ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಸೇವಾ ಶುಲ್ಕ ಕಡ್ಡಾಯವಲ್ಲ!

ಹೋಟೆಲ್‌ ಮತ್ತು ರೆಸ್ಟೊರೆಂಟ್‌ಗಳಲ್ಲಿ ಪೂರೈಕೆ ಮಾಡಲಾಗುವ ಆಹಾರ, ತಿಂಡಿ ಬಿಲ್‌ಗೆ ಸರ್ವಿಸ್‌ ಚಾರ್ಜ್‌ ಪಾವತಿಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.

ಹೋಟೆಲ್‌ ಮತ್ತು ರೆಸ್ಟೊರೆಂಟ್‌ಗಳಲ್ಲಿ ಪೂರೈಕೆ ಮಾಡಲಾಗುವ ಆಹಾರ, ತಿಂಡಿ ಬಿಲ್‌ಗೆ ಸರ್ವಿಸ್‌ ಚಾರ್ಜ್‌ ಪಾವತಿಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.

ಹೋಟೆಲ್ ಗಳಲ್ಲಿನ ಊಟೋಪಚಾರ ತೃಪ್ತಿಕರವಾಗಿರದಿದ್ದರೆ ಗ್ರಾಹಕರು ಸರ್ವಿಸ್‌ ಚಾರ್ಜ್‌ ಪಾವತಿಸದಿರಬಹುದು. ಗ್ರಾಹಕರಿಗೆ ತೃಪ್ತಿಕರ ಎನಿಸಿದರೆ ಮಾತ್ರ ಸೇವಾ ಶುಲ್ಕ ಪಾವತಿಸಬಹುದು. ಹೀಗಾಗಿ ಹೋಟೆಲ್, ರೆಸ್ಟೊರೆಂಟ್ ಗಳಲ್ಲಿ ಪೂರೈಕೆಯಾಗುವ ಆಹಾರ ಬಿಲ್ ಗೆ ಸೇವಾ ಶುಲ್ಕ ಕಡ್ಡಾಯವಲ್ಲ.

ಸೂಚನಾ ಫಲಕ

ಸೂಚನಾ ಫಲಕ

ಹೋಟೆಲ್ ಗಳಲ್ಲಿ ಸೇವಾ ಶುಲ್ಕ ಕಡ್ಡಾಯವಾಗಿ ವಸೂಲಿ ಮಾಡದಿರುವ ಮತ್ತು ಗ್ರಾಹಕರಿಗೆ ಸೇವೆ ತೃಪ್ತಿ ತರದಿದ್ದರೆ ಬಿಲ್‌ ಪಾವತಿಸುವಾಗ ಸರ್ವಿಸ್ ಚಾರ್ಜ್ ಕೈಬಿಡಬಹುದು ಎನ್ನುವ ಸೂಚನಾ ಫಲಕಗಳನ್ನು ಅಳವಡಿಸುವ ಕುರಿತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.

ಗ್ರಾಹಕರ ದೂರು

ಗ್ರಾಹಕರ ದೂರು

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಶೇ. 5 ರಿಂದ ಶೇ 20ರವರೆಗೆ ಗರಿಷ್ಠ ಸರ್ವಿಸ್‌ ಚಾರ್ಜ್‌ ವಿಧಿಸುತ್ತಿವೆ. ಗ್ರಾಹಕರಿಗೆ ಒದಗಿಸುವ ಸೇವೆ ತೃಪ್ತಿಕರವಾಗಿರಲಿ ಅಥವಾ ಇಲ್ಲದಿರಲಿ ಸೇವಾ ಶುಲ್ಕ ಮಾತ್ರ ಕಡ್ಡಾಯವಾಗಿ ಪಾವತಿಸಬೇಕಾಗಿದೆ ಎಂದು ಗ್ರಾಹಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಮತ್ತು ಆಹಾರ ಸಚಿವಾಲಯ ತಿಳಿಸಿದೆ.

ಗ್ರಾಹಕರ ವಿವೇಚನೆಗೆ ಬಿಟ್ಟ ವಿಷಯ

ಗ್ರಾಹಕರ ವಿವೇಚನೆಗೆ ಬಿಟ್ಟ ವಿಷಯ

ಈ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಮತ್ತು ಆಹಾರ ಸಚಿವಾಲಯವು ಭಾರತದ ಹೋಟೆಲ್‌ ಸಂಘದ ಅಭಿಪ್ರಾಯ ಕೇಳಿತ್ತು. ಸೇವಾ ಶುಲ್ಕ ಸಂಪೂರ್ಣವಾಗಿ ಗ್ರಾಹಕರ ವಿವೇಚನೆಗೆ ಬಿಟ್ಟ ವಿಷಯವಾಗಿದ್ದು, ಊಟೋಪಚಾರ ವಿಷಯದಲ್ಲಿ ಗ್ರಾಹಕರಿಗೆ ತೃಪ್ತಿಯಾಗಿರದಿದ್ದರೆ ಗ್ರಾಹಕರು ಸರ್ವಿಸ್‌ ಚಾರ್ಜ್‌ ಪಾವತಿಸಬೇಕಾಗಿಲ್ಲ.

ಗ್ರಾಹಕರ ಹಿತರಕ್ಷಣಾ ಕಾಯ್ದೆ

ಗ್ರಾಹಕರ ಹಿತರಕ್ಷಣಾ ಕಾಯ್ದೆ

1986ರ ಗ್ರಾಹಕರ ಹಿತರಕ್ಷಣಾ ಕಾಯ್ದೆ ಪ್ರಕಾರ, ಸರಕಿನ ಪೂರೈಕೆ, ಮಾರಾಟ ಉತ್ತೇಜನ, ಸೇವೆ ಒದಗಿಸುವ ವಿಷಯದಲ್ಲಿ ನ್ಯಾಯಯುತವಲ್ಲದ ವಿಧಾನ ಅಳವಡಿಸಿಕೊಂಡಿದ್ದರೆ ಇಂತಹ ಸೇವೆಯ ವಿರುದ್ಧ ಗ್ರಾಹಕರು ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಲು ಅವಕಾಶವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+