ಬಿಎಸ್ಎನ್ಎಲ್: ದಿನಕ್ಕೆ 1 ರೂ. ದರದಲ್ಲಿ ಇ-ಮೇಲ್ ಸೇವೆ ಪ್ರಾರಂಭ

Written By: Siddu
Subscribe to GoodReturns Kannada

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ಡೇಟಾ ಇನ್ಫೋಸಿಸ್ ಸಹಭಾಗಿತ್ವದಲ್ಲಿ ದಿನಕ್ಕೆ 1 ರೂ. ದರದಲ್ಲಿ ಕಾರ್ಪೊರೇಟ್ ಇ-ಮೇಲ್ ಸೇವೆಯನ್ನು ಪ್ರಾರಂಭಿಸಿದೆ.

ಇ-ಮೇಲ್ ಸೇವೆ ಉದ್ದೇಶ

ತನ್ನ ಗ್ರಾಹಕರ ಡೇಟಾ ಗೌಪ್ಯತೆ ಮತ್ತು ಭದ್ರತೆಗಾಗಿ ಇ-ಮೇಲ್ ಸೇವೆಗಳನ್ನು ಪ್ರಾರಂಭಿಸಿದೆ ಎಂದು ಬಿಎಸ್ಎನ್ಎಲ್ ಹೇಳಿದೆ. ಉದ್ಯಮಿಗಳ ಮೇಲ್ ಖಾತೆಗಳು ಭದ್ರತೆ ಪರಿಕರಗಳನ್ನು ಹಾಗು ಡ್ಯುಯಲ್ ಅಥೆಂಟಿಕೇಷನ್ ಹೊಂದಿರಲಿದೆ. ಅಲ್ಲದೆ ಹ್ಯಾಕ್ ಮಾಡಲಾಗದ ರೀತಿಯಲ್ಲಿ ನಿರ್ಬಂಧಿಸಲಾಗುತ್ತದೆ.

ವಾರ್ಷಿಕ ಶುಲ್ಕ

ಗ್ರಾಹಕರು ವಾರ್ಷಿಕ ಶುಲ್ಕ ರೂ. 365 ನೀಡಿದಲ್ಲಿ ಪ್ರತಿ ಇ-ಮೇಲ್ ಐಡಿಗೆ 10gb ಸ್ಟೋರೇಜ್ ಸಿಗಲಿದೆ. ಒಂದು ವರ್ಷದಲ್ಲಿ ಒಮ್ಮೆ ಮಾತ್ರ ಪಾವತಿ ಮಾಡಬೇಕಾಗುತ್ತದೆ. ಇಮೇಲ್ ಸೇವೆಗಾಗಿ ಪ್ರತಿದಿನ 1 ರೂಪಾಯಿ ಪಾವತಿ ಮಾಡಿದಂತಾಗುತ್ತದೆ.

ಹೆಚ್ಚಿನ GB/ಸ್ಟೋರೇಜ್ ಬೆಲೆ

10gbಗಿಂತ ಹೆಚ್ಚಿನ ಸ್ಟೋರೇಜ್ ಬೇಕಾದವರು ಹೆಚ್ಚುವರಿ 5gb ಸ್ಟೋರೇಜ್ ನ್ನು ಪಡೆಯಬಹುದು. ಇದಕ್ಕಾಗಿ ವಾರ್ಷೀಕ ರೂ. 500 ಪಾವತಿಸಬೇಕಾಗುತ್ತದೆ ಎಂದು ಡೇಟಾ ಇನ್ಫೋಸಿಸ್ ಸಿಇಒ ಅಜಯ್ ಡಾಟಾ ಹೇಳಿದ್ದಾರೆ.

English summary

BSNL starts corporate e-mail service for Re 1 per day

State-run telecom firm BSNL today started corporate e-mail service for Re 1 per day in partnership with Jaipur-based firm Data Infosys.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns