For Quick Alerts
ALLOW NOTIFICATIONS  
For Daily Alerts

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಬದಲಾವಣೆ ಇಲ್ಲ

ಜನೆವರಿ-ಮಾರ್ಚ್ ತ್ರೈಮಾಸಿಕ ಅವಧಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಬದಲಿಸದೆ ಸ್ಥಿರವಾಗಿ ಉಳಿಸಿದೆ.

By Siddu
|

ಜನೆವರಿ-ಮಾರ್ಚ್ ತ್ರೈಮಾಸಿಕ ಅವಧಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಬದಲಿಸದೆ ಸ್ಥಿರವಾಗಿ ಉಳಿಸಿದೆ.

 

ಪ್ರಸಿದ್ದ ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಕಿಸಾನ್ ವಿಕಾಸ ಪತ್ರ, ಸುಕನ್ಯಾ ಸಮೃದ್ಧಿ ಮತ್ತು ಹಿರಿಯರ ಉಳಿತಾಯ ಯೋಜನೆ ಖಾತೆಗಳ ಮೇಲಿನ ಬಡ್ಡಿದರ ಸ್ಥಿರವಾಗಿ ಇರಲಿದೆ.

 

2016-17ನೇ ಸಾಲಿನ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ 3ನೇ ತ್ರೈಮಾಸಿಕ ಅವಧಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಶೇ. 0.01ರಷ್ಟು ಕಡಿತಗೊಳಿಸಿತ್ತು.

ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಬಡ್ಡಿದರ ಶೇ. 8ರಷ್ಟು ಇರಲಿದ್ದು, ಕಿಸಾನ್ ವಿಕಾಸ ಪತ್ರದ ಬಡ್ಡಿದರ ಶೇ. 7.7, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಬಡ್ಡಿದರ ಶೇ. 8ರಷ್ಟು ಇರಲಿದೆ.

ಪ್ರಸ್ತುತ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪ್ರತಿ ತ್ರೈಮಾಸಿಕಕ್ಕೆ ಪರಿಷ್ಕರಣೆ ಮಾಡಲಾಗುತ್ತದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಬದಲಾವಣೆ ಇಲ್ಲ

Read more about: ppf interest rates epf
English summary

Small Savings Scheme Investors As Interest Rates Kept Steady

The government on Monday kept the interest rate for the January-March quarter unchanged on popular small savings instruments like Public Provident Fund (PPF), Kisan Vikas Patra, Sukanya Samriddhi Account and Senior Citizens Savings Scheme. This will be a big relief to investors.
Story first published: Tuesday, January 3, 2017, 14:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X