ಚಾಲಕರು ಹಾಗೂ ಮಾಲೀಕರು ಓಲಾ ಹಾಗೂ ಉಬರ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಚಿಂತನೆ ನಡೆಸಿದ್ದು, ಇದರ ಫಲವಾಗಿ 'ಎಚ್‌ಡಿಕೆ ಕ್ಯಾಬ್ಸ್' ಅಸ್ತಿತ್ವಕ್ಕೆ ಬರುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಮೊಬೈಲ್ ಆಧಾರಿತ ಕ್ಯಾಬ್ ಉದ್ಯಮಕ್ಕೆ ಹೂಡಿಕೆದಾರರಾಗಲು ಮುಂದಾಗಿದ್ದಾರೆ.
ಚಾಲಕರು ಹಾಗೂ ಮಾಲೀಕರು ಓಲಾ ಹಾಗೂ ಉಬರ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಚಿಂತನೆ ನಡೆಸಿದ್ದು, ಇದರ ಫಲವಾಗಿ 'ಎಚ್‌ಡಿಕೆ ಕ್ಯಾಬ್ಸ್' ಅಸ್ತಿತ್ವಕ್ಕೆ ಬರುತ್ತಿದೆ.
ಯುಗಾದಿ ಹಬ್ಬದಂದು ಎಚ್‌ಡಿಕೆ ಆಪ್ ಬಿಡುಗಡೆಗೊಳಿಸಿ ಎಚ್‌ಡಿಕೆ ಕ್ಯಾಬ್ಸ್ ಸೇವೆಗೆ ಚಾಲನೆ ದೊರಕಲಿದೆ.
ಪ್ರತಿ ಕಿ.ಮಿ ದರ
ದರ ಎಷ್ಟು ವಿಧಿಸಬೇಕು ಎಂಬುದರ ಬಗ್ಗೆ ನಿರ್ಧರಿಸಲಾಗಿಲ್ಲ. ಆದರೆ ಮಿನಿ ಕ್ಯಾಬ್ ಗಳಿಗೆ ಪ್ರತಿ ಕಿ.ಮಿ ಗೆ ರೂ. 10-12 ಮತ್ತು ಫ್ರೈಮ್ ಕ್ಯಾಬ್ ಗಳಿಗೆ ಪ್ರತಿ ಕಿ.ಮಿಗೆ rರು. 12-14 ವಿಧಿಸಲಾಗುವುದು ಎಂದು ಹೇಳಲಾಗಿದೆ.
ಎಚ್‌ಡಿಕೆ ಆಪ್ ಉದ್ದೇಶ
ವಾಣಿಜ್ಯಾತ್ಮಕ ಉದ್ದೇಶಗಳಿಗಾಗಿ ಈ ಆಪ್ ಅಭಿವೃದ್ಧಿ ಪಡಿಸಿಲ್ಲ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾದಾಗ ಚಾಲಕರು ಅಸಾಯಕರಾಗುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ಸುಭದ್ರತೆಗಾಗಿ ಇಂತಹ ಉದ್ಯಮದ ಅಗತ್ಯವಿದೆ ಎಂದು ಪರಿಗಣಿಸಿ ಈ ಉದ್ಯಮ ಪ್ರಾರಂಭಿಸಲಾಗುತ್ತದೆ. ಓಲಾ ಮತ್ತು ಉಬರ್ ಆಪ್ ಗಳಂತೆಯೆ ಎಚ್‌ಡಿಕೆ ಆಪ್ ಶೀಘ್ರದಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಕಚೇರಿ ನಿರ್ವಹಣೆಗೆ 2%
ಚಾಲಕರು, ಮಾಲಿಕರು ಸಹಕಾರ ಸಂಘ ರಚಿಸಿ ಅದರ ಮೂಲಕ ಆಪ್ ನಿರ್ವಹಣೆ ಮಾಡಬೇಕು. ದುಡಿಯುವ ಸಂಪಾದನೆಯಲ್ಲಿ ಕ್ಯಾಬ್ ಚಾಲಕರು ಶೇ. 2ರಷ್ಟು ಮಾತ್ರ ಕಚೇರಿ ನಿರ್ವಹಣೆಗೆ ನೀಡಬೇಕು. ಲಾಭದಲ್ಲಿನ ಸಂಪೂರ್ಣ ಪಾಲು ಚಾಲಕರು ಮತ್ತು ಮಾಲೀಕರಿಗೆ ಸೇರಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಆಟೊ ಸೇವೆ
ಎಚ್‌ಡಿಕೆ ಕ್ಯಾಬ್ ಅಡಿಯಲ್ಲಿ ಆಟೊ ಸೇವೆಯನ್ನೂ ಕೂಡ ಒದಗಿಸಲು ಚಿಂತಿಸಲಾಗಿದೆ. ಗ್ರಾಹಕರು ಟ್ಯಾಕ್ಸಿ ಸೇವೆ ಜತೆ ಆಟೊ ಸೇವೆಯನ್ನು ಪಡೆಯಲು ಇಚ್ಛಿಸುತ್ತಾರೆ. ಆದರಿಂದ ಆಟೊ ಚಾಲಕರಿಗೂ ಎಚ್‌ಡಿಕೆ ಕ್ಯಾಬ್ ನಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ನಿರ್ಧರಿಸಲಾಗಿದೆ.


Click it and Unblock the Notifications