ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕ್ ಸೇವೆ ಆರಂಭ

ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕ್ ರಾಜ್ಯದಲ್ಲಿರುವ ಏರ್‌ಟೆಲ್‌ ಮಳಿಗೆಗಳ ಮೂಲಕ ಬ್ಯಾಂಕಿಂಗ್ ಸೇವೆ ಒದಗಿಸಲಿದ್ದು, ಪ್ರಸ್ತುತ 12,000 ಮಳಿಗೆಗಳಲ್ಲಿ ಪ್ರಾಯೋಗಿಕ ಸೇವೆ ಆರಂಭವಾಗಿದೆ.

ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕ್ ಕರ್ನಾಟಕದ 12,000 ಚಿಲ್ಲರೆ ಮಳಿಗೆಗಳಲ್ಲಿ ಪ್ರಾಯೋಗಿಕ ಸೇವೆಗಳನ್ನು ಪ್ರಾರಂಭಿಸಿದೆ.

ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕ್ ರಾಜ್ಯದಲ್ಲಿರುವ ಏರ್‌ಟೆಲ್‌ ಮಳಿಗೆಗಳ ಮೂಲಕ ಬ್ಯಾಂಕಿಂಗ್ ಸೇವೆ ಒದಗಿಸಲಿದ್ದು, ಪ್ರಸ್ತುತ 12,000 ಮಳಿಗೆಗಳಲ್ಲಿ ಪ್ರಾಯೋಗಿಕ ಸೇವೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ 15 ಸಾವಿರ ಮಳಿಗೆಗಳಲ್ಲಿ ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕ್ ಸೇವೆ ಒದಗಿಸುವ ಗುರಿ ಹೊಂದಿದೆ. ಶೇ. 70ರಷ್ಟು ಮಳಿಗೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಪರಿಚಯಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಪ್ರಯೋಜನಗಳು

ಪ್ರಯೋಜನಗಳು

- ಉಳಿತಾಯ ಖಾತೆಗೆ ವರ್ಷಕ್ಕೆ ಶೇ. 7.25ರಷ್ಟು ಬಡ್ಡಿದರ ಲಭ್ಯವಿದೆ.
- ಏರ್ಟೆಲ್ ಖಾತೆಯಿಂದ ಏರ್ಟೆಲ್ ಗೆ ಶುಲ್ಕವಿಲ್ಲದೆ ಹಣ ವರ್ಗಾವಣೆ ಮಾಡಬಹುದು.
- ಏರ್ಟೆಲ್ ಮಳಿಗೆಗಳಲ್ಲಿ ಠೇವಣಿ ಇಡಲು ಮತ್ತು ನಗದು ಪಡೆಯಲು ಏರ್ಟೆಲ್ ಗ್ರಾಹಕರಿಗೆ ಅವಕಾಶ
- ಮೊದಲ ಬಾರಿಗೆ ರೂ. 500 ಠೇವಣಿ ಇಟ್ಟರೆ 500 ನಿಮಿಷ ಉಚಿತ ಕರೆ
ಪ್ರತಿ ಉಳಿತಾಯ ಖಾತೆಗೆ ರೂ. 1 ಲಕ್ಷದ ವೈಯಕ್ತಿಕ ಅಪಘಾತ ವಿಮೆ

ಮೊಬೈಲ್ ಸಂಖ್ಯೆ ಆಗಲಿದೆ ಖಾತೆ ಸಂಖ್ಯೆ

ಮೊಬೈಲ್ ಸಂಖ್ಯೆ ಆಗಲಿದೆ ಖಾತೆ ಸಂಖ್ಯೆ

ಈ ಸೇವೆ ಆಧಾರ್ ಆಧಾರಿತ ವ್ಯವಸ್ಥೆಯಾಗಿದ್ದು, ಬಯೊಮೆಟ್ರಿಕ್ ಮೂಲಕ ಖಾತೆ ದೃಢೀಕರಣಗೊಳಿಸಲಾಗುತ್ತದೆ. ಗ್ರಾಹಕರ ಮೊಬೈಲ್ ಸಂಖ್ಯೆಯೇ ಅವರ ಪೇಮೆಂಟ್ಸ್ ಬ್ಯಾಂಕ್ ಖಾತೆ ಸಂಖ್ಯೆ ಆಗಿರುತ್ತದೆ ಎಂದು ತಿಳಿಸಿದೆ.

ಏರ್‌ಟೆಲ್‌ ಮನಿ ಅಪ್ಲಿಕೇಶನ್

ಏರ್‌ಟೆಲ್‌ ಮನಿ ಅಪ್ಲಿಕೇಶನ್

ಏರ್‌ಟೆಲ್‌ ಮನಿ ಅಪ್ಲಿಕೇಶನ್ ಮೂಲಕ ಪೇಮೆಂಟ್ಸ್ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಇನ್ನಿತರ ಸೇವೆಗಳನ್ನು ಪಡೆಯಬಹುದು. ಸ್ಮಾರ್ಟ್ ಫೋನ್ ಇಲ್ಲದವರು 8800688006 ಸಂಖ್ಯೆಗೆ ಕರೆ ಮಾಡಿ ಈ ಸೇವೆಗಳನ್ನು ಪಡೆಯಲು ಅವಕಾಶವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+