ದೇಶದಲ್ಲಿ ಜಿಎಸ್ಟಿ ದರಗಳನ್ನು ಕಡಿಮೆ ಪ್ರಮಾಣದಲ್ಲಿ ನಿಗದಿ ಪಡಿಸಿದ್ದರೂ, 2017ರಲ್ಲಿ ಚಿನ್ನದ ಬೇಡಿಕೆ 650-750 ಟನ್ ಗಳ ವ್ಯಾಪ್ತಿಯಲ್ಲಿದೆ ವಿಶ್ವ ಚಿನ್ನ ಮಂಡಳಿ (WGC) ಹೇಳಿದೆ.
News
oi-Siddu
By Siddu
ಚಿನ್ನದ ಬೇಡಿಕೆ ಸದಾ ಏರಿಳಿತಗಳಿಗೆ ಒಳಗಾಗುತ್ತಿರುತ್ತದೆ. ಒಂದು ದಿನ ಏರಿಕೆ ಕಂಡರೆ ಇನ್ನೊಂದು ದಿನ ಇಳಿಕೆ ಕಾಣುತ್ತದೆ.
ದೇಶದಲ್ಲಿ ಜಿಎಸ್ಟಿ ದರಗಳನ್ನು ಕಡಿಮೆ ಪ್ರಮಾಣದಲ್ಲಿ ನಿಗದಿ ಪಡಿಸಿದ್ದರೂ, 2017ರಲ್ಲಿ ಚಿನ್ನದ ಬೇಡಿಕೆ 650-750 ಟನ್ ಗಳ ವ್ಯಾಪ್ತಿಯಲ್ಲಿದೆ ವಿಶ್ವ ಚಿನ್ನ ಮಂಡಳಿ (WGC) ಹೇಳಿದೆ.
2017ರ ಪ್ರಥಮ ತ್ರೈಮಾಸಿಕದಲ್ಲಿ ಶೇ. 15ರಷ್ಟು ಚಿನ್ನದ ಬೇಡಿಕೆ ಏರಿಕೆ ಕಂಡಿದ್ದು, ಈ ಪ್ರಮಾಣ ಹೆಚ್ಚುಕಡಿಮೆ 123 ಟನ್ ಗೆ ಹೆಚ್ಚಾಗಿದೆ. 2017ರ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಮದುವೆ ಸಮಾರಂಭಗಳು ಪ್ರಮುಖ ಕಾರಣಗಳಾಗಿವೆ. ಬೇಡಿಕೆಯೇ ಶೇ. 40ಕ್ಕಿಂತ ಹೆಚ್ಚಿದೆ. ಬಂಗಾರದ ಬೇಡಿಕೆಯಲ್ಲಿ ಚಿನ್ನಾಭರಣಗಳು, ಚಿನ್ನದ ಗಟ್ಟಿ ಮತ್ತು ನಾಣ್ಯಗಳು ಸೇರಿವೆ. ಗ್ರಾಹಕರು ಚಿನ್ನಾಭರಣಗಳ ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಚಿನಿವಾರ ಪೇಟೆಯ ಉತ್ತಮ ಪ್ರಗತಿಗೆ ಕಾರಣವಾಗಲಿದೆ ಎಂದು ವಿಶ್ವ ಚಿನ್ನ ಮಂಡಳಿ ವರದಿ ಮಾಡಿದೆ.