For Quick Alerts
ALLOW NOTIFICATIONS  
For Daily Alerts

ಐಡಿಯ-ವೊಡಾಫೋನ್ ವಿಲೀನ; ಟೆಲಿಕಾಂ ರಂಗದಲ್ಲಿ ಸಂಚಲನ..!

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಐಡಿಯಾ ಸೆಲ್ಯುಲಾರ್ ಜೊತೆ ಭಾರತೀಯ ಚಟುವಟಿಕೆಗಳನ್ನು ವಿಲೀನಗೊಳ್ಳುವುದಕ್ಕೆ ಮಾತುಕತೆ ನಡೆಸಿರುವುದಾಗಿ ಲಂಡನ್ ಮೂಲದ ವೊಡಾಫೋನ್ ಸಂಸ್ಥೆ ತಿಳಿಸಿದೆ.

By Siddu
|

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಐಡಿಯಾ ಸೆಲ್ಯುಲಾರ್ ಜೊತೆ ಭಾರತೀಯ ಚಟುವಟಿಕೆಗಳನ್ನು ವಿಲೀನಗೊಳ್ಳುವುದಕ್ಕೆ ಮಾತುಕತೆ ನಡೆಸಿರುವುದಾಗಿ ಲಂಡನ್ ಮೂಲದ ವೊಡಾಫೋನ್ ಸಂಸ್ಥೆ ತಿಳಿಸಿದೆ.

 

ಭಾರತದ ಮಾರುಕಟ್ಟೆಯಲ್ಲಿರುವ ತೀವ್ರ ಸ್ಪರ್ಧೆಯನ್ನು ಎದುರಿಸಲು ಎಲ್ಲ ಷೇರುಗಳ ಈ ವಿಲೀನ ಪ್ರಕ್ರಿಯೆ ಸಹಕಾರಿಯಾಗಲಿದೆ ಎನ್ನಲಾಗಿದೆ. ಈ ವಿಲೀನ ಪ್ರಕ್ರಿಯೆ ಯಶಸ್ವಿಯ ನಂತರ ವೋಡಾಫೋನ್ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಆಗಲಿದ್ದು, ಈ ವಿಲೀನದೊಂದಿಗೆ ಐಡಿಯಾ, ವೊಡಾಫೋನ್ ಗೆ ಹೊಸ ಷೇರುಗಳನ್ನು ವಿತರಿಸಲಿದೆ. ದಿನದ ಪ್ರಾರಂಭದಲ್ಲಿ ವೊಡಾಫೋನ್ ಷೇರು ಮೌಲ್ಯ 3.5% ಏರಿಕೆ ಕಂಡಿತ್ತು. ಏರ್‌ಟೆಲ್‌ - ಜಿಯೋ ನಡುವೆ ಮತ್ತೆ ದರ ಸಮರ!

ವೋಡಾಫೋನ್ ಅತಿದೊಡ್ಡ ಟೆಲಿಕಾಂ ಸಂಸ್ಥೆ!

ವೋಡಾಫೋನ್ ಅತಿದೊಡ್ಡ ಟೆಲಿಕಾಂ ಸಂಸ್ಥೆ!

ವೊಡಾಫೋನ್ ದೇಶದ ಸುಮಾರು 37 ಬಿಲಿಯನ್ ಡಾಲರ್ ಟೆಲಿಕಾಂ ಸೇವಾ ವಲಯದ ಮೇಲೆ ಪ್ರಭುತ್ವ ಸಾಧಿಸಲು ಮಹತ್ವ ಹೆಜ್ಜೆ ಇಟ್ಟಿದ್ದು, ಆ ನಿಟ್ಟಿನಲ್ಲಿ ಆದಿತ್ಯಾ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲಾರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಈ ವಿಲೀನ ಪ್ರಕ್ರಿಯೆ ಯಶಸ್ವಿಯ ನಂತರ ವೋಡಾಫೋನ್ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಆಗಲಿದೆ.

ಶೇ. 42ರಷ್ಟು ಪಾಲು

ಶೇ. 42ರಷ್ಟು ಪಾಲು

ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ. 23ರಷ್ಟು ಪಾಲು ಹೊಂದಿರುವ ವೊಡಾಫೋನ್ ಹಾಗೂ ಶೇ. 19ರಷ್ಟು ಪಾಲು ಹೊಂದಿರುವ ಐಡಿಯಾ ವಿಲೀನವಾಗಲಿವೆ. ವಿಲೀನದ ನಂತರ ವೊಡಾಫೋನ್ ಸಂಸ್ಥೆ ಮಾರುಕಟ್ಟೆಯಲ್ಲಿ ಶೇ. 42ರಷ್ಟು ಪಾಲು ಹೊಂದಿ ಅಗ್ರ ಸ್ಥಾನಕ್ಕೇರಲಿದೆ. ಪ್ರಸ್ತುತ ಶೇ. 33ರಷ್ಟು ಪಾಲುಹೊಂದಿರುವ ಏರ್ ಟೆಲ್ ಲಿಮಿಟೆಡ್ ಸಂಸ್ಥೆ ಅಗ್ರಸ್ಥಾನದಲ್ಲಿದೆ.

ಜಿಯೋ ಎಫೆಕ್ಟ್
 

ಜಿಯೋ ಎಫೆಕ್ಟ್

ಜಿಯೋ 'ವೆಲ್‌ಕಮ್ ಆಫರ್' ಹೆಸರಿನಲ್ಲಿ ಮೂರು ತಿಂಗಳ ಕಾಲ ಉಚಿತ 4G ಡೇಟಾ ಮತ್ತು ಉಚಿತ ಅನಿಯಮಿತ ಕರೆ ಮಾಡುವ ಸೇವೆಯನ್ನು ನೀಡಿತ್ತು. ರಿಲಯನ್ಸ್ ಜಿಯೋ ಇದೀಗ ಮತ್ತೆ ಉಚಿತ ಕರೆ ಹಾಗೂ ಡೇಟಾ ಸೇವೆಗಳನ್ನು ಮಾರ್ಚ್ 2017ರ ತನಕ ವಿಸ್ತರಿಸಿದೆ. ಇದರಿಂದಾಗಿ ಇತರೆ ಟೆಲಿಕಾಂ ಕಂಪನಿಗಳ ನಡುವೆ ಬಾರೀ ಪೈಪೋಟಿ ಹೆಚ್ಚಾಗಿದ್ದು, ಜಿಯೋ ಎಫೆಕ್ಟ್ ಎಲ್ಲೆಡೆ ಮುಂದುವರೆದಿದೆ.

Read more about: reliance jio telecom vodafone airtel
English summary

Reliance Effect: Vodafone may join hands with Idea

Vodafone Group Plc doesn't have much of a choice but to accelerate onsolidation moves in India — likely with Idea with whom it is in talks — as the UK telecom major tries to counter Jio Infocomm in a key market where it has been struggling to ward off value erosion, add customers and grow revenue market share
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X