For Quick Alerts
ALLOW NOTIFICATIONS  
For Daily Alerts

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಲಾಂಚ್, 7.25% ಬಡ್ಡಿದರ ಘೋಷಣೆ

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ದೇಶದಾದ್ಯಂತ ರೂ. 3,000 ಕೋಟಿ ಆರಂಭಿಕ ಬಂಡವಾಳದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದು, ಉಳಿತಾಯ ಖಾತೆಗಳ ಮೇಲೆ ಶೇ. 7.25ರಷ್ಟು ಬಡ್ಡಿದರ ಘೋಷಿಸಿದೆ.

By Siddu
|

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ದೇಶದಾದ್ಯಂತ ರೂ. 3,000 ಕೋಟಿ ಆರಂಭಿಕ ಬಂಡವಾಳದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದು, ಉಳಿತಾಯ ಖಾತೆಗಳ ಮೇಲೆ ಶೇ. 7.25ರಷ್ಟು ಬಡ್ಡಿದರ ಘೋಷಿಸಿದೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಗುರುವಾರ ಬಿಡುಗಡೆಗೊಳಿಸಿದರು.

ಹೆಚ್ಚು ಬಡ್ಡಿದರ

ಹೆಚ್ಚು ಬಡ್ಡಿದರ

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಠೇವಣಿ ಮತ್ತು ಪಾವತಿಗಳನ್ನು ತೆಗೆದುಕೊಳ್ಳಲಿದ್ದು, ಸಾಲ ನೀಡುವುದಿಲ್ಲ. ಠೇವಣಿಗಳ ಮೇಲೆ ಶೇ. 7.25ರಷ್ಟು ಬಡ್ಡಿದರ ನೀಡುವುದರ ಮೂಲಕ ಗ್ರಾಹಕರನ್ನು ಆಕರ್ಷಿಸಲು ಸ್ಪರ್ಧೆ ಒಡ್ಡುತ್ತಿದೆ.

ಪ್ರಯೋಜನಗಳು

ಪ್ರಯೋಜನಗಳು

- ಉಳಿತಾಯ ಖಾತೆಗೆ ವರ್ಷಕ್ಕೆ ಶೇ. 7.25ರಷ್ಟು ಬಡ್ಡಿದರ ಲಭ್ಯವಿದೆ.
- ಏರ್ಟೆಲ್ ಖಾತೆಯಿಂದ ಏರ್ಟೆಲ್ ಗೆ ಶುಲ್ಕವಿಲ್ಲದೆ ಹಣ ವರ್ಗಾವಣೆ ಮಾಡಬಹುದು.
- ಏರ್ಟೆಲ್ ಮಳಿಗೆಗಳಲ್ಲಿ ಠೇವಣಿ ಇಡಲು ಮತ್ತು ನಗದು ಪಡೆಯಲು ಏರ್ಟೆಲ್ ಗ್ರಾಹಕರಿಗೆ ಅವಕಾಶ
- ಮೊದಲ ಬಾರಿಗೆ ರೂ. 500 ಠೇವಣಿ ಇಟ್ಟರೆ 500 ನಿಮಿಷ ಉಚಿತ ಕರೆ
- ಪ್ರತಿ ಉಳಿತಾಯ ಖಾತೆಗೆ ರೂ. 1 ಲಕ್ಷದ ವೈಯಕ್ತಿಕ ಅಪಘಾತ ವಿಮೆ

ಮೊಬೈಲ್ ಸಂಖ್ಯೆ ಆಗಲಿದೆ ಖಾತೆ ಸಂಖ್ಯೆ

ಮೊಬೈಲ್ ಸಂಖ್ಯೆ ಆಗಲಿದೆ ಖಾತೆ ಸಂಖ್ಯೆ

ಈ ಸೇವೆ ಆಧಾರ್ ಆಧಾರಿತ ವ್ಯವಸ್ಥೆಯಾಗಿದ್ದು, ಬಯೊಮೆಟ್ರಿಕ್ ಮೂಲಕ ಖಾತೆ ದೃಢೀಕರಣಗೊಳಿಸಲಾಗುತ್ತದೆ. ಗ್ರಾಹಕರ ಮೊಬೈಲ್ ಸಂಖ್ಯೆಯೇ ಅವರ ಪೇಮೆಂಟ್ಸ್ ಬ್ಯಾಂಕ್ ಖಾತೆ ಸಂಖ್ಯೆ ಆಗಿರುತ್ತದೆ ಎಂದು ತಿಳಿಸಿದೆ.

English summary

Airtel Launches Payments Bank, Offers 7.2% On Savings Accounts

Airtel Payments Bank on Thursday launched its nationwide operations with an initial investment of Rs 3,000 crore and offering an interest rate of 7.25 per cent for savings accounts.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X