For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಸಿಇಒ-ಎಂಡಿ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ! ಯಾಕೆ?

ದೇಶದ ಎರಡನೇ ಅತಿದೊಡ್ಡ ಸಾಪ್ಟವೇರ್ ರಪ್ತು ಸಂಸ್ಥೆ ಇನ್ಫೋಸಿಸ್ ಸಿಇಒ ಹಾಗೂ ಎಂಡಿ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದಾರೆ.ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಐಟಿ ವಲಯಕ್ಕೆ ಸಿಕ್ಕಾ ಶಾಕ್ ನೀಡಿದ್ದಾರೆ!

By Siddu
|

ದೇಶದ ಎರಡನೇ ಅತಿದೊಡ್ಡ ಸಾಪ್ಟವೇರ್ ರಪ್ತು ಸಂಸ್ಥೆ ಇನ್ಫೋಸಿಸ್ ಸಿಇಒ ಹಾಗೂ ಎಂಡಿ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದಾರೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಐಟಿ ವಲಯಕ್ಕೆ ಸಿಕ್ಕಾ ಶಾಕ್ ನೀಡಿದ್ದಾರೆ!

 

ಅಧಿಕೃತ ಘೋಷಣೆ

ಅಧಿಕೃತ ಘೋಷಣೆ

ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ (ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ) ಹುದ್ದೆಗಳಿಗೆ ವಿಶಾಲ್‌ ಸಿಕ್ಕಾ ರಾಜೀನಾಮೆ ನೀಡಿದ್ದಾರೆ ಎಂದು ಇನ್ಫೋಸಿಸ್‌ನ ಅಧಿಕೃತ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಹಂಗಾಮಿ ಸಿಇಒ ಯಾರು?

ಹಂಗಾಮಿ ಸಿಇಒ ಯಾರು?

ಸಿಕ್ಕಾ ರಾಜೀನಾಮೆ ನೀಡಿರುವ ಸಂಧಿಗ್ದ ಸಂದರ್ಭದಲ್ಲಿ ಯು.ಬಿ. ಪ್ರವೀಣ್ ರಾವ್‌ ಹಂಗಾಮಿಯಾಗಿ ಸಿಇಒ ಮತ್ತು ಎಂಡಿ ಹುದ್ದೆಗಳನ್ನು ನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಇನ್ಫೋಸಿಸ್ ನಲ್ಲಿ ಸಿಕ್ಕಾ ಸ್ಥಾನವೇನು?
 

ಇನ್ಫೋಸಿಸ್ ನಲ್ಲಿ ಸಿಕ್ಕಾ ಸ್ಥಾನವೇನು?

ಸಿಇಒ ಹುದ್ದೆಗೆ ರಾಜೀನಾಂಎ ನೀಡಿದ ತರುವಾಯ ವಿಶಾಲ್ ಸಿಕ್ಕಾ ಅವರನ್ನು ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾಗಿ (executive vice-chairman) ನೇಮಕ ಮಾಡಲಾಗಿದೆ. ಈಗಾಗಲೇ ಸಿಕ್ಕಾ ಇನ್ಫೋಸಿಸ್‌ನಲ್ಲಿ ಮೂರು ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

ರಾಜೀನಾಮೆಗೆ ಕಾರಣ?

ರಾಜೀನಾಮೆಗೆ ಕಾರಣ?

ವಿಶಾಲ್ ಸಿಕ್ಕಾ ಹಾಗೂ ನಾರಾಯಣಮೂರ್ತಿಯವರ ಮಧ್ಯೆ ಹಲವಾರು ವಿಚಾರಗಳಲ್ಲಿ ವೈಮನಸ್ಸುಗಳಿರುವುದು ಈ ಹಿಂದೆಯೇ ತಿಳಿದಿತ್ತು. ಆದರೆ ಇತ್ತೀಚಿನ ಸಂದರ್ಭಗಳಲ್ಲಿ ಕಂಪನಿಯನ್ನು ಬಿಟ್ಟು ಹೋಗುತ್ತಿರುವಂತಹ ಉದ್ಯೋಗಿಗಳಿಗೆ ಕೊನೆಯಲ್ಲಿ ಅಧಿಕ ವೇತನ ನೀಡಲಾಗುತ್ತಿತ್ತು. ಈ ಬಗ್ಗೆ ಇನ್ಫೋಸಿಸ್ ಆಡಳಿತ ಮಂಡಳಿ, ಸ್ಥಾಪಕರ ನಡುವೆ ಭಿನ್ನಾಭಿಪ್ರಾಯ ಎದುರಾಗಿತ್ತು ಎನ್ನಲಾಗಿದೆ. ಈ ಪರಿಸ್ಥಿತಿಯಲ್ಲಿಯೇ ವಿಶಾಲ್ ಸಿಕ್ಕಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದು ಮಹತ್ವದ ತಿರುವು ಪಡೆದುಕೊಂಡಿದೆ.

ನಾರಾಯಣಮೂರ್ತಿ ಅಸಮಧಾನ

ನಾರಾಯಣಮೂರ್ತಿ ಅಸಮಧಾನ

ಇನ್ಫೋಸಿಸ್ ಸಂಸ್ಥೆ ಜಾಗತಿಕ ಆರ್ಥಿಕ ಅಸ್ಥಿರತೆ ಕಾರಣದಿಂದಾಗಿ ಆಂತರಿಕ ಸಮಸ್ಯೆಗಳು ಹಾಗೂ ಬಾಹ್ಯ ಸವಾಲುಗಳನ್ನು ಎದುರಿಸುತ್ತಿದೆ. ವಿಶಾಲ್ ಸಿಕ್ಕಾ ಅವಧಿಯಲ್ಲಿ ಇನ್ಫೋಸಿಸ್ ಕಾರ್ಪೊರೇಟ್ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಕಳೆದ ತ್ರೈಮಾಸಿಕಗಳಲ್ಲಿ ಸಂಸ್ಥೆ ಆರ್ಥಿಕ ನಷ್ಟವನ್ನು ಅನುಭವಿಸಿದೆ ಎಂದು ಎನ್‌. ಆರ್‌. ನಾರಾಯಣ ಮೂರ್ತಿ ಅಸಮಧಾನ ವ್ಯಕ್ತಪಡಿಸಿದ್ದರು.

English summary

Vishal Sikka Resigns As Managing Director And CEO Of Infosys

Vishal Sikka has resigned as MD and CEO of Infosys and the board has accepted his resignation with immediate effect, Infosys said in a statement.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X