ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ವಿದೇಶಿ ಬಂಡವಾಳ ಹರಿವಿನ ಕೊರತೆ ಷೇರುಪೇಟೆ ಮೇಲೆ ಪರಿಣಾಮ ಬೀರಿವೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ವಿದೇಶಿ ಬಂಡವಾಳ ಹರಿವಿನ ಕೊರತೆ ಷೇರುಪೇಟೆ ಮೇಲೆ ಪರಿಣಾಮ ಬೀರಿವೆ.
ದೂರಸಂಪರ್ಕ ಮತ್ತು ಗ್ರಾಹಕ ಸರಕುಗಳ ಕುಸಿತದಿಂದ ದೇಶಿ ಮಾರುಕಟ್ಟೆ ಎರಡು ವಾರಗಳಲ್ಲಿ ಅತಿ ಕೆಳಮಟ್ಟಕ್ಕೆ ಕುಸಿದಿದೆ. ಸೆನ್ಸೆಕ್ಸ್ ಸೂಚ್ಯಂಕ 26,374.70 ಅಂಶಗಳೊಂದಿಗೆ 115 ಅಂಕ ಕುಸಿತ ಕಂಡರೆ, ಎನ್ಎಸ್ಇ ನಿಪ್ಟಿ ಸೂಚ್ಯಂಕ 8,104.35 ಅಂಶಗಳೊಂದಿಗೆ 35.10 ಅಂಕ ನಷ್ಟದಲ್ಲಿ ದಿನದ ವಹಿವಾಟು ಅಂತ್ಯ ಕಂಡಿದೆ.

ಬಿಎಸ್ಇ ವಲಯದ ಸೂಚ್ಯಂಕಗಳಾದ, ಆರೋಗ್ಯ ವಲಯ ಶೇ. 0.85, ಗ್ರಾಹಕ ಸರಕು ಶೇ. 1.24, ಬಂಡವಾಳ ಸರಕು ಶೇ. 0.84, ಲೋಹ ಶೇ. 0.79 ಸ್ಥಿರಾಸ್ಥಿ ಶೇ. 0.69 ಆಟೋ ವಲಯ ಶೇ. 0.59 ರಷ್ಟು ಮತ್ತು ಬ್ಯಾಂಕಿಂಗ್ ವಲಯ ಶೇ.0.27ರಷ್ಟು ನಷ್ಟ ಅನುಭವಿಸಿವೆ.
ಇಂದಿನ ವಹಿವಾಟಿನಲ್ಲಿ ಎಚ್ಡಿಎಫ್ಸಿ ಶೇ. 1.58, ಭಾರ್ತಿ ಏರ್ಟೆಲ್ ಶೇ. 1.56, ಅದಾನಿ ಪೋರ್ಟ್ ಶೇ. 1.32, ಮಾರುತಿ ಸುಜುಕಿ ಶೇ. 1.32, ಎಸ್ಬಿಐ ಶೇ. 1.27, ಆಕ್ಸಿಸ್ ಬ್ಯಾಂಕ್ ಶೇ. 1.11 ಮತ್ತು ಎಲ್ ಅಂಡ್ ಟಿ ಶೇ. 1.02ರಷ್ಟು ಭಾರೀ ನಷ್ಟ ಅನುಭವಿಸಿದ್ದು, GAIL ಶೇ. 2.23, ಐಸಿಐಸಿಐ ಬ್ಯಾಂಕ್ ಶೇ. 0.51, ಆರ್ಐಎಲ್ ಶೇ. 0.43 ಮತ್ತು ಸಿಪ್ಲಾ ಶೇ. 0.43ರಷ್ಟು ಲಾಭ ಗಳಿಸಿವೆ.



Click it and Unblock the Notifications