Englishहिन्दी മലയാളം தமிழ் తెలుగు

ಫ್ಲಿಪ್‌ಕಾರ್ಟ್-ಇಬೇ ಸಹಭಾಗಿತ್ವ: ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಸಂಚಲನ!

Written By: Siddu
Subscribe to GoodReturns Kannada

ಫ್ಲಿಪ್‌ಕಾರ್ಟ್ ಅತಿದೊಡ್ಡ ಬಂಡವಾಳ ಸಂಗ್ರಹವನ್ನು ಘೋಷಣೆ ಮಾಡಿದ್ದು, ಭಾರತದಲ್ಲಿನ ಇಬೇ ಸಂಸ್ಥೆಯನ್ನು ಖರೀದಿಸುವುದಾಗಿ ಹೇಳಿದೆ!

ಬೆಂಗಳೂರಿನ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಸಾಫ್ಟ್‌ವೇರ್‌ ದಿಗ್ಗಜ ಮೈಕ್ರೊಸಾಫ್ಟ್‌, ಪ್ರಮುಖ ಇ-ಕಾಮರ್ಸ್ ಕಂಪೆನಿಗಳಾದ ಇಬೇ ಮತ್ತು ಟೆನ್ಸೆಂಟ್ ನಿಂದ ಒಟ್ಟು ರೂ. 9,520 ಕೋಟಿ ಬಂಡವಾಳ ಸಂಗ್ರಹಿಸಿದೆ.

1. ಫ್ಲಿಪ್‌ಕಾರ್ಟ್ ಒಟ್ಟು ಮೌಲ್ಯ 75,400 ಕೋಟಿ

ರೂ. 9,520 ಕೋಟಿ ಬಂಡವಾಳ ಸಂಗ್ರಹದೊಂದಿಗೆ ಫ್ಲಿಪ್‌ಕಾರ್ಟ್‌ನ ಒಟ್ಟು ಬಂಡವಾಳ ಮೌಲ್ಯ ರೂ. 75,400 ಕೋಟಿಗೆ ಏರಿಕೆಯಾಗಿದೆ. ಸಂಸ್ಥೆಯ ಹತ್ತು ವರ್ಷಗಳ ಇತಿಹಾಸದಲ್ಲಿ ಮತ್ತು ದೇಶಧ ಇ-ಕಾಮರ್ಸ್ ನಲ್ಲಿನ ಎರಡನೇ ಅತಿದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಇದಾಗಿದೆ.

2. ಬಂಡವಾಳ ಹೂಡಿದ ಕಂಪನಿಗಳು

ದೇಶದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ನೊಂದಿಗೆ ಜಗತ್ತಿನ ಪ್ರಮುಖ ಕಂಪೆನಿಗಳಾದ ಟೈಗರ್‌ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌, ನಾಸ್ಪೆರ್ ಗ್ರೂಪ್‌, ಆರ್ಸೆಲ್ ಪಾರ್ಟ್ನರ್ಸ್ ಮತ್ತು ಡಿಎಸ್ಟಿ ಗ್ಲೋಬಲ್‌ ಈಗಾಗಲೇ ಬಂಡವಾಳ ಹೂಡಿವೆ.

3. ಹೊಸ ಮೈಲ್ಲುಗಲ್ಲು

ಬೃಹತ್ ಬಂಡವಾಳ ಹೂಡಿಕೆಯಿಂದ ಫ್ಲಿಪ್‌ಕಾರ್ಟ್‌ಗೆ ಆನೆಬಲ ಬಂದಂತಾಗಿದ್ದು, ದೇಶದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಮತ್ತೊಂದು ಮೈಲ್ಲುಗಲ್ಲು ಸಾಧಿಸಲು ಹೊಸ ಹುರುಪಿನೊಂದಿಗೆ ಮುಂದಾಗಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

ಖ್ಯಾತ ಕಂಪನಿಗಳ ಸ್ವಾಧೀನ

ಈಗಾಗಲೇ ಮಿಂತ್ರಾ, ಜಬಾಂಗ್, ಫೋನ್‌ ಪೇ, ಇಕಾರ್ಟ್ ನಂತಹ ಖ್ಯಾತ ಕಂಪನಿಗಳ ಸ್ವಾಧೀನ ಫ್ಲಿಪ್‌ಕಾರ್ಟ್ ಹೊಂದಿದೆ. ಹೀಗಾಗಿ ಫ್ಲಿಪ್‌ಕಾರ್ಟ್ ಮತ್ತು ಇಬೇ ಸಹಭಾಗಿತ್ವವು ದೇಶಿ ಮತ್ತು ಜಾಗತಿಕ ಇ-ಕಾಮರ್ಸ್ ಮಾರುಕಟ್ಟೆಯ ಗ್ರಾಹಕರನ್ನು ಕಬಳಿಸಲಿದೆ.

5. ಅಮೆಜಾನ್ ಗೆ ಕೌಂಟರ್

ಇ-ಕಾಮರ್ಸ್ ಮಾರುಕಟ್ಟೆಯಲ್ಲಿನ ಜಾಗತಿಕ ದೈತ್ಯ ಕಂಪನಿ ಅಮೆಜಾನ್ ಗೆ ಕೌಂಟರ್ ನೀಡಲು ಫ್ಲಿಪ್‌ಕಾರ್ಟ್ ಮುಂದಾಗಿದೆ. ಈಗಾಗಲೇ ಅಮೆಜಾನ್ ಭಾರತದಲ್ಲಿ ತನ್ನ ಹತೋಟಿಯನ್ನು ಹೊಂದಿದ್ದು, ಅದರೊಂದಿಗೆ ಪೈಪೋಟಿ ಕೊಡುವುದು ದೇಶಿ ಕಂಪನಿ ಫ್ಲಿಪ್‌ಕಾರ್ಟ್ ಗೆ ಅವಶ್ಯಕವಾಗಿದೆ.

ಬಿನ್ನಿ ಬನ್ಸಲ್ ಏನಂತಾರೆ?

ಫ್ಲಿಪ್‌ಕಾರ್ಟ್ ಭಾರತದಲ್ಲಿ ಹೊಂದಿರುವ ಮಾರುಕಟ್ಟೆ ವ್ಯಾಪ್ತಿ ಮತ್ತು ಜಾಗತಿಕವಾಗಿ ಇಬೇ ಕಂಪೆನಿ ಹೊಂದಿರುವ ಮಾರುಕಟ್ಟೆ ಜಾಲವು ಎರಡು ಸಂಸ್ಥೆಗಳ ನೆರವಿಗೆ ಬರಲಿದೆ. ಭಾರತ ಮತ್ತು ಅಂತರರಾಷ್ಟ್ರೀಯ ಗ್ರಾಹಕರಿಗೆ ಈ ಸಹಭಾಗಿತ್ವದ ಲಾಭ ಸಿಗಲಿದೆ ಎಂದು ಫ್ಲಿಪ್‌ಕಾರ್ಟ್ ಸಿಇಒ ಬಿನ್ನಿ ಬನ್ಸಲ್‌ ಹೇಳಿದ್ದಾರೆ.

Read more about: flipkart, ebay, amazon
English summary

Flipkart raises $1.4 billion from Tencent, eBay and Microsoft, acquires eBay India

Flipkart announced its biggest funding round and said it is buying rival eBay’s Indian operations, marking a flurry of moves by the country’s largest online retailer as it builds a ‘mahagathbandhan’ of global tech giants to counter Amazon.
Story first published: Tuesday, April 11, 2017, 11:54 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC