For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಗೂಳಿ ಓಟ, ಮೊದಲ ಬಾರಿ 10 ಸಾವಿರ ಅಂಕ ದಾಟಿದ ನಿಪ್ಟಿ!

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಫಲಿತಾಂಶ ಷೇರುಪೇಟೆಯಲ್ಲಿ ಧನಾತ್ಮಕ ಪರಿಣಾಮ ಬೀರಿದ್ದು, ಎಲ್ಲೆಡೆ ಗೂಳಿ ಓಟ ಪ್ರಾರಂಭವಾಗಿದೆ. ಪ್ರಥಮ ಬಾರಿ ನಿಪ್ಟಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದು, 10,000 ಅಂಶಗಳನ್ನು ದಾಟಿ ಮುನ್ನುಗ್ಗುತ್ತಿದೆ

By Siddu
|

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಫಲಿತಾಂಶ ಷೇರುಪೇಟೆಯಲ್ಲಿ ಧನಾತ್ಮಕ ಪರಿಣಾಮ ಬೀರಿದ್ದು, ಎಲ್ಲೆಡೆ ಗೂಳಿ ಓಟ ಪ್ರಾರಂಭವಾಗಿದೆ.

ಷೇರುಪೇಟೆಯಲ್ಲಿ ಗೂಳಿ ಓಟ, ಮೊದಲ ಬಾರಿ 10 ಸಾವಿರ ಅಂಕ ದಾಟಿದ ನಿಪ್ಟಿ!

ಪ್ರಥಮ ಬಾರಿ ನಿಪ್ಟಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದು, 10,000 ಅಂಶಗಳನ್ನು ದಾಟಿ ಮುನ್ನುಗ್ಗುತ್ತಿದೆ.! ಸೆನ್ಸೆಕ್ಸ್ ಕೂಡ ದಾಖಲೆಯ 32,374.30 ಅಂಶಗಳೊಂದಿಗೆ ದಿನದ ಆರಂಭ ಕಂಡಿದೆ.

ನಿನ್ನೆ ಸೋಮವಾರ ಷೇರುಪೇಟೆಯ ಅಂತ್ಯಕ್ಕೆ ಬಿಎಸ್ಇ ಮತ್ತು ಎನ್ಎಸ್ಇ ಎರಡೂ ಷೇರುಪೇಟೆಗಳು ದಾಖಲೆಯ ವಹಿವಾಟು ನಡೆಸಿದವು.

ಸೋಮವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) ಗರಿಷ್ಠ ಮಟ್ಟವಾದ 32,246 ಅಂಶಗಳಲ್ಲಿ ವಹಿವಾಟು ನಡೆಸಿದ್ದರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ಸಾರ್ವಕಾಲಿಕ ಗರಿಷ್ಠ ಮಟ್ಟ 9,982 ಅಂಶಗಳಿಗೆ ತಲುಪಿ, 9,966 ಅಂಶಗಳಲ್ಲಿ ಅಂತ್ಯ ಕಂಡಿತ್ತು.

ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್ಸಿ ಬ್ಯಾಂಕ್‌ ನಿರೀಕ್ಷೆಗಿಂತಲೂ ಉತ್ತಮವಾದ ನಿವ್ವಳ ಲಾಭ ಗಳಿಸಿವೆ. ಅಲ್ಲದೆ ಉತ್ತಮ ಮುಂಗಾರು ಕೂಡ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ನಡೆಯುವಂತೆ ಮಾಡಿದೆ.

ಷೇರುಗಳಲ್ಲಿ ಹಣ ಹೂಡುವ ಮುನ್ನ ಇಲ್ಲೊಮ್ಮೆ ನೋಡಿ...ಷೇರುಗಳಲ್ಲಿ ಹಣ ಹೂಡುವ ಮುನ್ನ ಇಲ್ಲೊಮ್ಮೆ ನೋಡಿ...

ಷೇರುಪೇಟೆಯಲ್ಲಿ ಗೂಳಿ ಓಟ, ಮೊದಲ ಬಾರಿ 10 ಸಾವಿರ ಅಂಕ ದಾಟಿದ ನಿಪ್ಟಿ!

Read more about: bse nse sensex stock finance news taxes
English summary

Nifty breaches 10,000 points for first time

Creating history, the Nifty today breached the 10,000 level for the first time, while the Sensex hit another record high of 32,374.30 in opening trade led by metal, banking, realty and FMCG stocks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X