ಟ್ರಂಪ್ ಎಫೆಕ್ಟ್: ಸೆನ್ಸೆಕ್ಸ್ 232 ಅಂಕ ಕುಸಿತ
ಸೆನ್ಸೆಕ್ಸ್ ಸುಮಾರು 232 ಅಂಕ ಕುಸಿತ ಕಂಡಿದ್ದು, ನಿಪ್ಟಿ 90.95 ಅಂಕಗಳಷ್ಟು ಕುಸಿತಕ್ಕೆ ಒಳಗಾಗಿ ದಿನದ ವಹಿವಾಟನ್ನು ನಷ್ಟದೊಂದಿಗೆ ಮುಗಿಸಿವೆ.
ಸೆನ್ಸೆಕ್ಸ್ ಸುಮಾರು 232 ಅಂಕ ಕುಸಿತ ಕಂಡಿದ್ದು, ನಿಪ್ಟಿ 90.95 ಅಂಕಗಳಷ್ಟು ಕುಸಿತಕ್ಕೆ ಒಳಗಾಗಿ ದಿನದ ವಹಿವಾಟನ್ನು ನಷ್ಟದೊಂದಿಗೆ ಮುಗಿಸಿವೆ.
ಟ್ರಂಪ್ ಅವರ ವೀಸಾ ನೀತಿ ಷೇರುಪೇಟೆಯ ಮೇಲೆ ಭಾರಿ ಪರಿಣಾಮ ಬೀರಿದ್ದು, ಐಟಿ ಷೇರುಗಳು ಕುಸಿತಕ್ಕೆ ಒಳಗಾಗಿವೆ.
ಎನ್ಎಸ್ಇ ಸೂಚ್ಯಂಕ 8170.80 ಅಂಶಗಳೊಂದಿಗೆ 90.95 ಅಂಕ ಹಾಗೂ ಬಿಎಸ್ಇ ಸೂಚ್ಯಂಕ 231.94 ಅಂಶಗಳೊಂದಿಗೆ 240 ಅಂಕ ಕುಸಿತ ಕಂಡಿದೆ.

ಬಿಎಸ್ಇ ವಲಯದ ಸೂಚ್ಯಂಕಗಳಾದ, ಆಟೋ 1.73, ಬ್ಯಾಂಕಿಂಗ್ ಶೇ. 1.67, FMCG ಶೇ. 1.2 ಮತ್ತು ಆಯಿಲ್ ಮತ್ತು ಗ್ಯಾಸ್ ಶೇ. 1.14 ರಷ್ಟು ನಷ್ಟ ಕಂಡಿವೆ.
ಏಷ್ಯನ್ ಪೇಂಟ್ಸ್(-3.33%), ಆಕ್ಸಿಸ್ ಬ್ಯಾಂಕ್ (-2.56%), ಬಜಾಜ್ ಆಟೋ(-2.52%), ಟಾಟಾ ಮೋಟಾರ್ಸ್(-2.05%) ಮತ್ತು ಹೀರೊ ಮೊಟೊಕಾರ್ಪ್(-1.97%)ಇವು ನಷ್ಟ ಅನುಭವಿಸಿದ್ದರೆ, ONGC(+1.43%), NTPC(+0.82%), ಟಿಸಿಎಸ್(+0.58%), ಸನ್ ಫಾರ್ಮಾ(+0.49%) ಮತ್ತು ಎಲ್ ಅಂಡ್ ಟಿ(+0.26%)ಇವು ಲಾಭ ಗಳಿಸಿವೆ.



Click it and Unblock the Notifications