2 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ನಿಷೇಧ: ಆದಾಯ ತೆರಿಗೆ ಇಲಾಖೆ

ಎರಡು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವ್ಯವಹಾರ ಕೈಗೊಳ್ಳುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ!

ಎರಡು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವ್ಯವಹಾರ ಕೈಗೊಳ್ಳುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ!

ನಿಯಮಗಳನ್ನು ಮೀರಿ 2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರದ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಅಡಿಯಲ್ಲಿ ಕಠಿಣ ದಂಡ ವಿಧಿಸಲಾಗುತ್ತದೆ ಎಂದು ಹೇಳಿದೆ.

ಒಂದು ದಿನದಲ್ಲಿ ಒಬ್ಬ ವ್ಯಕ್ತಿ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಸ್ವೀಕರಿಸುವುದನ್ನು ಅಥವಾ ನೀಡುವುದನ್ನು ನಿ‍ಷೇಧಿಸಲಾಗಿದೆ.

ದಿನದ ವ್ಯವಹಾರ ಮಿತಿ

ದಿನದ ವ್ಯವಹಾರ ಮಿತಿ

ಅದೇ ರೀತಿಯಾಗಿ, ವ್ಯವಹಾರ ಅಥವಾ ವೃತ್ತಿಯ ಖರ್ಚುಗಳಿಗೆ ಸಂಬಂಧಿಸಿದಂತೆ 10,000 ಕ್ಕಿಂತ ಹೆಚ್ಚು ಹಣವನ್ನು ಪಾವತಿಸುವುದು, 20,000 ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಪಡೆಯುವುದು ಅಥವಾ ಮರುಪಾವತಿಸುವುದು ನಿಷೇಧಿಸಲಾಗಿದೆ. ಹಣಕಾಸು ಕಾಯಿದೆ 2017 ಕ್ಕೆ ಅನುಗುಣವಾಗಿ ಏಪ್ರಿಲ್ 1, 2017ರಿಂದ 2ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರವನ್ನು ಸರ್ಕಾರ ನಿಷೇಧಿಸಿದೆ.

ಗೋ ಕ್ಯಾಶ್ ಲೆಸ್

ಗೋ ಕ್ಯಾಶ್ ಲೆಸ್

ನಗದು ಪಾವತಿಯನ್ನು ನಿಷೇಧಿಸಲಾಗಿದೆ! ನಗದುರಹಿತವಾಗಿ ಹೋಗಿ, ಸ್ವಚ್ಛವಾಗಿ ಹೋಗಿ (Go cashless, go clean) ಇದು ಮೂಲ ಸಂದೇಶವಾಗಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಸಾರ್ವಜನಿಕ ಜಾಹೀರಾತುಗಳನ್ನು ನೀಡಿದೆ.

ಕಪ್ಪುಹಣ ತಡೆ

ಕಪ್ಪುಹಣ ತಡೆ

ಕಪ್ಪುಹಣ ತಡೆ, ಭ್ರಷ್ಟಾಚಾರ ನಿಯಂತ್ರಣ, ಖೋಟಾ ನೋಟು ಸಮಸ್ಯೆ ತಡೆಗಾಗಿ ನಗದು ರಹಿತ ವ್ಯವಹಾರಕ್ಕಾಗಿ ಪ್ರೋತ್ಸಾಹಿಸಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ನಿಯಮಗಳನ್ನು ಜಾರಿ ತರಲಾಗುತ್ತಿದೆ. ಕಪ್ಪುಹಣ ವಹಿವಾಟು ಕಂಡುಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡುವಂತೆ ತೆರಿಗೆ ಇಲಾಖೆ ಕೇಳಿಕೊಂಡಿದೆ. ಬ್ಲಾಕ್ ಮನಿ ಗೆ ಸಂಬಂಧಿಸಿದ ವರದಿಗಳನ್ನು [email protected] ಈ ವಿಳಾಸ ಇಮೇಲ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+