For Quick Alerts
ALLOW NOTIFICATIONS  
For Daily Alerts

ತೆರಿಗೆ ಇಲಾಖೆ: 2.5 ಲಕ್ಷಕ್ಕಿಂತ ಹೆಚ್ಚು ಹಣ ಜಮೆ ಮಾಡಿದರೆ ಈ ನಿಯಮ ಅನ್ವಯ

ಪ್ರಧಾನಿ ಮೋದಿಯವರು ನೋಟು ರದ್ದತಿ ಮಾಡಿದ ನಂತರ ಬ್ಯಾಂಕ್‌ ಖಾತೆಗಳಲ್ಲಿ ರೂ. 2.5 ಲಕ್ಷಕ್ಕಿಂತ ಹೆಚ್ಚು ಹಣ ಜಮೆ ಮಾಡುವವರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗುವುದು ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

By Siddu
|

ಪ್ರಧಾನಿ ಮೋದಿಯವರು ನೋಟು ರದ್ದತಿ ಮಾಡಿದ ನಂತರ ಬ್ಯಾಂಕ್‌ ಖಾತೆಗಳಲ್ಲಿ ರೂ. 2.5 ಲಕ್ಷಕ್ಕಿಂತ ಹೆಚ್ಚು ಹಣ ಜಮೆ ಮಾಡುವವರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗುವುದು ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

 

ವ್ಯಕ್ತಿ ಖಾತೆಗೆ ಜಮೆ ಮಾಡುವ ಮೊತ್ತ ಆತನ ಆದಾಯ ತೆರಿಗೆ ಲೆಕ್ಕಪತ್ರದ ಜತೆ ಹೊಂದಾಣಿಕೆ ಆಗದಿದ್ದರೆ ಅಂಥ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಆದಾಯ ತಾಳೆ ಆಗದಿದ್ದರೆ ಕ್ರಮ

ಆದಾಯ ತಾಳೆ ಆಗದಿದ್ದರೆ ಕ್ರಮ

ಅಂಕಿ-ಅಂಶ/ದತ್ತಾಂಶ ವಿಶ್ಲೇಷಣೆ ಮೂಲಕ ಹಣ ಜಮೆ ಮಾಡಿದ ವ್ಯಕ್ತಿಗಳ ವಿವರ ಇಲಾಖೆ ಪರಿಶೀಲನೆ ಮಾಡಲಿದೆ. ಕಳೆದ ವರ್ಷದಲ್ಲಿ ವ್ಯಕ್ತಿ ಸಲ್ಲಿಸಿದ್ದ ಆದಾಯ ತೆರಿಗೆ ಲೆಕ್ಕ ಹಾಗೂ ಜಮೆ ಮಾಡಿದ ಮೊತ್ತದ ನಡುವೆ ಹೊಂದಾಣಿಕೆ ಆಗದಿದ್ದರೆ ಮಾತ್ರ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಪ್ರಾಮಾಣಿಕರಿಗೆ ಭಯವಿಲ್ಲ

ಪ್ರಾಮಾಣಿಕರಿಗೆ ಭಯವಿಲ್ಲ

ಪ್ರಾಮಾಣಿಕರು, ನಿಷ್ಟಾವಂತರು ಭಯಪಡುವ ಅಗತ್ಯವಿಲ್ಲ. ಕಾನೂನುಬದ್ದವಾಗಿ ವ್ಯವಹಾರ ನಡೆಸುವವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ. ರೂ. 2.5 ಲಕ್ಷದವರೆಗೆ ಹಣ ಜಮೆ ಮಾಡಿದವರನ್ನು ಪ್ರಶ್ನಿಸುವುದಿಲ್ಲ ಎಂದು ಪ್ರಧಾನಿಯವರು ಕೂಡ ಹೇಳಿದ್ದಾರೆ.

ತೆರಿಗೆ ಇಲಾಖೆಯ ಕ್ರಮಗಳೇನು?
 

ತೆರಿಗೆ ಇಲಾಖೆಯ ಕ್ರಮಗಳೇನು?

- ಪ್ರತಿ ವರ್ಷ ವ್ಯಕ್ತಿಯೊಬ್ಬ ರೂ. 10 ಲಕ್ಷ ಸಂಪಾದನೆ ಮಾಡಿ ಕಾನೂನುಬದ್ದವಾಗಿ ತೆರಿಗೆ ಪಾವತಿಸುತ್ತಿದ್ದರೆ, ಆ ವ್ಯಕ್ತಿ ರೂ. 3 ಲಕ್ಷದವರೆಗೆ ಜಮೆ ಮಾಡಿದ್ದರೆ ಇಲಾಖೆ ಕೇಳುವುದಿಲ್ಲ.
- ವ್ಯಕ್ತಿಯ ಆದಾಯ ಹಾಗೂ ಜಮೆ ಮೊತ್ತದ ನಡುವೆ ಯಾವುದೇ ಹೋಲಿಕೆ ಆಗದಿದ್ದರೆ ಅಂಥ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.

- ಸತತವಾಗಿ ಮೂರು ವರ್ಷಗಳಿಂದ ವ್ಯಕ್ತಿಯೊಬ್ಬ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದೆ ನೋಟು ನಿಷೇಧದ ನಂತರದಲ್ಲಿ ರೂ. 5 ಲಕ್ಷ ಜಮಾ ಮಾಡಿದ್ದರೆ ಅಂಥ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗುತ್ತದೆ.
- ಕಂಪೆನಿಗಳು ಆದಾಯ ಮತ್ತು ಖರ್ಚಿನ ವಿವರದಲ್ಲಿ ತಮ್ಮ ಬಳಿ ರೂ. 10 ಲಕ್ಷ ನಗದು ಇದೆ ಎಂದು ಹೇಳಿಕೊಂಡು, ಅದರಲ್ಲಿ ರೂ. 5 ಲಕ್ಷ ಜಮಾ ಮಾಡಿದ್ದರೆ ಇಲಾಖೆ ಯಾವುದೇ ವಿಚಾರಣೆ ಮಾಡುವುದಿಲ್ಲ.

- ಒಬ್ಬ ವ್ಯಕ್ತಿ ರೂ. 2.5 ಲಕ್ಷಕ್ಕೆ ಆದಾಯ ತೆರಿಗೆ ಲೆಕ್ಕ ಸಲ್ಲಿಸಿ, ಬೇರೆ ಬೇರೆ ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು ರೂ. 10 ಲಕ್ಷ ಜಮೆ ಮಾಡಿದ್ದರೆ ವಿಚಾರಣೆಗೆ ಒಳಪಡಿಸಲಾಗುತ್ತದೆ.

- ಹಣ ಜಮೆಗೆ ಸಂಬಂಧಿಸಿದ ವಿವರಣೆಗಳನ್ನು ತೆರಿಗೆ ಇಲಾಖೆ ವೆಬ್‌ಸೈಟ್‌ ಮೂಲಕ ಸಲ್ಲಿಸಬಹುದು.

English summary

Taxman not to ask questions on deposits up to Rs 2.5 lakh: I-T dept

Providing clarity on scrutiny of deposits made in banks post demonetisation, the I-T department said on Monday that no questions will be asked about deposits of up to Rs 2.5 lakh and only those accounts will be probed that do not match the tax returns.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X