ಹೊಸ ಮೊಬೈಲ್ ಸಿಮ್ ಸಂಪರ್ಕ ಪಡೆಯಲು ಬಯಸುವ ಗ್ರಾಹಕರು ಇನ್ನು ಮುಂದೆ ಆಧಾರ್ ಆಧಾರಿತ ಇ–ಕೆವೈಸಿ(know your customer) ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ.
ಹೊಸ ಮೊಬೈಲ್ ಸಿಮ್ ಸಂಪರ್ಕ ಪಡೆಯಲು ಬಯಸುವ ಗ್ರಾಹಕರು ಇನ್ನು ಮುಂದೆ ಆಧಾರ್ ಆಧಾರಿತ ಇ-ಕೆವೈಸಿ(know your customer) ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ.
ಕೇಂದ್ರ ಸರ್ಕಾರ ಈ ಹೊಸ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ಮುಂದೆ ಇಟ್ಟಿದೆ. ಅಲ್ಲದೇ ಈಗಾಗಲೇ ಇರುವ ಮೊಬೈಲ್ ಬಳಕೆದಾರರ ವಿವರಗಳನ್ನು ಪರಿಶೀಲನೆಗಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಕೋರ್ಟ್‌ಗೆ ತಿಳಿಸಿದೆ.
ನಕಲಿ ಗ್ರಾಹಕರ ತಡೆಗೆ ಕ್ರಮ
ನಕಲಿ ಮೊಬೈಲ್ ಸಂಪರ್ಕಗಳನ್ನು ಪಡೆಯುವ ಗ್ರಾಹಕರಿಗೆ ಹಾವಳಿಗೆ ಕಡಿವಾಣ ಹಾಕುವುದು ಹಾಗೂ ಗ್ರಾಹಕರ ಗುರುತನ್ನು ಖಾತರಿ ಪಡಿಸುವುದಕ್ಕಾಗಿ ಈ ನೂತನ ಕ್ರಮ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
100 ಕೋಟಿ ಗ್ರಾಹಕರ ವಿವರ ದಾಖಲು
ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದು, ಒಂದು ವರ್ಷದ ಒಳಗಾಗಿ ದೇಶದಾದ್ಯಂತ ಇರುವ 100 ಕೋಟಿ ಮೊಬೈಲ್ ಗ್ರಾಹಕರ ಗುರುತು- ವಿವರಗಳನ್ನು ದಾಖಲಿಸಿಕೊಳ್ಳಲು ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದರು.
ಶೇ. 90ರಷ್ಟು ಪ್ರೀ-ಪೇಯ್ಡ್ ಬಳಕೆದಾರರು
ದೇಶದಲ್ಲಿ ಒಟ್ಟು ಮೊಬೈಲ್ ಬಳಕೆದಾರರಲ್ಲಿ ಶೇ. 90ರಷ್ಟು ಜನರು ಪ್ರೀ-ಪೇಯ್ಡ್ ಸಂಪರ್ಕ ಹೊಂದಿದ್ದಾರೆ. ಸಣ್ಣಪುಟ್ಟ ಅಂಗಡಿಗಳೂ ಮೊಬೈಲ್ ರೀ-ಚಾರ್ಜ್ ಮಾಡುವುದರಿಂದ ಅಂತಹ ಸಂದರ್ಭದಲ್ಲಿ ಗುರುತಿನ ವಿವರಗಳನ್ನು ಕೇಳಲು ಸಾಧ್ಯವಿಲ್ಲ. ಕೇಳಿದರೆ ಕೊಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಪ್ರಸ್ತುತ ಮೊಬೈಲ್ ಬಳಕೆದಾರರು ಮತ್ತು ಮುಂದಿನ ದಿನಗಳಲ್ಲಿ ಸಿಮ್ ಸಂಪರ್ಕ ಪಡೆಯುವವರ ಗುರುತು ಮತ್ತು ವಿಳಾಸಗಳನ್ನು ದೃಢಪಡಿಸಿಕೊಳ್ಳಲು ಯಾವ ನೂತನ ಕ್ರಮಗಳನ್ನು ಜಾರಿ ತರಬಹುದು ಎಂಬುದನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.


Click it and Unblock the Notifications