ನೋಟು ರದ್ದತಿ ಎಫೆಕ್ಟ್: ಜನಧನ ಖಾತೆಗಳಲ್ಲಿ 87 ಸಾವಿರ ಕೋಟಿ ಜಮಾ

ನೋಟು ರದ್ದತಿ ನಂತರ ಜನಧನ ಖಾತೆಗಳಲ್ಲಿನ ಠೇವಣಿ ಪ್ರಮಾಣ ಎರಡಕ್ಕಿಂತ ಹೆಚ್ಚು ಪಟ್ಟು ಏರಿಕೆಯಾಗಿದ್ದು, ರೂ. 87,000 ಕೋಟಿಗೆ ಹೆಚ್ಚಿದೆ.

ನೋಟು ರದ್ದತಿ ನಂತರ ಜನಧನ ಖಾತೆಗಳಲ್ಲಿನ ಠೇವಣಿ ಪ್ರಮಾಣ ಎರಡಕ್ಕಿಂತ ಹೆಚ್ಚು ಪಟ್ಟು ಏರಿಕೆಯಾಗಿದ್ದು, ರೂ. 87,000 ಕೋಟಿಗೆ ಹೆಚ್ಚಿದೆ.

ನವೆಂಬರ್ 10 ರಿಂದ ಡಿಸೆಂಬರ್ 23ರ ನಡುವಿನ ಅವಧಿಯಲ್ಲಿ 48 ಲಕ್ಷ ಖಾತೆಗಳಲ್ಲಿ ರೂ. 41,523 ಕೋಟಿ ಮೊತ್ತ ಜನಧನ ಖಾತೆಗಳಲ್ಲಿ ಜಮೆ ಆಗಿದೆ. ಜನಧನ ಯೋಜನೆಯಡಿ ಇಲ್ಲಿಯವರೆಗೆ 26 ಕೋಟಿ ಖಾತೆಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ವರದಿಯಲ್ಲಿ ತಿಳಿಸಿದೆ. ನೋಟು ನಿಷೇಧದ ನಿರ್ಧಾರವನ್ನು ಪ್ರಕಟಿಸಿದ ಮರು ದಿನ ಜನಧನ ಖಾತೆಗಳಿಗೆ ಸುಮಾರು 45,637 ಕೋಟಿ ರೂಪಾಯಿಯಷ್ಟು ಹಣ ಹರಿದುಬಂದಿತ್ತು.

ನೋಟು ರದ್ದತಿ ನಂತರ ಜನ್ ಧನ್ ಖಾತೆಗಳಲ್ಲಿ ಭಾರೀ ಪ್ರಮಾಣದ ಠೇವಣಿ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜನ್ ಧನ್ ಖಾತೆಗಳನ್ನು ಕಪ್ಪುಹಣ ಹೊಂದಿರುವವರು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದು ಕೇಂದ್ರ ಸರ್ಕಾರ ಖಾತೆದಾರರಿಗೆ ಎಚ್ಚರಿಕೆ ನೀಡಿತ್ತು.

ನವೆಂಬರ್ 30ರ ವರೆಗೆ ಸುಮಾರು 4.86 ಲಕ್ಷ ಖಾತೆಗಳಲ್ಲಿ ರೂ. 30,000 ದಿಂದ 50,000ವರೆಗೆ ನಗದು ಠೇವಣಿ ಇಡಲಾಗಿದೆ ಎಂದು ವರದಿ ಆಗಿದೆ.

ನೋಟು ರದ್ದತಿ ಎಫೆಕ್ಟ್: ಜನಧನ ಖಾತೆಗಳಲ್ಲಿ 87 ಸಾವಿರ ಕೋಟಿ ಜಮಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+