ಅಮೆರಿಕಾದ H1-B ವೀಸಾದಲ್ಲಿ ಆಗಬಹುದಾದ ಬದಲಾವಣೆಗಳು ದೇಶದ ಐಟಿ ಉದ್ಯಮದ ಮೇಲೆ ಭಾರೀ ಪರಿಣಾಮಕ್ಕೆ ಕಾರಣವಾಗಿದೆ.
ಅಮೆರಿಕಾದ H1-B ವೀಸಾದಲ್ಲಿ ಆಗಬಹುದಾದ ಬದಲಾವಣೆಗಳು ದೇಶದ ಐಟಿ ಉದ್ಯಮದ ಮೇಲೆ ಭಾರೀ ಪರಿಣಾಮಕ್ಕೆ ಕಾರಣವಾಗಿದೆ.
ಅಮೆರಿಕಾದ ಸ್ಥಳೀಯರಿಗೆ ನೌಕರಿ ನೀಡುವ ಉದ್ದೇಶದಿಂದ ಎಚ್1-ಬಿ ವೀಸಾ ಮೇಲೆ ನಿರ್ಬಂಧ ಹಾಕಲು ಅಮೆರಿಕದ ಹೊಸ ಸರ್ಕಾರ ಮುಂದಾಗಿದ್ದು, ಇದು ದೇಶದ ಐಟಿ ಕಂಪನಿಗಳ ಮೇಲೆ ಭಾರಿ ಹೊಡೆತಕ್ಕೆ ಕಾರಣವಾಗಿದೆ.
ಷೇರು ಕುಸಿತ
ಶುಕ್ರವಾರ ಐಟಿ ಉದ್ಯಮದ ಷೇರುಗಳು ಶೇ. 4ರಷ್ಟು ಕುಸಿತ ಕಂಡಿದ್ದವು. ದೇಶದ ಪ್ರಮುಖ ಐಟಿ ಕಂಪೆನಿಗಳಾದ ಇನ್ಫೊಸಿಸ್ ಷೇರುಗಳ ಮೌಲ್ಯ ಶೇ. 2.5, ಟಿಸಿಎಸ್ ಶೇ. 2.18, ವಿಪ್ರೋ ಶೇ 2.18, ಟೆಕ್ ಮಹೀಂದ್ರ ಶೇ. 3.80, ಹೆಕ್ಸಾವೇರ್ ಟೆಕ್ನಾಲಜೀಸ್ ಶೇ 3.73, ಎಚ್‌ಸಿಎಲ್ ಟೆಕ್ ಶೇ. 3.5 ಷೇರುಗಳ ಮೌಲ್ಯ ಕುಸಿತ ಕಂಡಿತು.
ಡೊನಾಲ್ಡ್ ಟ್ರಂಪ್ ವಾದ
ಪ್ರಸ್ತುತ 60 ಸಾವಿರ ಅಮೆರಿಕನ್ ಡಾಲರ್ ಸಂಬಳ ಇದ್ದರೆ H-1B ವೀಸಾ ದೊರೆಯುತ್ತಿತ್ತು. ಅದನ್ನು ಈಗ ಕನಿಷ್ಠ 1 ಲಕ್ಷ ಅಮೆರಿಕನ್ ಡಾಲರ್ ಗೆ ಏರಿಸುವ ಉದ್ದೇಶ ಇದೆ. ಅಮೆರಿಕನ್ನರಿಗೆ ಉದ್ಯೋಗಾವಕಾಶ ಹೆಚ್ಚಿಸುವುದು ಈ ನಿಯಮದ ಹಿಂದಿನ ಉದ್ದೇಶವಾಗಿದೆ.
H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಕೆಲಸಗಾರರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಟ್ರಂಪ್ ವಾದ. ಸ್ಥಳೀಯರ ಉದ್ಯೋಗಾವಕಾಶ ಹೊರಗಿನವರ ಪಾಲಾಗಬಾರದು ಎಂಬ ಕಾರಣಕ್ಕೆ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿರುವ ಡೊನಾಲ್ಡ್ ಟ್ರಂಪ್ ವೀಸಾ ನೀತಿ ಜಾರಿಗೆ ತರಲು ಉದ್ದೇಶಿಸಿದ್ದಾರೆ.
ಯುಎಸ್ ಗೆ 86 ಸಾವಿರ ಉದ್ಯೋಗಿಗಳು
2014-15ರ ಅವಧಿಯಲ್ಲಿ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಕಂಪೆನಿಗಳು ಎಚ್1-ಬಿ ವೀಸಾದ ಅಡಿಯಲ್ಲಿ ಒಟ್ಟು 86 ಸಾವಿರದಷ್ಟು ಸಾಪ್ಟ್ವೇರ್ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸಿತ್ತು. ಆದರೆ, ಈಗ ನಿಪುಣ ಕೆಲಸಗಾರರ(Skilled worker) ವೀಸಾ ಸಂಪೂರ್ಣ ಸ್ಥಗಿತಗೊಂಡರೆ ಏನು ಗತಿ ಎಂಬ ಆತಂಕ ಮೂಡಿದೆ.
More From GoodReturns

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications