ಮುಂಬೈ ಷೇರುಪೇಟೆಯಲ್ಲಿ ಗೂಳಿ ಅಬ್ಬರ
ದೇಶಿಯ ಷೇರುಪೇಟೆಯಲ್ಲಿ ಗೂಳಿ ಅಬ್ಬರ ಇಂದು ಜೋರಾಗಿದ್ದು, ಎನ್ಎಸ್ಇ ಸೂಚ್ಯಂಕ ಸಕರಾತ್ಮಕವಾಗಿ ದಾಖಲೆಯ ಪ್ರಮಾಣದಲ್ಲಿ ಕೊನೆಗೊಂಡಿದೆ.
ದೇಶಿಯ ಷೇರುಪೇಟೆಯಲ್ಲಿ ಗೂಳಿ ಅಬ್ಬರ ಇಂದು ಜೋರಾಗಿದ್ದು, ಎನ್ಎಸ್ಇ ಸೂಚ್ಯಂಕ ಸಕರಾತ್ಮಕವಾಗಿ ದಾಖಲೆಯ ಪ್ರಮಾಣದಲ್ಲಿ ಕೊನೆಗೊಂಡಿದೆ.
ಎನ್ಎಸ್ಇ ಸೂಚ್ಯಂಕ 64.1 ಅಂಕ ಚೇತರಿಕೆ ಕಂಡು 9237.85 ಅಂಶ ಲಾಭದೊಂದಿಗೆ ದಿನದ ವಹಿವಾಟನ್ನು ಮುಗಿಸಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್ಇ) ಭಾರೀ ಗಳಿಕೆಯನ್ನು ಕಂಡಿದ್ದು, 29,910.22 ಅಂಶಗಳೊಂದಿಗೆ 289.72 ಅಂಕಗಳಲ್ಲಿ ಸಕರಾತ್ಮಕ ಅಂತ್ಯ ಕಂಡಿದೆ.
ಬಿಎಸ್ಇ ವಲಯದ ಸೂಚ್ಯಂಕಗಳಾದ ಬಂಡವಾಳ ಸರಕು ಸೂಚ್ಯಂಕ ಶೇ. 3.47ರಷ್ಟು, ಆರೋಗ್ಯ ಸೂಚ್ಯಂಕ ಶೇ. 1.05, ಮೂಲಸೌಕರ್ಯ ಸೂಚ್ಯಂಕ 0.86 ಮತ್ತು ತೈಲ ಮತ್ತು ಅನಿಲ ಶೇ. 0.77ರಷ್ಟು ಲಾಭ ಗಳಿಸಿವೆ.
ಎಲ್&ಟಿ(+5.26%), ಡಾ ರೆಡ್ಡೀಸ್(+4.32%), ರಿಲಯನ್ಸ್(+3.94%), ಐಸಿಐಸಿಐ ಬ್ಯಾಂಕ್(+3.48%) ಮತ್ತು ಗೈಲ್(+2.28%) ಅಗ್ರ ಐದು ಸೆನ್ಸೆಕ್ಸ್ ಲಾಭದಾರರಾಗಿದ್ದು, ಭಾರ್ತಿ ಏರ್ಟೆಲ್(-2,37%), ವಿಪ್ರೊ(-1.6%), ಇನ್ಫೋಸಿಸ್(-1.11%), ಬಜಾಜ್ ಆಟೋ (-0.87%) ಮತ್ತು ಟಿಸಿಎಸ್(-0.73%)ನಷ್ಟ ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ.



Click it and Unblock the Notifications