ಸ್ವಿಸ್ ಬ್ಯಾಂಕಿನಲ್ಲಿ ಬಾರತೀಯರು ಇಟ್ಟಿರುವ ಕಪ್ಪುಹಣದ ಪ್ರಮಾಣದಲ್ಲಿ ಶೇ. 45ರಷ್ಟು ಇಳಿಕೆಯಾಗಿದೆ.ಇದಕ್ಕೆ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿಗಳು ಹೊರಬೀಳುತ್ತಿರುವುದು ಕಾರಣವಂತೆ!
ಸ್ವಿಸ್ ಬ್ಯಾಂಕಿನಲ್ಲಿ ಬಾರತೀಯರು ಇಟ್ಟಿರುವ ಕಪ್ಪುಹಣದ ಪ್ರಮಾಣದಲ್ಲಿ ಶೇ. 45ರಷ್ಟು ಇಳಿಕೆಯಾಗಿದೆ. ಇದಕ್ಕೆ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿಗಳು ಹೊರಬೀಳುತ್ತಿರುವುದು ಕಾರಣವಂತೆ!
ಭಾರತೀಯರು 2015ರ ಸಾಲಿನಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ 8,392 ಕೋಟಿ ರೂ.ಗಳನ್ನು ಇಟ್ಟಿದ್ದರು. ಇದು 2016ರಲ್ಲಿ 4,500 ಕೋಟಿಗೆ ಭಾರೀ ಇಳಿಕೆ ಕಂಡಿದೆ.
2006ರಲ್ಲಿ ಅಂದರೆ ಹೆಚ್ಚುಕಡಿಮೆ ಹತ್ತು ವರ್ಷಗಳ ಹಿಂದೆ ಸ್ವಿಸ್ ಬ್ಯಾಂಕಿನಲ್ಲಿ ಕಾಳಧನಿಕರು 23,000 ಕೋಟಿ ರೂಪಾಯಿಗಳಷ್ಟ ಗರಿಷ್ಠ ಪ್ರಮಾಣದ ಹಣ ಇಟ್ಟಿದ್ದರು. ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?
ಕಪ್ಪುಹಣ ಇಳಿಕೆಗೆ ಕಾರಣ
ಕೇಂದ್ರದ ಮೋದಿ ಸರ್ಕಾರ ಕೈಗೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮಗಳು, ಹೊಸ ಮಸೂದೆಗಳು ಹಾಗೂ ಸ್ವಿಜರ್ಲ್ಯಾಂಡ್ ಸರ್ಕಾರ ಸ್ವಿಸ್ ಬ್ಯಾಂಕಿನಲ್ಲಿ ಹಣ ಇಟ್ಟವರ ಹೆಸರನ್ನು ಬಹಿರಂಗಪಡಿಸುತ್ತಿರುವುದು ಕಪ್ಪು ಹಣದ ಪ್ರಮಾಣ ಇಳಿಕೆಗೆ ಪ್ರಮುಖ ಕಾರಣವಾಗಿದೆ.
ವಿಶೇಷ ತನಿಖಾ ತಂಡ
ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನ ಆದೇಶಕ್ಕನುಗುಣವಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ತಂಡ ವಿದೇಶಗಳಲ್ಲಿ ಇಟ್ಟಿರುವ ಕಪ್ಪು ಹಣದ ಕುರಿತು ತನಿಖೆ ನಡೆಸಲಿದೆ ಎನ್ನಲಾಗಿದೆ. ಭಾರತೀಯರು ಸ್ವಿಸ್ ಬ್ಯಾಂಕಿನಲ್ಲಿ ಇಡುತ್ತಿರುವ ಕಪ್ಪುಹಣದ ಪ್ರಮಾಣದಲ್ಲಿ ಇಳಿಕೆಯಾದರೂ, ಬೇರೆ ದೇಶಗಳು ಇಡುತ್ತಿರುವ ಹಣದ ಪ್ರಮಾಣ ಮಾತ್ರ ಹೆಚ್ಚಾಗುತ್ತಲೇ ಇದೆ ಎನ್ನಲಾಗಿದೆ.
ಸ್ವಿಸ್ ಬ್ಯಾಂಕುಗಳಿಗೆ ಎಫೆಕ್ಟ್
ಸಾಮಾನ್ಯವಾಗಿ ಸ್ವಿಸ್ ಬ್ಯಾಂಕುಗಳು ಕಾಳಧನಿಕರ ಪಾಲಿನ ಸ್ವರ್ಗಗಳಾಗಿದ್ದವು. ಭಾರತ ಸೇರಿದಂತೆ ಜಗತ್ತಿನ ಹಲವಾರು ದೇಶಗಳು ಇಲ್ಲಿ ಅಕ್ರಮ ಹಣ ಇಡುತ್ತವೆ. ಆದರೆ ಇತ್ತಿಚಿನ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸ್ವಿಸ್ ಬ್ಯಾಂಕುಗಳ ಲಾಭ ಅರ್ಧದಷ್ಟು ಇಳಿದಿದೆ ಎನ್ನಲಾಗಿದೆ. ಸ್ವಿಸ್ ಬ್ಯಾಂಕುಗಳು 2016ರಲ್ಲಿ 1.06 ಲಕ್ಷ ಕೋಟಿ ಲಾಭ ಗಳಿಸಿದ್ದರೆ, ಪ್ರಸ್ತುತ ಅದರ ಅರ್ಧದಷ್ಟು ಇಳಿಕೆ ಕಂಡಿದೆ.


Click it and Unblock the Notifications