ನೋಟು ರದ್ದತಿ ನಂತರ(ನವೆಂಬರ್ 9, 2016) ಜನವರಿ 10, 2017ರ ನಡುವಿನ ಅವಧಿಯಲ್ಲಿ ದೇಶದಾದ್ಯಂತ ವಿವಿಧ ಕಾನೂನು ಜಾರಿ ಸಂಸ್ಥೆಗಳು ಒಟ್ಟು ರೂ. 5,400 ಕೋಟಿ ಅಘೋಷಿತ ಆದಾಯವನ್ನು ಪತ್ತೆ ಮಾಡಿವೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನೋಟು ರದ್ದತಿ ನಂತರ(ನವೆಂಬರ್ 9, 2016) ಜನವರಿ 10, 2017ರ ನಡುವಿನ ಅವಧಿಯಲ್ಲಿ ದೇಶದಾದ್ಯಂತ ವಿವಿಧ ಕಾನೂನು ಜಾರಿ ಸಂಸ್ಥೆಗಳು ಒಟ್ಟು ರೂ. 5,400 ಕೋಟಿ ಅಘೋಷಿತ ಆದಾಯವನ್ನು ಪತ್ತೆ ಮಾಡಿವೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನೋಟು ರದ್ದತಿಯ ನಂತರ ಸರ್ಕಾರವನ್ನು ವಂಚಿಸಲು ಚಿನ್ನ ಖರೀದಿಸಲು ಹಳೆಯ ನೋಟುಗಳನ್ನು ಬಳಸಿದ್ದೂ ಪ್ರಮುಖ ಮಾರ್ಗ ಎನ್ನುವುದು ಗಮನಕ್ಕೆ ಬಂದಿದೆ. ಅಲ್ಲದೇ ಇನ್ನೂ ಹಲವು ಮಾರ್ಗಗಳನ್ನು ಅನುಸರಿಸಲಾಗಿತ್ತು ಎನ್ನಲಾಗಿದೆ.
ಅಪರೇಷನ್ ಕ್ಲೀನ್ ಮನಿ
ಸಾರ್ವಜನಿಕರು 2016ರ ನವೆಂಬರ್ 9ರಿಂದ ಡಿಸೆಂಬರ್ ಅಂತ್ಯದವರೆಗಿನ ಅವಧಿಯಲ್ಲಿ ಬ್ಯಾಂಕುಗಳಲ್ಲಿ ಮಾಡಿದ ನಗದು ಜಮೆ, ಡೇಟಾ ವಿಶ್ಲೇಷಣೆ, ಇ-ಪರಿಶೀಲನೆ ಮತ್ತು ಕಾನೂನು ಜಾರಿ ಸಂಸ್ಥೆಗಳು ಮಾಡಿದ ದಾಳಿಗಳನ್ನು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ 'ಅಪರೇಷನ್ ಕ್ಲೀನ್ ಮನಿ' ಎಂಬ ಅಭಿಯಾನವನ್ನು ಜನವರಿ 31ರಂದು ಆರಂಭಿಸಿತ್ತು.
ನೋಟಿಸ್ ಜಾರಿ
ಆದಾಯ ತೆರಿಗೆ ಇಲಾಖೆಯು ನೋಟು ರದ್ದತಿ ನಂತರದಿಂದ 2017ರ ಜನವರಿ 10ರ ನಡುವಿನ ಅವಧಿಯಲ್ಲಿ ದೇಶದ ನಾನಾ ಕಡೆಗಳಲ್ಲಿ ವಿವಿಧ ವ್ಯಕ್ತಿಗಳ ಮೇಲೆ 1,100 ದಾಳಿಗಳನ್ನು ನಡೆಸಿದೆ. ಈ ಅವಧಿಯಲ್ಲಿ ಅನುಮಾನಾಸ್ಪದವಾಗಿ ಬ್ಯಾಂಕುಗಳಲ್ಲಿ ಭಾರಿ ಮೊತ್ತ ಜಮೆ ಮಾಡಿದ 5,100 ಜನರಿಗೆ ಪರಿಶೀಲನೆಗಾಗಿ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಇಲಾಖೆ ಹೇಳಿದೆ.
610 ಕೋಟಿ ನಗದು ಜಪ್ತಿ
ತೆರಿಗೆ ಇಲಾಖೆ ಮಾಡಿದ ದಾಳಿ ಸಂದರ್ಭದಲ್ಲಿ ರೂ. 610 ಕೋಟಿ ನಗದು ಹಣವನ್ನು(ರೂ. 513ಕೋಟಿ ಹಳೆ ನೋಟು ಮತ್ತು ರೂ. 110 ಕೋಟಿ ಹೊಸ ನೋಟು) ಆದಾಯ ತೆರಿಗೆ ಇಲಾಖೆ ಹಾಗೂ ಇತರ ಸರ್ಕಾರಿ ಸಂಸ್ಥೆಗಳು ಜಪ್ತಿ ಮಾಡಿದ್ದವು ಎಂದು ತಿಳಿಸಿದೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications