ಜನೆವರಿ 15ರೊಳಗೆ ಅಡುಗೆ ಅನಿಲ ವಿತರಣೆ ನಗದು ರಹಿತ

ಜನೆವರಿ 15ರ ಒಳಗೆ ಬೆಂಗಳೂರು ನಗರದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ವಿತರಣೆ ಸಂಪೂರ್ಣವಾಗಿ ನಗದುರಹಿತ ಆಗಲಿದ್ದು, ಈ ಯೋಜನೆ ನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಿದ್ಧತೆಗೆ ಮುಂದಾಗಿದೆ.

ಜನೆವರಿ 15ರೊಳಗೆ ಬೆಂಗಳೂರು ನಗರದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ವಿತರಣೆ ಸಂಪೂರ್ಣವಾಗಿ ನಗದುರಹಿತ ಆಗಲಿದ್ದು, ಈ ಯೋಜನೆಯನ್ನು ನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಿದ್ಧತೆಗೆ ಮುಂದಾಗಿದೆ.

ಪ್ರಧಾನಿ ಮೋದಿಯವರ ನಗದುರಹಿತ ಆರ್ಥಿಕ ವ್ಯವಸ್ಥೆಯನ್ನು ಹೊಂದುವ ಕನಸನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವೂ ಕೈಜೋಡಿಸುತ್ತಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರ ಸೂಚನೆ ಮೇರೆಗೆ ಎಲ್‌ಪಿಜಿ ವಿತರಣೆಯನ್ನು ಸಂಪೂರ್ಣವಾಗಿ ನಗದು ರಹಿತಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ಉಪಕಾರ್ಯದರ್ಶಿ ಮಹೇಶ್‌ ತಿಳಿಸಿದರು.

ದೇಶದಾದ್ಯಂತ ಪ್ರತಿನಿತ್ಯ ಸರಾಸರಿ 40 ಲಕ್ಷ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದ್ದು, ನಿತ್ಯ ಸರಾಸರಿ ರೂ. 2 ಸಾವಿರ ಕೋಟಿಯಷ್ಟು ನಗದು ವ್ಯವಹಾರ ನಡೆಯುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ವಹಿವಾಟು ನಗದು ರಹಿತವಾಗಿ ನಡೆಯುವಂತೆ ಮಾಡುವ ಉದ್ದೇಶ ಈ ಯೋಜನೆ ಹೊಂದಿದೆ.

ಜನೆವರಿ 15ರೊಳಗೆ ಅಡುಗೆ ಅನಿಲ ವಿತರಣೆ ನಗದು ರಹಿತ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+