For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಆಪಲ್ ಸ್ಮಾರ್ಟ್‌ಫೋನ್ ತಯಾರಿಕೆ

ಸಿಲಿಕಾನ್ ಖ್ಯಾತಿಯ ನವೋದ್ಯಮಗಳ ನೆಚ್ಚಿನ ತಾಣ ಬೆಂಗಳೂರು 2017ರಲ್ಲಿ ಆಪಲ್ ಸಿಟಿ ಆಗಲಿದೆ.

By Siddu
|

ಸಿಲಿಕಾನ್ ಖ್ಯಾತಿಯ ನವೋದ್ಯಮಗಳ ನೆಚ್ಚಿನ ತಾಣ ಬೆಂಗಳೂರು 2017ರಲ್ಲಿ ಆಪಲ್ ಸಿಟಿ ಆಗಲಿದೆ.

ಜಾಗತಿಕ ನಂಬರ್ ಒನ್ ಬ್ರ್ಯಾಂಡ್ ಆಪಲ್ ಭಾರತದಲ್ಲಿ ತನ್ನ ಸ್ಮಾರ್ಟ್ಫೋನ್ ಗಳನ್ನು ತಯಾರಿಸಲು ಮುಂದಾಗಿದ್ದು, ಬೆಂಗಳೂರು ನಗರವನ್ನು ಆಯ್ಕೆ ಮಾಡಿದೆ. ಇದರಿಂದ ಸಾಪ್ಟ್ವೇರ್ ಹಬ್ ಬೆಂಗಳೂರಿಗೆ ಮತ್ತೊಂದು ಗರಿ ಸಿಗಲಿದ್ದು, ನಗರದ ಇಂಡಸ್ಟ್ರಿಯಲ್ ಏರಿಯಾ ಪೀಣ್ಯದಲ್ಲಿ ಇದಕ್ಕಾಗಿ ಆಪಲ್ ಕಂಪೆನಿ ಎಲ್ಲಾ ರೀತಿಯ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿದುಬಂದಿದೆ.

ಸ್ಮಾರ್ಟ್‌ಫೋನ್ ಕೈಗಾರಿಕಾ ಒಕ್ಕೂಟದ ಮಾಹಿತಿಯ ಪ್ರಕಾರ 2017 ವರ್ಷದ ಏಪ್ರಿಲ್‌ನಲ್ಲಿ ಆಪಲ್ ತನ್ನ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಯನ್ನು ಆರಂಭಿಸಲಿದೆ.

ಸಿಲಿಕಾನ್ ಸಿಟಿಯಲ್ಲಿ ಕೇವಲ ಆಪಲ್ ಸ್ಮಾರ್ಟ್‌ಫೋನ್‌ಗಳಲ್ಲದೇ, ಆಪಲ್ ಟಿವಿ, ಆಪಲ್ ವಾಚ್‌ಗಳು ಸಹ ಇಲ್ಲೇ ತಯಾರಾಗಲಿವೆ. ಆಪಲ್‌ ಕಂಪೆನಿಯ ಸಂಸ್ಥಾಪಕ ಮತ್ತು ಸಿಇಒ ಟೀಮ್ ಕುಕ್ ಭಾರತದಲ್ಲಿ ಪ್ರವಾಸ ಕೈಗೊಂಡಿದ್ದಾಗ ತಮ್ಮ ಕಂಪೆನಿಯ ಕೈಗಾರಿಕೆಯನ್ನು ಬೆಂಗಳೂರಿನಲ್ಲಿ ಆರಂಭಿಸಲು ಇಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ದೇಶದಲ್ಲಿ ಆಪಲ್‌ ಐಫೋನ್‌ಗಳಿಗೆ ಉತ್ತಮ ಮಾರುಕಟ್ಟೆ ಇದ್ದು, ಆಪಲ್‌ಗೆ ಪ್ರತಿವರ್ಷವೂ ಶೇ. 21ರಷ್ಟು ಆದಾಯ ಹೆಚ್ಚುತ್ತಿದೆ. ಆದರೆ ಆಪಲ್ ಸ್ಮಾರ್ಟ್‌ಫೋನ್‌ಗಳ ದರ ಹೆಚ್ಚಾಗಿರುವುದರಿಂದ ಲಾಭದ ಪ್ರಮಾಣ ಕೂಡ ಕಡಿಮೆಯಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಆಪಲ್ ಸ್ಮಾರ್ಟ್‌ಫೋನ್ ತಯಾರಿಕೆ

Read more about: mobile bangalore
English summary

Apple plans to make iPhones in Bengaluru from April

Apple plans to make iPhones for the Indian market in Bengaluru. Wistron, a Taiwanese OEM maker for Apple, is setting up a facility in Peenya, the city's industrial hub, to manufacture the iPhones. The facility will start production from next April, according to industry sources.
Story first published: Saturday, December 31, 2016, 14:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X