For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವ ಮುನ್ನ ಇಲ್ಲೊಮ್ಮೆ ನೋಡಿ...

ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಸ್ವಯಂ ಸಾಮರ್ಥ್ಯದ ಮೇಲೆ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರಬೇಕಾಗುತ್ತದೆ. ಮ್ಯೂಚುವಲ್ ಫಂಡ್ ಬೇರೆ ಬೇರೆ ಅವಧಿಗೆ ಲಭ್ಯವಿರುತ್ತದೆ.

By Siddu
|

ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಸ್ವಯಂ ಸಾಮರ್ಥ್ಯದ ಮೇಲೆ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರಬೇಕಾಗುತ್ತದೆ. ಮ್ಯೂಚುವಲ್ ಫಂಡ್ ಬೇರೆ ಬೇರೆ ಅವಧಿಗೆ ಲಭ್ಯವಿರುತ್ತದೆ. ಹೀಗಾಗಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನಿಸಬೇಕು. ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು?

 

1. ಈಕ್ವಿಟಿಯೇ ಅಥವಾ ಸಾಲ ಆಧಾರಿತ ಸ್ಕೀಮ್?

1. ಈಕ್ವಿಟಿಯೇ ಅಥವಾ ಸಾಲ ಆಧಾರಿತ ಸ್ಕೀಮ್?

ಮ್ಯೂಚುವಲ್ ಫಂಡ್ ನಲ್ಲಿ ನೀವು ಹೂಡಿಕೆ ಮಾಡುವ ಹಣವನ್ನು ಸಾಲ ಅಥವಾ ಈಕ್ವಿಟಿಯಾಗಿ ಪರಿವರ್ತಿಸಲಾಗುತ್ತದೆಯೇ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಡೆಬ್ಟ್ ಸ್ಕೀಮ್ ಆದರೆ ಯಾವುದಾದರೂ ಆಫರ್ ಗೆ ಒಪ್ಪಿಕೊಂಡು ಹೂಡಿಕೆ ಮಾಡಬೇಕಾಗುತ್ತದೆ. 'ಇಷ್ಟು ಕಾಲಾವಧಿಗೆ ಈ ರೀತಿ ಸೌಲಭ್ಯ' ಎಂದು ಸಂಸ್ಥೆಗಳು ಆಫರ್ ನೀಡುತ್ತಲೇ ಇರುತ್ತವೆ.

2. ಅದಾಯ ಅಥವಾ ಹಣಕಾಸು ಪ್ರಗತಿ

2. ಅದಾಯ ಅಥವಾ ಹಣಕಾಸು ಪ್ರಗತಿ

ನೀವು ನಿವೃತ್ತಿ ಹೊಂದಿದ್ದು ಪ್ರತಿ ತಿಂಗಳು ಇಂತಿಷ್ಟು ಹಣ ಸಿಗುವಂತಿರಬೇಕು ಎಂದರೆ ನೀವು ಪ್ರತಿ ತಿಂಗಳು ರಿಟರ್ನ್ಸ್ ನೀಡಬಲ್ಲ ಆದರೆ ಸುರಕ್ಷಿತವಾಗಿರುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಹಣಕಾಸು ಪ್ರಗತಿ ಹಾಗೂ ಮಾರುಕಟ್ಟೆಯಲ್ಲಿ ಹೂಡಿಕೆ ಆಯ್ಕೆಯನ್ನು ತಿರಸ್ಕರಿಸುವುದು ಉತ್ತಮ.

3. ಓಪನ್ ಎಂಡೆಡ್ ಅಥವಾ ಕ್ಲೋಸ್ ಎಂಡೆಡ್
 

3. ಓಪನ್ ಎಂಡೆಡ್ ಅಥವಾ ಕ್ಲೋಸ್ ಎಂಡೆಡ್

ಲಿಕ್ವಿಡಿಟಿ ಬಯಸುತ್ತಿದ್ದರೆ, ನೀವು ಆಯ್ಕೆ ಮಾಡಿದ ಸ್ಕೀಮ್ ಮಾರಾಟ ಮಾಡುವ ಉದ್ದೇಶ ಹೊಂದಿದ್ದರೆ ಓಪನ್ ಎಂಡೆಡ್ ಸ್ಕೀಮ್ ಆಯ್ಕೆ ಮಾಡಿರಿ. ಕ್ಲೋಸ್ ಎಂಡೆಡ್ ಸ್ಕೀಮ್ ಗಳಲ್ಲಿ ಉತ್ತಮ ಲಿಕ್ವಿಡಿಟಿ ಅವಕಾಶ ಸಿಗುವುದಿಲ್ಲ.

4. ಫಂಡ್ ಟ್ರ್ಯಾಕ್ ರೆಕಾರ್ಡ್

4. ಫಂಡ್ ಟ್ರ್ಯಾಕ್ ರೆಕಾರ್ಡ್

ನೀವು ಹೂಡಿಕೆ ಮಾಡುವ ಮುನ್ನ ಮ್ಯೂಚುವಲ್ ಫಂಡ್ ಯೋಜನೆಯ ಹಿನ್ನೆಲೆ, ಟ್ರ್ಯಾಕ್ ರೆಕಾರ್ಡ್ ಹೇಗಿದೆ. ಆಫರ್ ನಲ್ಲಿ ಹೇಳಿರುವ ಅಂಶಗಳೇನು ಎಂಬುದನ್ನು ತಪ್ಪದೇ ಪರಿಶೀಲನೆ ಮಾಡಿ, ಸಂಶಯಗಳಿದ್ದರೆ ಪರಿಹರಿಸಿಕೊಳ್ಳಬೇಕು.

5. ರಿಸ್ಕ್ ಗಳನ್ನು ಮೊದಲು ಗಮನಿಸಿ

5. ರಿಸ್ಕ್ ಗಳನ್ನು ಮೊದಲು ಗಮನಿಸಿ

ನಿಮಗೆ ನೀಡುವ ಆಫರ್ ಡಾಕ್ಯುಮೆಂಟ್ ನಲ್ಲಿರುವ ರಿಸ್ಕ್ ಅಂಶಗಳನ್ನು ಮೊದಲು ತಿಳಿದುಕೊಳ್ಳಿ. ಹೂಡಿಕೆ, ರಿಟರ್ನ್ಸ್ ಹಾಗೂ ಯೋಜನೆ ಅವಧಿ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಿ ಹಾಗೂ ಮ್ಯಾನೇಜರ್ ಜೊತೆ ಯೋಜನೆ ಸುರಕ್ಷತೆ ಬಗ್ಗೆ ಮುಕ್ತವಾಗಿ ಚರ್ಚಿಸಿ.

6. ಕನಿಷ್ಠ ಹೂಡಿಕೆ

6. ಕನಿಷ್ಠ ಹೂಡಿಕೆ

ಯೋಜನೆಗಳಿಗೆ ಆರಂಭಿಕ ಹಾಗೂ ನಿರ್ಗಮನ ಶುಲ್ಕಗಳಿರುವುದಿಲ್ಲ. ಸ್ಕೀಮ್ ನಿಂದ ಸ್ಕೀಮ್ ಗೆ ಕನಿಷ್ಠ ಹೂಡಿಕೆ ಮೊತ್ತ ಬದಲಾವಣೆಗೊಳಲ್ಪಟ್ಟಿರುತ್ತದೆ. ಹೀಗಾಗಿ ಓಪನ್ ಎಂಡೆಡ್ ಸ್ಕೀಮ್ ನಲ್ಲೂ ಹೂಡಿಕೆ ಮೊತ್ತದ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಸ್ಕೀಮ್ ನಿಂದ ಸ್ಕೀಮ್ ಗೆ ಇರುವ ಬದಲಾವಣೆಗಳನ್ನು ತಿಳಿಯಲು ಮರೆಯದಿರಿ.

7. ಖರ್ಚುವೆಚ್ಚ-ಶುಲ್ಕ

7. ಖರ್ಚುವೆಚ್ಚ-ಶುಲ್ಕ

ನಿರ್ವಹಣಾ ವೆಚ್ಚ. ಮ್ಯೂಚುವಲ್ ಫಂಡ್ ಯೋಜನೆ ಬದಲಾವಣೆ ಶಿಫ್ಟಿಂಗ್ ಶುಲ್ಕ, ಎಂಟ್ರಿ ಹಾಗೂ ಎಕ್ಸಿಟ್ ಹೊರೆ, ಮ್ಯಾನೇಜ್ಮೆಂಟ್ ಶುಲ್ಕ ಹಾಗೂ ಇನ್ನಿತರ ಶುಲ್ಕಗಳ ಬಗ್ಗೆ ಆರಂಭದಲ್ಲೇ ವಿಚಾರಿಸಿಕೊಳ್ಳಿ. ಮ್ಯೂಚುವಲ್ ಫಂಡ್ ಗಳು ದಾನದತ್ತಿ ಸಂಸ್ಥೆಗಳಲ್ಲ ಒಂದು ಎನ್ನುವುದು ಗಮನದಲ್ಲಿರಲಿ. ಲಾಭವಿಲ್ಲದ ವ್ಯವಹಾರ ಎಲ್ಲೂ ನಡೆಯುವುದಿಲ್ಲ. ಸರಿಯಾಗಿ ತಿಳಿದುಕೊಳ್ಳದೇ ಹಗಲು ಕನಸು ಕಾಣುವ ಬದಲು ಅವಶ್ಯ ಅಂಶಗಳನ್ನು ಗಮನಿಸಿ ಮುನ್ನಡೆಯಿರಿ.

English summary

7 things you must read in a mutual fund offer document in India

It's not always easy investing in a mutual fund scheme. You must evaluate your own ability to take risk along with checking the track record and the nature of the scheme. It's very important to check things like entry and exit load in a mutual fund, management fees etc.
Story first published: Thursday, June 1, 2017, 16:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X