ಬಿಎಸ್ಎನ್ಎಲ್ ಕೇವಲ 99 ರೂಪಾಯಿಗಳಿಗೆ ಅನಿಯಮಿತ ಸ್ಥಳೀಯ ಮತ್ತು ದೇಶಿಯ ಕರೆ ಮಾಡುವ ಸೌಲಭ್ಯವನ್ನು ನೀಡಿದೆ. ಉಚಿತ ಡೇಟಾ ಮತ್ತು ಉಚಿತ ಕರೆ ಸೌಲಭ್ಯವನ್ನು ಘೋಷಿಸಿದೆ.
ಸರ್ಕಾರದ ಸ್ವಾಧೀನ ಸಂಸ್ಥೆ ಬಿಎಸ್ಎನ್ಎಲ್ ಅನ್ ಲಿಮಿಟೆಡ್ ಉಚಿತ ಕರೆಗಳ ಹೊಸ ಆಫರ್ ಘೋಷಿಸಿದೆ.
ಟೆಲಿಕಾಂ ರಂಗದ ಎಲ್ಲ ಕಂಪನಿಗಳ ಮೇಲೆ ರಿಲಯನ್ಸ್ ಜಿಯೊ ಎಫೆಕ್ಟ್ ಬಿದ್ದಿದ್ದು, ಆಫರ್ ಗಳ ಮೇಲೆ ಆಫರ್ ಘೋಷಿಸಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ.
ಬಿಎಸ್ಎನ್ಎಲ್ ಕೇವಲ 99 ರೂಪಾಯಿಗಳಿಗೆ ಅನಿಯಮಿತ ಸ್ಥಳೀಯ ಮತ್ತು ದೇಶಿಯ ಕರೆ ಮಾಡುವ ಸೌಲಭ್ಯವನ್ನು ನೀಡಿದ್ದು, ಉಚಿತ ಡೇಟಾ ಸೌಲಭ್ಯವನ್ನು ಘೋಷಿಸಿದೆ.
BSNL ಸೇವೆಗಳು
* ಕೇವಲ 99 ರೂ.ಗಳಿಗೆ 28 ದಿನಗಳ ವ್ಯಾಲಿಡಿಟಿ
* ಅನಿಯಮಿತ ಸ್ಥಳೀಯ ಕರೆಗಳು
* ಉಚಿತ ಬಿಎಸ್ಎನ್ಎಲ್ ನಿಂದ ಬಿಎಸ್ಎನ್ಎಲ್ ಎಸ್ಟಿಡಿ ಕರೆಗಳು
* ಉಚಿತ 300 MB ಡೇಟಾ
ಅನಿಯಮಿತ ಸೌಲಭ್ಯ
ಈಗಾಗಲೇ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಅನಿಯಮಿತ 3G ಸೇವೆಗಳನ್ನು ರೂ. 1099ಕ್ಕೆ ಒಂದು ತಿಂಗಳ ಅವಧಿಗೆ ನೀಡುತ್ತಿದೆ. ಇನ್ನು 339 ರೂಪಾಯಿ ರೀಚಾರ್ಜ್ ಮಾಡಿಸಿಕೊಂಡರೆ ದೇಶದ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಸ್ಥಳೀಯ ಮತ್ತು ದೇಶಿಯ ಕರೆ ಮಾಡುವ ಸೌಲಭ್ಯ ಮತ್ತು 1GB ಡೇಟಾ ಪಡೆಯಬಹುದಾಗಿದೆ.
ಇಲ್ಲಿ ಆಫರ್ ಲಭ್ಯ
ಬಿಹಾರ, ಜಾರ್ಖಂಡ್, ಅಸ್ಸಾಂ, ಗುಜರಾತ್, ಕೋಲ್ಕತ್ತಾ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಛತ್ತೀಸ್'ಗಡ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದ ನೆಟ್ವರ್ಕ್ ಗಳಲ್ಲಿ ಈ ಪ್ಲಾನ್ ಲಭ್ಯವಿದ್ದು, ಇತರ ರಾಜ್ಯದ ಗ್ರಾಹಕರು ಈ ಆಫರ್ ಪಡೆಯಲು 119 ರಿಂದ 149 ರೂ ವ್ಯಯಿಸಬೇಕಾಗುತ್ತದೆ.
ಜಿಯೊಗೆ ಸ್ಪರ್ಧಿಯಾಗಿ ಆಫರ್
ಜಿಯೊ 4G ಉಚಿತ ಸೇವೆಗಳನ್ನು ನೀಡುತ್ತಿದ್ದು, ಇದಕ್ಕೆ ಸ್ಫರ್ಧಿಯಾಗಿ ಇತ್ತೀಚಿಗಷ್ಟೆ ಏರ್‌ಟೆಲ್, ಬಿಎಸ್ಎನ್ಎಲ್, ಐಡಿಯಾ, ವೋಡಾಫೋನ್ ತನ್ನ ದರಗಳನ್ನು ಕಡಿತಗೊಳಿಸಿದ್ದವು. ಈಗ ಮತ್ತೆ ಬಿಎಸ್ಎನ್ಎಲ್ ಹೊಸ ಆಫರ್ ಪರಿಚಯಿಸಿದ್ದು, ಟೆಲಿಕಾಂ ಸಂಸ್ಥೆಗಳ ಆಫರ್ ಸಮರ ಎಲ್ಲಿಯವರೆಗೂ ಮುಂದುವರೆಯುತ್ತದೆ ಎನ್ನುವುದನ್ನು ಗ್ರಾಹಕರು ಕಾದು ನೋಡಬೇಕಿದೆ.


Click it and Unblock the Notifications