ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್-1ಬಿ ವೀಸಾ ಬಿಲ್ ನೀತಿಯಲ್ಲಿ ಬದಲಾವಣೆ ತರಲು ಮುಂದಾಗಿರುವುದರಿಂದ ಅಮೆರಿಕದಲ್ಲಿರುವ ಭಾರತೀಯ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್-1ಬಿ ವೀಸಾ ಬಿಲ್ ನೀತಿಯಲ್ಲಿ ಬದಲಾವಣೆ ತರಲು ಮುಂದಾಗಿರುವುದರಿಂದ ಅಮೆರಿಕದಲ್ಲಿರುವ ಭಾರತೀಯ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎನ್ನಲಾಗಿದೆ.
ಹೊಸ ವೀಸಾ ನೀತಿಯಿಂದಾಗಿ ಅಮೆರಿಕದಲ್ಲಿರುವ ತಾಂತ್ರಿಕ ಕಂಪೆನಿ ಮತ್ತು ಹೊರಗುತ್ತಿಗೆ ಸೇವಾ ವೆಚ್ಚಗಳು ಹೆಚ್ಚಳವಾಗಲಿದೆ ಎಂದು ಬನ್ಯನ್ ಟ್ರೀ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಸ್ಥಾಪಕರಾಧ ಇಗ್ನೀಷಿಯಸ್ ಚಿತೆಲೆನ್ ಹೇಳಿದ್ದಾರೆ. H1-B ಹೊಸ ಬಿಲ್: ದೇಶದ 10 ಐಟಿ ಕಂಪನಿಗಳಿಗೆ ಎದುರಾಗಿದೆ ಭೀತಿ
ವಾರ್ಷಿಕ ವೆಚ್ಚ ಹೆಚ್ಚಳ
ಟ್ರಂಪ್ ಜಾರಿ ಮಾಡುತ್ತಿರುವ ಹೊಸ ನೀತಿಯಿಂದಾಗಿ ವಾರ್ಷಿಕ ವೆಚ್ಚ 2.6ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು ರೂ. 260 ಕೋಟಿ) ಹೆಚ್ಚಾಗಲಿದ್ದು, ವೀಸಾ ಹೊಂದಿರುವವರಿಗೆ ವಾರ್ಷಿಕ ವೇತನದಲ್ಲಿ ಸುಮಾರು ರೂ. 64.30 ಲಕ್ಷ ನಷ್ಟ ಆಗಲಿದೆ ಎಂದು ಅಂದಾಜಿಸಲಾಗಿದೆ.
ಜಾರಿ ಯಾವಾಗ?
ಹೊಸ ನೀತಿ ಪ್ರಮುಖ ಕಂಪೆನಿಗಳಿಗೆ ಅನ್ವಯಿಸಲಿದೆ. ಮುಂದಿನ ನವೆಂಬರ್‌ನಲ್ಲಿ ಹೊಸ ನೀತಿ ಜಾರಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಹೆಚ್ಚು ಸಂಬಳ
ಎಚ್-1ಬಿ ವೀಸಾ ಈ ಹೊಸ ನಿಯಮ ಜಾರಿಯಾದಲ್ಲಿ ಹೆಚ್ಚು ಕೌಶಲ್ಯ ಭರಿತ ಉದ್ಯೋಗಿಗಳಿಗೆ ವೀಸಾ ನೀಡಲಾಗುತ್ತದೆ. ಉನ್ನತ ಪದವಿ ಪಡೆದವರು ಮತ್ತು ಭಾರತದಲ್ಲಿ ಕೌಶಲ ನೌಕರಿಯಲ್ಲಿ ಇರುವವರು ಹೆಚ್ಚಾಗಿ ಅರ್ಜಿ ಸಲ್ಲಿಸಲಿದ್ದಾರೆ. ಇಂತಹ ಉದ್ಯೋಗಿಗಳಿಗೆ ಹೆಚ್ಚು ಸಂಬಳ ಇರುವಂತ ಉನ್ನತ ಹುದ್ದೆಗಳು ಸಿಗಲಿವೆ ಎಂದಿದ್ದಾರೆ.
ಹೊಸ ಬಿಲ್ ನಲ್ಲಿ ಏನಿತ್ತು?
ಹೊಸ ಬಿಲ್ ಪ್ರಕಾರ ಮೊದಲಿನದಕ್ಕಿಂತ ಎರಡು ಪಟ್ಟು ಸಂಬಳವನ್ನು ಹೆಚ್ಚಿಸಲಾಗುವುದು. 1989ರಿಂದ ಇಲ್ಲಿಯವರೆಗೆ 60,000 ಡಾಲರ್ ಸಂಬಳ ಇತ್ತು. ಈಗ ಅದನ್ನು 130,000 ಡಾಲರ್ ಗೆ ಏರಿಕೆ ಮಾಡಲಾಗಿದೆ. ಅಂದರೆ ಮೊದಲಿನ ಎರಡರಷ್ಟು ಹೆಚ್ಚಿಸಲಾಗಿದೆ. H1-B ವೀಸಾದ ಪ್ರಕಾರ ವಿದೇಶಿಯರು ಹೆಚ್ಚಿನ ಉದ್ಯೋಗ ಪಡೆಯುತ್ತಿದ್ದರು. ಆದರೆ ಎಚ್-1ಬಿ ಹೊಸ ನೀತಿ ಪ್ರಕಾರ ಈ ಉದ್ಯೋಗವನ್ನು ಸ್ಥಳಿಯರಿಗೆ ಕೊಡಬೇಕು ಎನ್ನುವುದು ಟ್ರಂಪ್ ವಾದ ಆಗಿತ್ತು.
H1-B ವೀಸಾ ಏನು?
ವೀಸಾ ನೀತಿ H1-B ವೀಸಾದ ಅಡಿಯಲ್ಲಿ ಪ್ರತಿ ವರ್ಷ ಭಾರತದ ಐಟಿ ಇಂಡಸ್ಟ್ರಿ ಲಕ್ಷ ಲಕ್ಷ ಉದ್ಯೋಗಿಗಳನ್ನು ಯುಎಸ್ ಗೆ ಕಳುಹಿಸಿಕೊಡುತ್ತದೆ. H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಅದರಲ್ಲೂ ಭಾರತೀಯ ತಜ್ಞ ಉದ್ಯೋಗಿಗಳು ಯುಸ್ ನಲ್ಲಿ ಹೆಚ್ಚಿನ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿರುವುದರಿಂದಾಗಿ ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಕೆಲಸಗಾರರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಟ್ರಂಪ್ ವಾದ ಆಗಿತ್ತು. (Read More: ಎಚ್-1ಬಿ ವೀಸಾ)
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications