ಜಿಎಸ್ಟಿ ಮಸೂದೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸೇವೆಗಳ ಮೇಲಿನ ತೆರಿಗೆ ದರವನ್ನು ಅಂತಿಮಗೊಳಿಸಿದೆ.
ಜಿಎಸ್ಟಿ ಮಸೂದೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸೇವೆಗಳ ಮೇಲಿನ ತೆರಿಗೆ ದರವನ್ನು ಅಂತಿಮಗೊಳಿಸಿದೆ. ಯಾವುದು ದುಬಾರಿ, ಯಾವುದು ಅಗ್ಗವಾಗಲಿದೆ ಎಂಬುದನ್ನು ನೋಡೋಣ...
ಜಾರಿ ಯಾವಾಗ
ಜುಲೈ 1ರಿಂದ ಹೊಸ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬರಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಶ್ರೀನಗರದಲ್ಲಿ ನಡೆದ ಜಿಎಸ್'ಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ದಿನ ಬಳಕೆಯ ಸರಕುಗಳಲ್ಲಿ ಯಾವುದು ಅಗ್ಗ?
ಮಸೂದೆ ಜಾರಿಯಾದ ಬಳಿಕ ಆಹಾರ ಪದಾರ್ಥಗಳು, ಅಕ್ಕಿ, ಗೋದಿ, ಮೊಸರು, ಧಾನ್ಯಗಳು ಹಾಗೂ ಹಾಲು ಅಗ್ಗವಾಗಲಿದ್ದು, ಜಿಎಸ್ಟಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಜತೆಗೆ ದಿನ ಬಳಕೆಯ ಸಕ್ಕರೆ, ಚಹಾ, ಕಾಫಿ, ಅಡುಗೆ ತೈಲ ಮುಂತಾದ ಸರಕುಗಳಿಗೂ ಅತ್ಯಂತ ಕಡಿಮೆ 5%ರಷ್ಟು ತೆರಿಗೆ ಅನ್ವಯವಾಗಲಿದೆ. ಹೀಗಾಗಿ ಇವುಗಳ ಬೆಲೆ ಇಳಿಕೆಯಾಗಲಿದೆ.
ಯಾವುದು ದುಬಾರಿ?
ಜಿಎಸ್ಟಿ ಬಿಲ್ ಜಾರಿ ಬಳಿಕ ಕಾರು, ಎಸಿ, ರೆಫ್ರಿಜರೇಟರ್, ತಂಪು ಪಾನಿಯಗಳು ದುಬಾರಿಯಾಗಲಿವೆ. ಕಾರಣ ಇವುಗಳು 28%ರ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ. ಅಲ್ಲದೇ ಸಾಮಾನ್ಯ ಬಳಕೆಯ ಉತ್ಪನ್ನಗಳಾದ ಕೇಶ ತೈಲ, ಸೋಪು, ಟೂಥ್ ಪೆಸ್ಟ್‌ಗಳು 18%ರ ತೆರಿಗೆ ವ್ಯಾಪ್ತಿಗೆ ಬರಲಿವೆ.
ಸೇವೆಗಳು ಅಗ್ಗ
ಓಲಾ, ಉಬರ್‌ನಂತಹ ಆಫ್ ಆಧಾರಿತ ಸಾರಿಗೆ ಸೇವೆಗಳಿಗೆ 5%ರಷ್ಟು ಸೇವಾ ತೆರಿಗೆಯನ್ನು ನಿಗದಿಗೊಳಿಸಲಾಗಿದೆ. ಜಿಎಸ್‌ಟಿ ಜಾರಿಯಾದರೆ ವಿಮಾನ ಪ್ರಯಾಣದ ಟಿಕೆಟ್‌ಗಳು ಅಗ್ಗವಾಗಲಿವೆ. ಸೇವೆಗಳಿಗೆ 4 ಹಂತದ (5%, 12%, 18% ಮತ್ತು 28%) ತೆರಿಗೆ ದರವನ್ನು ಅಂತಿಮಗೊಳಿಸಲಾಗಿದೆ. ರೈಲು, ವಿಮಾನ ಸೇರಿದಂತೆ ಎಲ್ಲಾ ಸಾರಿಗೆ ಸೇವೆಗಳಿಗೆ ಶೇಕಡ 5ರಷ್ಟು ತೆರಿಗೆ ದರ ನಿಗದಿಪಡಿಸಲಾಗಿದೆ.
ಐಷಾರಾಮಿ ಸೇವೆಗಳು ದುಬಾರಿ
ಐಷಾರಾಮಿ ಸೇವೆಗಳಿಗೆ 28%ರಷ್ಟು ತೆರಿಗೆ ದರ ನಿಗದಿಗೊಳಿಸಲಾಗಿದೆ. ಪಂಚತಾರಾ ಹೋಟೆಲ್‌ಗಳು, ರೇಸ್ ಕ್ಲಬ್, ಸಿನಿಮಾ ವಲಯಕ್ಕೆ 28% ಹಾಗೂ ದೂರಸಂಪರ್ಕ, ಹಣಕಾಸು ಸೇವೆಗಳಿಗೆ 18% ತೆರಿಗೆ ದರ ನಿಗದಿಪಡಿಸಲಾಗಿದೆ.
ಶಿಕ್ಷಣ ಅಗ್ಗ
ಹೊಸ ಜಿಎಸ್ಟಿ ನಿಯಮದ ಅಡಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ತೆರಿಗೆಯಿಂದ ಹೊರಗಿಡಲಾಗಿದೆ. ಇನ್ನುಮುಂದೆ ಶಿಕ್ಷಣಕ್ಕೆ ಸಂಬಂಧಿತ ಸೇವೆಗಳು ಅಗ್ಗವಾಗಲಿವೆ.
ಚಿನ್ನದ ತೆರಿಗೆ
ಚಿನ್ನ, ಚಪ್ಪಲಿ ಸೇರಿದಂತೆ ಹಲವು ಉತ್ಪನ್ನಗಳ ತೆರಿಗೆ ಪ್ರಮಾಣ ಇನ್ನೂ ನಿರ್ಧಾರ ಆಗಿಲ್ಲ. ಜೂನ್ 3ರಂದು ನಡೆಯಲಿರುವ ಮಂಡಳಿಯ ಸಭೆಯಲ್ಲಿ ಚಿನ್ನದ ಮೇಲಿನ ತೆರಿಗೆ ದರ ನಿಗದಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. (read more: ಜಿಎಸ್ಟಿ)
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!



Click it and Unblock the Notifications