ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ ರಿಯಾಯಿತಿ ದರದಲ್ಲಿ ಟಿಕೆಟ್ ಮಾರಾಟಕ್ಕಾಗಿ ಸಮ್ಮರ್ ಸೇಲ್ ಆಫರ್ ಘೋಷಿಸಿದೆ.
News
oi-Nithya Nair
By Siddu
ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ ರಿಯಾಯಿತಿ ದರದಲ್ಲಿ ಟಿಕೆಟ್ ಮಾರಾಟಕ್ಕಾಗಿ ಸಮ್ಮರ್ ಸೇಲ್ ಆಫರ್ ಘೋಷಿಸಿದೆ.
ರಿಯಾಯಿತಿ ಟಿಕೆಟ್ ದರ ರೂ. 899ರ ಅತಿ ಕಡಿಮೆ ಬೆಲೆಯಲ್ಲಿ ಸಿಗಲಿದ್ದು, ನಿಗದಿತ ದೇಶಿ ಮಾರ್ಗಗಳ ಮಧ್ಯೆ ಪ್ರಯಾಣ ಮಾಡಬಹುದು.
18 ಹೆಚ್ಚುವರಿ ವಿಮಾನ ಸೇವೆ
ಇತ್ತೀಚೆಗೆ ಗುರಗಾಂವ್ ಮೂಲದ ವಿಮಾನಯಾನ ಸಂಸ್ಥೆಯು ಸಮ್ಮರ್ ವೇಳಾಪಟ್ಟಿಯ ಭಾಗವಾಗಿ ಜೂನ್ ನಿಂದ 18 ಹೊಸ ಹೆಚ್ಚುವರಿ ವಿಮಾನಗಳನ್ನು ಆರಂಭಿಸಲಿದೆ ಎಂದು ಹೇಳಿದೆ.
ಆಫರ್ ಅವಧಿ
ಇಂಡಿಗೊ 899 ಆಫರ್ ಬಾಗ್ಡೋಗ್ರ-ಗುವಾಹಟಿ ಮಾರ್ಗ ಮಧ್ಯೆ ಅನ್ವಯವಾಗಲಿದೆ. ಗ್ರಾಹಕರು ಮೇ 10ರ ವರೆಗೆ ಟಿಕೆಟ್ ಗಳನ್ನು ಬುಕ್ ಮಾಡಬಹುದಾಗಿದ್ದು, ಜುನ್ 1 ರಿಂದ ಅಗಸ್ಟ್ 31ರ ನಡುವಿನ ಅವಧಿಯಲ್ಲಿ ಪ್ರಯಾಣಿಸಬಹುದಾಗಿದೆ.