ಗಡಿಭಾಗದಲ್ಲಿ ಹೆಚ್ಚಾಗುತ್ತಿರುವ ಉಗ್ರ ದಾಳಿ ನಿವಾರಣೆಗೆ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಸುಮಾರು 20 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ತುರ್ತಾಗಿ ಖರೀದಿಸಲು ಮುಂದಾಗಿದೆ.
ಗಡಿಭಾಗದಲ್ಲಿ ಹೆಚ್ಚಾಗುತ್ತಿರುವ ಉಗ್ರ ದಾಳಿ ನಿವಾರಣೆಗೆ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಸುಮಾರು 20 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ತುರ್ತಾಗಿ ಖರೀದಿಸಲು ಮುಂದಾಗಿದೆ.
ಯಾವುದೇ ಸನ್ನಿವೇಶದಲ್ಲೂ ಯುದ್ದ ಆಗುವ ಸಂಭವದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಡುವ ಸಲುವಾಗಿ ಹಾಗೂ ಯಾವುದೇ ಘಳಿಗೆಯಲ್ಲಿ ಯುದ್ಧಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 20 ಸಾವಿರ ಕೋಟಿ ವೆಚ್ಚದಲ್ಲಿ ಶಸ್ತ್ರಾಸ್ತ್ರ ಖರೀದಿ ಮಾಡಲು ಮೂರು ತಿಂಗಳ ಹಿಂದೆಯೇ ಒಪ್ಪಂದ ಮಾಡಿಕೊಂಡಿದೆ.
ಸಮರ ನೌಕೆ, ವಿಮಾನ ಖರೀದಿ
ರೂ. 20 ಸಾವಿರ ಕೋಟಿಗಳಲ್ಲಿ ಅತ್ಯಾಧುನಿಕ ಟ್ಯಾಂಕರ್, ಪದಾತಿ ದಳದ ಶಸ್ತ್ರಾಸ್ತ್ರಗಳು, ಪರಿಕರಗಳು, ಸಮರ ನೌಕೆಗಳು ಹಾಗೂ ಸಮರ ವಿಮಾನಗಳನ್ನು ಖರೀದಿಸಿದೆ. ಒಂದು ವೇಳೆ ಯುದ್ಧ ಸಂಭವಿಸಿದರೆ ಯಾವುದೇ ಶಸ್ತ್ರಾಸ್ತ್ರ ಅಥವಾ ಇತರ ಪೂರಕ ಸೌಲಭ್ಯಗಳ ಕೊರತೆ ಇಲ್ಲದೇ, ಯುದ್ಧ ಮುಂದುವರಿಸಲು ಭಾರತೀಯ ಸೇನೆಗೆ ಸಾಧ್ಯವಾಗುವ ರೀತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಾಯುಪಡೆ ಒಪ್ಪಂದ
ಭಾರತೀಯ ವಾಯುಪಡೆ ಒಟ್ಟು ರೂ. 9,200 ಕೋಟಿ ಮೌಲ್ಯದ 43 ಒಪ್ಪಂದಗಳನ್ನುಮಾಡಿಕೊಂಡಿದೆ. ಸುಕೋಯ್- 30ಎಂಕೆಐ, ಮೀರಜ್-2000 ಹಾಗೂ ಎಂಐಜಿ-29 ಯುದ್ಧವಿಮಾನಗಳು, ಸಾಗಣೆ ವಿಮಾನಗಳಾದ ಐಎಲ್-76, ಮಿಡ್ ಏರ್ ರಿಫಿಲ್ಲರ್ ಐಎಲ್-78 ಗಳ ಖರೀದಿ ಮತ್ತು ವಾಯು ದಾಳಿ ಎಚ್ಚರಿಕೆ ನೀಡುವ ಫಾಲ್ಕನ್ AWACS ಕೂಡ ಒಪ್ಪಂದದಲ್ಲಿ ಸೇರಿದೆ.
ಭೂಸೇನೆ
ಭೂಸೇನೆ ರೂ. 5,800 ಕೋಟಿಯ 10 ಒಪ್ಪಂದಗಳನ್ನು ಮಾಡಿಕೊಂಡಿದ್ದು, ರಷ್ಯಾದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಯೊಂದಿಗೆ ಟಿ-90ಎಸ್ ಮತ್ತು ಟಿ-72 ಟ್ಯಾಂಕರ್ ಗಳಿಗೆ ಅಳವಡಿಸುವ 125 MMAPFDS ಕಾಂಕುರ್ಸ್ ಟ್ಯಾಂಕರ್ ನಿರೋಧಕ ಕ್ಷಿಪಣಿ, ಸ್ಮರ್ಚ್ ರಾಕೆಟ್ ಗಳನ್ನು ಖರೀದಿಸಿದೆ. ನೌಕಾದಳ ಅತ್ಯಾಧುನಿಕ ಸಮರ ನೌಕೆಗಳು, ಕ್ಷಿಪಣಿಗಳು ಮತ್ತು ಆರ್ಟಿಲರಿ ಗನ್ ಗಳನ್ನು ಖರೀದಿ ಮಾಡಿದೆ.


Click it and Unblock the Notifications