ಅನಾಣ್ಯೀಕರಣ ಎಫೆಕ್ಟ್ ನಡುವೆಯೂ ಸೆನ್ಸೆಕ್ಸ್ ಅಲ್ಪ ಚೇತರಿಕೆ
ನೋಟು ರದ್ದತಿಯಿಂದ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ದೇಶದ ಷೇರುಪೇಟೆಯಲ್ಲಿ ಅಲ್ಪ ಮಟ್ಟಿಗೆ ಚೇತರಿಕೆ ಕಂಡು ಬಂದಿದೆ.
ನೋಟು ರದ್ದತಿಯಿಂದ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ದೇಶದ ಷೇರುಪೇಟೆಯಲ್ಲಿ ಅಲ್ಪ ಮಟ್ಟಿಗೆ ಚೇತರಿಕೆ ಕಂಡು ಬಂದಿದೆ. ಪ್ರಮುಖವಾಗಿ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಗಳಿಕೆಯಾಗಿದ್ದು, ನೈಸರ್ಗಿಕ ಅನಿಲ, ಮೂಲಭೂತ ಸೌಕರ್ಯ ಕ್ಷೇತ್ರದ ಷೇರುಗಳು ಕೂಡ ಅಲ್ಪ ಲಾಭಾಂಶ ಕಂಡಿವೆ.
ಸೆನ್ಸೆಕ್ಸ್ ಸೂಚ್ಯಂಕ 26,350.17 ಅಂಶಗಳೊಂದಿಗೆ 33.83 ಅಂಕ ಹಾಗೂ ನಿಪ್ಟಿ ಸೂಚ್ಯಂಕ 12.6 ಅಂಕಗಳ ಅಲ್ಪ ಚೇತರಿಕೆಯೊಂದಿಗೆ ದಿನದ ವಹಿವಾಟನ್ನು ಮುಗಿಸಿದೆ.
ಕಳೆದ ಶುಕ್ರವಾರ ಗೂಳಿ ಅಬ್ಬರ ಜೋರಾಗಿದ್ದು, ಬಿಎಸ್ಇ ಸೂಚ್ಯಂಕ 456 ಅಂಕಗಳಷ್ಟು ಭಾರಿ ಏರಿಕೆ ಕಂಡಿತ್ತು.
ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್ಟೆಲ್(+ 5.53%), ಅದಾನಿ ಪೋರ್ಟ್(+ 2.6%), ಐಟಿಸಿ(+ 2.08%), ಒಎನ್ಜಿಸಿ(+ 2.07%) ಮತ್ತು ಹೀರೊ ಮೊಟೊಕಾರ್ಪ್(+ 2.05%)ಷೇರುಮೌಲ್ಯದಲ್ಲಿ ಲಾಭಗಳಿಸಿದ್ದು, ಎಸ್ಬಿಐ -2.82%), ಐಸಿಐಸಿಐ ಬ್ಯಾಂಕ್(-1.73%), ಟಿಸಿಎಸ್(-1.02%), ಎಲ್&ಟಿ(-0.99%) ಮತ್ತು ಎಂ&ಎಂ(-0.95%)ನಷ್ಟ ಅನುಭವಿಸಿವೆ.


Click it and Unblock the Notifications