಣೆಗೆ ಕಾರಣ

ಹೆಚ್ಚು ಮೌಲ್ಯದ ಹಳೆ ನೋಟುಗಳ ನಿಷೇಧದಿಂದ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಈಗಾಗಲೇ ವಿಶ್ಲೇಷಣೆ ನಡೆಸಿದೆ. ಜನಸಾಮಾನ್ಯರಿಂದ ಪಡೆದ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ವಿನಾಯಿತಿಗಳನ್ನು ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

2. ವಿನಾಯಿತಿಗೆ ರೂ. 500 ಮಾತ್ರ ಅವಕಾಶ

2. ವಿನಾಯಿತಿಗೆ ರೂ. 500 ಮಾತ್ರ ಅವಕಾಶ

ಹೊಸದಾಗಿ ವಿನಾಯಿತಿ ನೀಡಲಾಗಿರುವ ಎಲ್ಲ ರೀತಿಯ ಪಾವತಿ ಮತ್ತು ಸೇವೆಗಳಿಗೆ ರೂ. 500 ಮುಖಬೆಲೆಯ ಹಳೆಯ ನೋಟುಗಳನ್ನು ನೀಡಲು ಮಾತ್ರ ಅವಕಾಶ ಇದೆ. ಇಂದಿನಿಂದ ರೂ. 1000 ನೋಟುಗಳ ಬಳಕೆಗೆ ಅವಕಾಶ ಇಲ್ಲ.

3. ಹಳೆ 500 ನೋಟು ಬಳಕೆ ಎಲ್ಲಿ?

3. ಹಳೆ 500 ನೋಟು ಬಳಕೆ ಎಲ್ಲಿ?

* ಪೆಟ್ರೋಲ್ ಬಂಕ್ ಗಳಲ್ಲಿ ಹಳೆ ರೂ. 500 ನೋಟುಗಳನ್ನು ಬಳಸಬಹುದು.
* ಟೋಲ್ ಪ್ಲಾಜಾಗಳಲ್ಲಿ ಬಿಲ್ ಪಾವತಿ ಮಾಡಬಹುದು.
* ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿ ಮಾಡಲು ಅವಕಾಶ
* ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದ ಕಾಲೇಜುಗಳ ಶುಲ್ಕ ಪಾವತಿ
* ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಅಧೀನದಲ್ಲಿರುವ ಶಾಲೆಗಳ ಒಬ್ಬ ವಿದ್ಯಾರ್ಥಿಯ ಗರಿಷ್ಠ ರೂ. 2000 ಶುಲ್ಕ ಪಾವತಿಗೆ ಅವಕಾಶ
* ಈಗಿನ, ಹಿಂದಿನ ಬಾಕಿ ಪಾವತಿ ಹಾಗೂ ಗೃಹ ಬಳಕೆ ಬಿಲ್ ಪಾವತಿಗೆ ಅವಕಾಶ
* ಪ್ರೀಪೇಡ್ ಮೊಬೈಲ್ ಗೆ ಗರಿಷ್ಠ ರೂ. 500 ವರೆಗೆ ರಿಚಾರ್ಜ್ ಮಾಡಲು ಅವಕಾಶ

4. ಆಸ್ಪತ್ರೆ, ಮೆಡಿಕಲ್ ಶಾಪ್ ಗಳಲ್ಲಿ ಅವಕಾಶ

4. ಆಸ್ಪತ್ರೆ, ಮೆಡಿಕಲ್ ಶಾಪ್ ಗಳಲ್ಲಿ ಅವಕಾಶ

ಮೆಡಿಕಲ್ ಶಾಪ್, ಸರ್ಕಾರಿ ಆಸ್ಪತ್ರೆ ಸೇರಿದಂತೆ ಸರ್ಕಾರಿ ಸೇವೆಗಳಿಗೆ ಹಳೆ 500 ರೂಪಾಯಿ ನೋಟ್ ಚಲಾವಣೆಗೆ ಡಿಸೆಂಬರ್ 15ರವರೆಗೆ ಅವಕಾಶ ನೀಡುವ ಮೂಲಕ ಗ್ರಾಹಕರಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

5. ಇನ್ನಿತರ ಸೇವೆಗಳು

5. ಇನ್ನಿತರ ಸೇವೆಗಳು

ಅಂಚೆ ಕಚೇರಿ, ಎಲ್ಪಿಜಿ ಗ್ಯಾಸ್, ಮೆಟ್ರೋ ರೈಲ್ವೆ ಟಿಕೆಟ್, ಕೋರ್ಟು ಶುಲ್ಕ ಪಾವತಿ, ರಾಜ್ಯ ಸರ್ಕಾರದ ಮಳಿಗೆಗಳಿಂದ ಬೀಜ ಖರೀದಿ, ಕೇಂದ್ರ/ರಾಜ್ಯ ಸರ್ಕಾರದ ಹಾಲಿನ ಕೇಂದ್ರ, ರೈಲ್ವೇ ಟಿಕೆಟ್ ಬುಕ್ಕಿಂಗ್, ಶವಾಗಾರ ಶುಲ್ಕ ಸೇರಿದಂತೆ ಇತರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕೇಂದ್ರಗಳಲ್ಲಿ ಹಳೆಯ ನೋಟುಗಳ ಚಲಾವಣೆಗೆ ಅನುವು ಮಾಡಿಕೊಡಲಾಗಿದೆ.

6. ವಿದೇಶಿಯರಿಗೆ ಅವಕಾಶ

6. ವಿದೇಶಿಯರಿಗೆ ಅವಕಾಶ

ವಿದೇಶಿಯರು ಒಂದು ವಾರಕ್ಕೆ ಗರಿಷ್ಠ ರೂ. 5000ರ ವರೆಗೆ ವಿನಿಮಯ ಮಾಡಲು ಅವಕಾಶ ನೀಡಲಾಗಿದೆ. ಇದನ್ನು ಅವರ ಪಾಸ್ ಪೋರ್ಟ್ ಗಳಲ್ಲಿ ಸಮೂದಿಸಲಾಗುವುದು.

7. ಬ್ಯಾಂಕುಗಳಲ್ಲಿ ವಿನಿಮಯ ರದ್ದು

7. ಬ್ಯಾಂಕುಗಳಲ್ಲಿ ವಿನಿಮಯ ರದ್ದು

ನಿಷೇದ ಮಾಡಲ್ಪಟ್ಟಿರುವ ಹಳೆ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡುವ ಪ್ರಕ್ರಿಯೆಯನ್ನು ಗುರುವಾರ ಮಧ್ಯರಾತ್ರಿಯಿಂದ ರದ್ದುಪಡಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಅಲ್ಲದೆ ಬ್ಯಾಂಕುಗಳಲ್ಲಿ ನೋಟುಗಳ ವಿನಿಮಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದರಿಂದ ವಿನಿಮಯ ಸೌಲಭ್ಯವನ್ನು ತೆಗೆಯಲಾಗಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+