For Quick Alerts
ALLOW NOTIFICATIONS  
For Daily Alerts

ನೋಟು ನಿಷೇದ: ಅಂಚೆ ಕಚೇರಿಗಳಲ್ಲಿ 32,631 ಕೋಟಿ ಜಮಾ

ಇದು ಹಳೆ ರೂ. 500, 1000 ನೋಟುಗಳ ನಿಷೇಧದ ಎಫೆಕ್ಟ್! ದೇಶದಾದ್ಯಂತ ಅಂಚೆ ಕಚೇರಿಗಳಲ್ಲಿ ರೂ. 32,631 ಕೋಟಿ ಠೇವಣಿ ರೂಪದಲ್ಲಿ ಹರಿದು ಬಂದಿದ್ದು, ಎಲ್ಲರನ್ನು ದಿಗ್ಭ್ರಮೆಗೊಳಿಸಿದೆ.

By Siddu
|

ಇದು ಹಳೆ ರೂ. 500, 1000 ನೋಟುಗಳ ನಿಷೇಧದ ಎಫೆಕ್ಟ್! ದೇಶದಾದ್ಯಂತ ಇರುವ ಅಂಚೆ ಕಚೇರಿಗಳಲ್ಲಿ ರೂ. 32,631 ಕೋಟಿ ಠೇವಣಿ ರೂಪದಲ್ಲಿ ಹರಿದು ಬಂದಿದ್ದು, ಎಲ್ಲರನ್ನು ದಿಗ್ಭ್ರಮೆಗೊಳಿಸಿದೆ.

ಅಂಚೆ ಕಚೇರಿಗಳ ಮೂಲಕ ನವೆಂಬರ್ 10 ರಿಂದ 24ರ ಅವಧಿಯಲ್ಲಿ ರೂ. 3680 ಕೋಟಿ ಹಳೆ ನೋಟುಗಳನ್ನು ವಿನಿಮಯ ಮಾಡಲಾಗಿದೆ ಎಂದು ಅಂಚೆ ಇಲಾಖೆ ಕಾರ್ಯದರ್ಶಿ ಬಿ ವಿ ಸುಧಾಕರ್ ಹೇಳಿದ್ದಾರೆ.

ನವೆಂಬರ್ 10 ರಿಂದ 24ರ ಅವಧಿಯಲ್ಲಿ ರೂ. 3680 ಕೋಟಿ ಮೊತ್ತದ 578 ಲಕ್ಷ ನೋಟುಗಳನ್ನು ವಿನಿಮಯ ಮಾಡಲಾಗಿದೆ.
ಠೇವಣಿಗಳ ರೂಪದಲ್ಲಿ 43.48 ಕೋಟಿ ಹಳೆ 500, 1000 ಮೌಲ್ಯದ ನೋಟುಗಳನ್ನು ಸ್ವೀಕರಿಸಲಾಗಿದ್ದು, ಇದರ ಮೌಲ್ಯ ರೂ. 32,631 ಕೋಟಿ ಆಗಿದೆ ಎಂದರು.

ಹೆಚ್ಚು ಕಡಿಮೆ 1.55 ಲಕ್ಷ ಅಂಚೆ ಕಚೇರಿಗಳಲ್ಲಿ 1.30 ಲಕ್ಷ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ 25,000 ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿವೆ. ಇದೇ ಅವಧಿಯಲ್ಲಿ ಅಂಚೆ ಕಚೇರಿಗಳಿಂದ ರೂ. 3,583 ಕೋಟಿ ವಿತ್ ಡ್ರಾ ಮಾಡಲಾಗಿದೆ.

ರೂ. 500, 1000 ಹಲೇ ನೋಟುಗಳ ನಿಷೇಧದ ನಂತರ ಬ್ಯಾಂಕು ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ಠೇವಣಿ ಅಥವಾ ಹಳೆ ನೋಟುಗಳ ವಿನಿಮಯಕ್ಕಾಗಿ ಸಾಲು ಸಾಲಾಗಿ ಸರದಿಯಲ್ಲಿ ನಿಂತಿದ್ದರು.
ಗುರುತು ಚೀಟಿಗಳನ್ನು ತೋರಿಸುವುದರ ಮೂಲಕ ಅಂಚೆ ಕಚೇರಿಗಳಲ್ಲಿ ಹಳೆ ನೋಟುಗಳ ವಿನಿಮಯಕ್ಕೆ ನಿರ್ಧಿಷ್ಟ ಅವಧಿಗೆ ಅವಕಾಶ ಮಾಡಿಕೊಡಲಾಗಿತ್ತು.

ನೋಟು ನಿಷೇದ: ಅಂಚೆ ಕಚೇರಿಗಳಲ್ಲಿ 32,631 ಕೋಟಿ ಜಮಾ

Read more about: post office schemes bank
English summary

Demonetisation: Post offices amass Rs 32,631 crore in deposits

The post offices across the country have witnessed a staggering Rs 32,631 crore in deposits following high currency ban of old Rs 500/1000 notes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X