ಮುಂದಿನ ಐದು ವರ್ಷಗಳಲ್ಲಿ ಖಾದಿ ಉದ್ಯಮದ ಮೂಲಕ ಸುಮಾರು 5 ಕೋಟಿ ಜನರಿಗೆ ಉದ್ಯೋಗ ನೀಡಲು ಮಧ್ಯಮ, ಸಣ್ಣ ಮತ್ತು ಮೈಕ್ರೋ ಎಂಟರ್ಪ್ರೈಸಸ್(ಎಂಎಸ್ಎಂಇ)ಸಚಿವಾಲಯ ಗುರಿ ಹೊಂದಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ಖಾದಿ ಉದ್ಯಮದ ಮೂಲಕ ಸುಮಾರು 5 ಕೋಟಿ ಜನರಿಗೆ ಉದ್ಯೋಗ ನೀಡಲು ಮಧ್ಯಮ, ಸಣ್ಣ ಮತ್ತು ಮೈಕ್ರೋ ಎಂಟರ್ಪ್ರೈಸಸ್(ಎಂಎಸ್ಎಂಇ)ಸಚಿವಾಲಯ ಗುರಿ ಹೊಂದಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಖಾದಿ ಹಾಗೂ ಗ್ರಾಮೀಣ ಕೈಗಾರಿಕಾ ಆಯೋಗದ(ಕೆವಿಐಸಿ) ಮೂಲಕ ಸೋಲಾರ್ ಚಾಲಿತ ಸ್ಪಿನ್ನಿಂಗ್ ವೀಲ್ ಗಳನ್ನು ಪರಿಚಯಿಸಲು ಯೋಜಿಸಲಾಗಿದೆ. ಇದರಿಂದಾಗಿ ದೇಶದಾದ್ಯಂತ ಮುಂದಿನ 5 ವರ್ಷಗಳಲ್ಲಿ ಸುಮಾರು 5 ಕೋಟಿ ಜನರಿಗೆ ಉದ್ಯೋಗ ಸಿಗಲಿದೆ ಎಂದು ಗಿರಿರಾಜ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?
ಖಾದಿ ವಹಿವಾಟು ಭಾರೀ ಏರಿಕೆ
ಕಳೆದ ಎರಡು ವರ್ಷಗಳಲ್ಲಿನ ಖಾದಿ ಉದ್ಯಮದಲ್ಲಿನ ಮಾರಾಟ 35 ಸಾವಿರ ಕೋಟಿಯಿಂದ 52 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಖಾದಿ ಹಾಗೂ ಗ್ರಾಮೀಣ ಕೈಗಾರಿಕಾ ಆಯೋಗವನ್ನು(ಕೆವಿಐಸಿ) ಉತ್ತಮಗೊಳಿಸಲು ಎಂಎಸ್ಎಂಇ ಇಲಾಖೆ ಕ್ರಮ ಕೈಗೊಂಡಿದ್ದು ಹಲವು ಯೋಜನೆಗಳನ್ನು ಉತ್ತೇಜಿಸುತ್ತಿದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಇ-ಕಾಮರ್ಸ್ ಒಪ್ಪಂದ
ಮಧ್ಯಮ, ಸಣ್ಣ ಮತ್ತು ಮೈಕ್ರೋ ಎಂಟರ್ಪ್ರೈಸಸ್(ಎಂಎಸ್ಎಂಇ) ಸಚಿವಾಲಯ ಇಲಾಖೆ ಖಾದಿ ನೆಟ್ವರ್ಕ್ ನ್ನು ಹೆಚ್ಚಿಸುವ ಬಗ್ಗೆ ಗಂಭೀರವಾದ ಚಿಂತನೆ ನಡೆಸಿದ್ದು, ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಮಾರುಕಟ್ಟೆ ಪ್ರಚಾರ
ಬಡ್ಡಿ ಸಬ್ಸಿಡಿ, ಆರ್ಥಿಕ ನೆರವು, ಅಭಿವೃದ್ಧಿ ಯೋಜನೆ, ಮಾರುಕಟ್ಟೆ ಪ್ರಚಾರ, ಕ್ಲಸ್ಟರ್ ಆಧಾರಿತ ಅಭಿವೃದ್ಧಿ ಅವಕಾಶ ಒಳಗೊಂಡಂತೆ ವಿವಿಧ ಯೋಜನೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ವಿನ್ಯಾಸ ಆಧಾರಿತ ಸಾರ್ವಜನಿಕ ಖಾಸಗಿ ಸಹಭಾಗಿತ್ವಗಳನ್ನು ಸಚಿವಾಲಯ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.


Click it and Unblock the Notifications