ಚೇತರಿಕೆ ಹಾದಿಯಲ್ಲಿ ಸೆನ್ಸೆಕ್ಸ್
ಬಿಎಸ್ಇ ಸೂಚ್ಯಂಕ 26,692.90 ಅಂಶಗಳೊಂದಿಗೆ 177.66 ಅಂಕ ಏರಿಕೆ ಕಂಡಿದ್ದು, ಎನ್ಎಸ್ಇ ಸೂಚ್ಯಂಕ 8,212.80 ಅಂಶಗಳೊಂದಿಗೆ 42 ಅಂಕ ಏರಿಕೆ ಕಂಡು ದಿನದ ವಹಿವಾಟನ್ನು ಮುಗಿಸಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್ಇ) ಸುಮಾರು 200 ಪಾಯಿಂಟ್ ಏರಿಕೆಯಾದ್ದರಿಂದ ಷೇರುಪೇಟೆಯಲ್ಲಿ ಚೇತರಿಕೆ ಕಂಡು ಬಂದಿತ್ತು.
ಬಿಎಸ್ಇ ಸೂಚ್ಯಂಕ 26,692.90 ಅಂಶಗಳೊಂದಿಗೆ 177.66 ಅಂಕ ಏರಿಕೆ ಕಂಡಿದ್ದು, ಎನ್ಎಸ್ಇ ಸೂಚ್ಯಂಕ 8,212.80 ಅಂಶಗಳೊಂದಿಗೆ 42 ಅಂಕ ಏರಿಕೆ ಕಂಡು ದಿನದ ವಹಿವಾಟನ್ನು ಮುಗಿಸಿದೆ.
ಬಿಎಸ್ಇ ವಲಯದ ಸೂಚ್ಯಂಕಗಳಾದ ಆಟೋ ಸೂಚ್ಯಂಕ ಶೇ. 0.98, ಐಟಿ ಶೇ. 0.85, ತೈಲ ಮತ್ತು ಅನಿಲ ಶೇ. 0.81 ಮತ್ತು ಟೆಕ್ ಶೇ. 0.71ರಷ್ಟು ಲಾಭ ಗಳಿಸಿವೆ.
ಟಾಟಾ ಮೋಟಾರ್ಸ್(+3.48%), ಅದಾನಿ ಪೋರ್ಟ್(+2.35%), ವಿಪ್ರೊ(+1.86%), ಆಕ್ಸಿಸ್ ಬ್ಯಾಂಕ್(+1.74%) ಮತ್ತು ಇನ್ಫೋಸಿಸ್ (+1.28%) ಪ್ರಮುಖ ಸೆನ್ಸೆಕ್ಸ್ ಲಾಭದಾರರಾಗಿದ್ದು, GAIL(-1,34%), ಟಾಟಾ ಸ್ಟೀಲ್(-0.79%), ಲುಪಿನ್(-0.71%), HUL(-0.41%), NTPC(-0.33%)ನಷ್ಟ ಅನುಭವಿಸಿದ್ದಾರೆ.

Click it and Unblock the Notifications