23% ಜನಧನ ಖಾತೆಗಳಲ್ಲಿ ಬ್ಯಾಲೆನ್ಸ್ ಇಲ್ಲ

ಕೇಂದ್ರ ಸರ್ಕಾರ ನವೆಂಬರ್ 8ರ ಮಧ್ಯರಾತ್ರಿ ರೂ. 500, 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಜನಧನ ಖಾತೆಯಲ್ಲಿ ಸಾವಿರಾರು ಕೋಟಿ ಹರಿದು ಬರುತ್ತಿದ್ದು, ನ.16ರ ವರೆಗೆ ಒಟ್ಟು 64,252.15 ಕೋಟಿ ರೂ. ಜಮಾ ಆಗಿದೆ ಕೇಂದ್ರ ಹೇಳಿತ್ತು.

ಕೇಂದ್ರ ಸರ್ಕಾರ ನವೆಂಬರ್ 8ರ ಮಧ್ಯರಾತ್ರಿ ರೂ. 500, 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಜನಧನ ಖಾತೆಯಲ್ಲಿ ಸಾವಿರಾರು ಕೋಟಿ ಹರಿದು ಬರುತ್ತಿದ್ದು, ನ.16ರ ವರೆಗೆ ಒಟ್ಟು 64,252.15 ಕೋಟಿ ರೂ. ಜಮಾ ಆಗಿದೆ ಎಂದು ಕೇಂದ್ರ ಹೇಳಿತ್ತು.

ಈ ಸುದ್ದಿಯ ಹಿಂದೆಯೆ ಐದನೇ ಒಂದರಷ್ಟು ಜನಧನ ಖಾತೆಗಳು ಇನ್ನೂ ಶೂನ್ಯ ಬ್ಯಾಲೆನ್ಸ್ ಹೊಂದಿರುವುದು ತಿಳಿದು ಬಂದಿದೆ.

ಒಟ್ಟು 25.8 ಕೋಟಿ ಜನಧನ ಖಾತೆಗಳಲ್ಲಿ ಕೇವಲ ರೂ. 288 ಕೋಟಿ ಮೊತ್ತ ಇತ್ತು. ಆದರೆ ಅದು ಡಿಸೆಂಬರ್ 7ರವರೆಗೆ ರೂ. 74,610 ಕೋಟಿಗೆ ಏರಿಕೆಯಾಗಿದೆ. ನೋಟು ನಿಷೇಧಿಸಿದ ನಂತರದ ದಿನಗಳಲ್ಲಿ ಜನಧನ ಖಾತೆಗೆ ಒಟ್ಟು ರೂ. 29,000 ಕೋಟಿ ಹರಿದು ಬಂದಿದೆ. ಆದರೆ ಶೇ.22.9ರಷ್ಟು ಖಾತೆಗಳು ಯಾವುದೇ ಬ್ಯಾಲೆನ್ಸ್ ಅನ್ನು ಹೊಂದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. ಜನಧನ ಖಾತೆಗಳಿಗೆ ರೂ. 50,೦೦೦ ಮಾತ್ರ ಜಮೆ ಮಾಡಲು ಅವಕಾಶ ನೀಡಿದ್ದ ಆರ್ ಬಿಐ, ಖಾತೆಯಿಂದ ಹಣ ಪಡೆಯುವ ಮಿತಿಯನ್ನು ರೂ. 10,000ಕ್ಕೆ ಕಡಿತಗೊಳಿಸಿದೆ.

23% ಜನಧನ ಖಾತೆಗಳಲ್ಲಿ ಬ್ಯಾಲೆನ್ಸ್ ಇಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+